
ನವದೆಹಲಿ(ಫೆ.20): ರೈತ ಪ್ರತಿಭಟನೆಗೆ ಉಗ್ರ ಸ್ವರೂಪ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ ಟೂಲ್‌ಕಿಟ್ ಡಾಕ್ಯುಮೆಂಟ್ ಇದೀಗ ಹಲವರ ಕುಣಿಕೆ ಬಿಗಿಗೊಳಿಸುತ್ತಿದೆ. ಟೂಲ್‌ಕಿಟ್ ನಿರ್ಮಿಸಿದವರ ಪೈಕಿ ಬೆಂಗಳೂರಿನ ಮೂಲದ 21 ವರ್ಷದ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಜಾಮೀನಿಗಾಗಿ ಅಲೆಯುತ್ತಿರುವ ದಿಶಾ ರವಿ ಅರ್ಜಿಯನ್ನು ಫೆಬ್ರವರಿ 23ಕ್ಕೆ ದೆಹಲಿಯಾ ಪಟಿಯಾಲ ಕೋರ್ಟ್ ಕಾಯ್ದಿರಿಸಿದೆ.
ದಿಶಾಗೆ ವಿದೇಶದಿಂದ ಸಪೋರ್ಟ್ : ಜತೆ ನಿಲ್ಲುವ ಘೋಷಣೆ.
ಜಾಮೀನಿಗಾಗಿ ಹರಸಾಹಸ ಪಟ್ಟಿದ್ದ ದಿಶಾ ರವಿಗೆ ಮತ್ತೆ ಹಿನ್ನಡೆಯಾಗಿದೆ. ಕಾರಣ ಶುಕ್ರವಾರ(ಫೆ.20) ಕೋರ್ಟ್ 3 ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸಿತ್ತು. ಇದೀಗ ವಾದ ವಿವಾದ ಆಲಿಸಿದ ಕೋರ್ಟ್, ಜಾಮೀನು ಅರ್ಜಿ ಕುರಿತ ತೀರ್ಪನ್ನು ಫೆ.23ಕ್ಕೆ ಕಾಯ್ದಿರಿಸಿದೆ.
ಟೂಲ್‌ಕಿಟ್ ಪ್ರಕರಣ: ದಿಶಾ ರವಿಗೆ ಬೇಲ್ ಇಲ್ಲ, ಮತ್ತೆ ಮೂರು ದಿನ ನ್ಯಾಯಾಂಗ ಬಂಧನ!
ದಿಶಾ ರವಿಗೆ ಜಾಮೀನು ನೀಡುವುದರಿಂದ ಸಾಕ್ಷ್ಯ ನಾಶಗೊಳಿಸುವ ಸಾಧ್ಯತೆ ಇದೆ. ದಿಶಾ ರವಿ ಟೂಲ್‌ಕಿಟ್ ರಚಿಸಲು ಆರಂಭಿಸಿದ್ದ ವ್ಯಾಟ್ಸ್ಆ್ಯಪ್ ಗ್ರೂಪ್ ಡಿಲೀಟ್ ಮಾಡಿದ್ದರು. ಈ ದಾಖಲೆಗಳನ್ನು ದೆಹಲಿ ಪೊಲೀಸರ ಪರ ವಿಚಾರಣೆ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ವಾದ ಮಂಡಿಸಿದ್ದಾರೆ.
ದಿಶಾ ರವಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಎಸ್.ವಿ.ರಾಜು ಹೇಳಿದ್ದಾರೆ. ಇದರ ನಡುವೆ ದಿಶಾ ರವಿಗೆ, ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಗ್ರೇಟಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ