Latest Videos

ಅಪ್ಪನ ಆಸೆ ಈಡೇರಿಸಲು ಆಸ್ಪತ್ರೆಯ ಐಸಿಯುನಲ್ಲೇ ನಡೆಯಿತು ಮದುವೆ

By Anusha KbFirst Published Jun 16, 2024, 5:01 PM IST
Highlights

ಇಲ್ಲೊಂದು ಕಡೆ ಮಗಳ ಮದುವೆ ಹತ್ತಿರದಲ್ಲಿದ್ದಾಗ ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿದ ವ್ಯಕ್ತಿಯೊಬ್ಬರಿಗೆ ತಮ್ಮ ಮಗಳ ಮದುವೆ ನೋಡುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ವೈದ್ಯರು. ಇದಕ್ಕಾಗಿ ವೈದ್ಯರು ಐಸಿಯುವನ್ನೇ ಮದುವೆ ಮನೆಯಾಗಿ ಬದಲಾಯಿಸಿದ್ದಾರೆ

ಲಕ್ನೋ: ಸಾಯೋ ಮುಂಚೆ ಮಕ್ಕಳ ಮದ್ವೆ ನೋಡಿ ಅಥವಾ  ಮಾಡಿ ಸಾಯ್ಬೇಕು ಅನ್ನೋದು ಅನೇಕ ಇಳಿವಯಸ್ಸಿನಲ್ಲಿರುವ ಪೋಷಕರ ಅಳಲು, ಕೆಲವೊಮ್ಮೆ ಅಜ್ಜ ಅಜ್ಜಿ ಕೂಡ ಅಯ್ಯೋ ನಿನ್ ಮದ್ವೆ ನೋಡಿ ಸಾಯ್ತಿನಿ ಮಗ ಅಂತ ಮೊಮ್ಮಕ್ಕಳ ಮದುವೆಗೆ ಕಾತುರದಿಂದ ಕಾಯುವುದುಂಟು. ಅದೊಂದು ಜೀವನದ ಕೊನೆಯಾಸೆ ಎಂಬಂತೆ ಜೀವ ಬಿಡಲು ಕಾಯುವ ಹಿರಿಜೀವಗಳು ಅದೊಂದು ಕ್ಷಣಕ್ಕಾಗಿ ಕಾಯ್ತಿರ್ತಾರೆ. 

ಆದರೆ ಇಲ್ಲೊಂದು ಕಡೆ ಮಗಳ ಮದುವೆ ಹತ್ತಿರದಲ್ಲಿದ್ದಾಗ ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿದ ವ್ಯಕ್ತಿಯೊಬ್ಬರಿಗೆ ತಮ್ಮ ಮಗಳ ಮದುವೆ ನೋಡುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ವೈದ್ಯರು. ಇದಕ್ಕಾಗಿ ವೈದ್ಯರು ಐಸಿಯುವನ್ನೇ ಮದುವೆ ಮನೆಯಾಗಿ ಬದಲಾಯಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ವಿಶೇಷ ಮದುವೆ ನಡೆದಿದೆ. ಇನ್ನೇನು ಮಗಳ ಮದುವೆ ನಿಶ್ಚಯವಾಗಿ ಮದುವೆ ಡೇಟ್ ಫಿಕ್ಸ್ ಆದ ನಂತರ ಮೊಹಮ್ಮದ್ ಇಕ್ಬಾಲ್ ಎಂಬುವವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಸಾಯೋ ಹೊತ್ತಲ್ಲೂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗೆ ಗ್ರೇಡ್ ನೀಡಿದ ಟೀಚರ್!

ಇತ್ತ ಮಗಳ ಮದುವೆ ನೋಡಬೇಕು ಎಂಬ ಆಸೆ ಅವರದಾಗಿದ್ದರೆ, ಅತ್ತ ಅಪ್ಪ ನಮ್ಮ ಮದುವೆ ಸಂಭ್ರಮದ ವೇಳೆ ಜೊತೆಗಿರಬೇಕು ಎಂಬ ಬಯಕೆ ಮಕ್ಕಳದಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಕುಟುಂಬದವರೆಲ್ಲಾ ಜೊತೆ ಸೇರಿ ಐಸಿಯುನಲ್ಲೇ ಅಪ್ಪ ಮಲಗಿದ್ದ ಬೆಡ್ ಪಕ್ಕದಲ್ಲೇ ಮದುವೆಯಾಗಲು ನಿರ್ಧರಿಸಿದ್ದಾರೆ. ಅದಕ್ಕೆ ವೈದ್ಯರ ಸಹಮತಿಯನ್ನು ಕೇಳಿದ್ದಾರೆ. ಅದರಂತೆ ವೈದ್ಯರು ಕುಟುಂಬದ ಅಭಿಲಾಷೆಗೆ ಓಕೆ ಎಂದಿದ್ದು, ಪರಿಣಾಮ ಐಸಿಯುನಲ್ಲೇ ಮದ್ವೆ ನಡೆದಿದೆ.  ಲಕ್ನೋದ ಇರಾ ಮೆಡಿಕಲ್ ಕಾಲೇಜು ಈ ಅಪರೂಪದ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.

ಲಕ್ನೋ ಚೌಕ್‌ನ ನಿವಾಸಿಯಾದ ಮೊಹಮ್ಮದ್ ಇಕ್ಬಾಲ್ ಅವರ ಮಗಳ ಮದುವೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮೌಲ್ವಿಯೊಬ್ಬರ ಸಮ್ಮುಖದಲ್ಲಿ ಸರಳವಾಗಿ ನಡೆದಿದೆ. ಐಸಿಯು ಆವರಣದಲ್ಲಿ ವೈದ್ಯರ ಸಹಕಾರದೊಂದಿಗೆ ಮೌಲ್ವಿಯೊಬ್ಬರು ನಿಖಾಃ ಮಾಡಿದ್ದಾರೆ. ಅಪ್ಪನ ಮೇಲಿನ ಪ್ರೀತಿಗಾಗಿ ಇಡೀ ಕುಟುಂಬ ಮಾಡಿದ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈಗ ಅನೇಕರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಇತ್ತ ಮಗಳ ಮದುವೆಯ ಜೊತೆಗೆ ತಂದೆಯ ಕ್ಷೇಮಕ್ಕಾಗಿ ಅನೇಕರು ಹಾರೈಸುತ್ತಿದ್ದಾರೆ.

ಹಾಸನ ಆಸ್ಪತ್ರೆಯ ನವಜಾತ ಶಿಶು ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್, ತಪ್ಪಿದ ಬಹುದೊಡ್ಡ ದುರಂತ!

A hospital in UP's Lucknow organised an ICU Wedding to fulfill ailing father's wish to see his daughters getting married. pic.twitter.com/qSUf9SAnfH

— Piyush Rai (@Benarasiyaa)

 

click me!