
ಲಖನೌ (ಜನವರಿ 6, 2024): ಉತ್ತರ ಪ್ರದೇಶದ ಫರಿದಾಬಾದ್‌ನ ಚಂದನ್ ಕುಮಾರ್ ಮತ್ತು ದೇವೇಂದ್ರ ಸಿಂಗ್ ಎಂಬ ಇಬ್ಬರು ಪ್ರಯಾಣಿಕರು ಸಗಣಿ ನೆರವಿನಿಂದ ರೈಲಿನಲ್ಲಿ ಚಳಿ ಕಾಯಿಸಿಕೊಳ್ಳಲು ಬೆಂಕಿ ಹೊತ್ತಿಸಿರುವ ಘಟನೆ ನಡೆದಿದೆ.
ದೆಹಲಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ರೀತಿ ಚಳಿ ಕಾಯಿಸಿಕೊಳ್ಳಲು ಸಗಣಿಯ ಬೆರಣಿ ನೆರವಿನಿಂದ ಬೆಂಕಿ ಕಾಯಿಸಿಕೊಂಡಿದ್ದಾರೆ. ಅಸ್ಸಾಂನ ಸಂಪರ್ಕ ಕ್ರಾಂತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಸಾವಿರಾರು ಜನರ ಪ್ರಾಣಕ್ಕೆ ಅಪಾಯವನ್ನುಂಟುಮಾಡುವ ಘಟನೆ ಗುರುವಾರ ನಡೆದಿದೆ.
ಇದನ್ನು ಓದಿ: ಕೆಂಗೇರಿ ಬಳಿ ಎಕ್ಸ್‌ಪ್ರೆಸ್ ರೈಲು ಮುಕ್ಕಾಲು ಗಂಟೆ ನಿಲುಗಡೆ, ಜ್ಞಾನಭಾರತಿ ಮೆಟ್ರೋ ಬಳಿ ನಿಲ್ಲಿಸುವಂತೆ ಒತ್ತಾಯ
ಈ ಸಂಬಂಧ 20 ರ ಆಸುಪಾಸಿನಲ್ಲಿರುವ ಚಂದನ್ ಕುಮಾರ್ ಮತ್ತು ದೇವೇಂದ್ರ ಸಿಂಗ್ ರನ್ನು ಬಂಧಿಸಲಾಗಿದೆ. ಯುಪಿಯ ಅಲಿಗಢದಲ್ಲಿ ತಮ್ಮ ಬಂಧನದ ನಂತರ ಅಸಹಾಯಕತೆಯನ್ನು ತೋಡಿಕೊಂಡ ಅವರು ಸಾಮಾನ್ಯ ಕಾಯ್ದಿರಿಸದ ಕೋಚ್‌ನೊಳಗೆ ತುಂಬಾ ಚಳಿ ಇತ್ತು. ಈ ಹಿನ್ನೆಲೆ ಚಳಿ ನಿವಾರಿಸಲು ಏನಾದರೂ ಮಾಡಬೇಕಾಗಿತ್ತು ಎಂದಿದ್ದಾರೆ.
ಈ ಪ್ರದೇಶದಲ್ಲಿ ಕನಿಷ್ಠ ತಾಪಮಾನವು ಸುಮಾರು 10 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ನಾವು ಚಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ನಾವು ಬೆಂಕಿ ಹೊತ್ತಿಸಿದ್ದೆವು ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳಿಗೆ ಚಂದನ್ ಮತ್ತು ದೇವೇಂದ್ರ ಹೇಳಿದ್ದಾರೆ. ಇಬ್ಬರ ವಿರುದ್ಧ ಐಪಿಸಿ ಮತ್ತು ರೈಲ್ವೆ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರ್‌ಪಿಎಫ್‌ನ ಅಲಿಗಢ ಪೋಸ್ಟ್ ಕಮಾಂಡರ್ ರಾಜೀವ್ ಶರ್ಮಾ ತಿಳಿಸಿದ್ದಾರೆ.
ಆಯೋಧ್ಯೆ ರೈಲಿನಲ್ಲಿ ನಿದ್ರೆಗೆ ಜಾರಿದ ಪತಿ ಸಾವು, 13 ಗಂಟೆ ಮೃತದೇಹ ಜೊತೆ ಪ್ರಯಾಣಿಸಿದ ಪತ್ನಿ!
ಅಲ್ಲದೆ, ಈ ಘಟನೆಗೆ ಸಂಬಂಧಿಸಿದಂತೆ 14 ಇತರೆ ಪ್ರಯಾಣಿಕರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಅವರನ್ನು ಪ್ರಶ್ನೆ ಮಾಡಿ ಬಳಿಕ ಎಚ್ಚರಿಕೆ ನೀಡಿ ಬಿಟ್ಟು ಕಳಿಸಲಾಗಿದೆ ಎಂದು ರಾಜೀವ್ ಶರ್ಮಾ ಹೇಳಿದ್ದಾರೆ.
ಚಲಿಸುತ್ತಿರುವ ರೈಲಿನೊಳಗೆ ಹೊಗೆ ಬರುತ್ತಿರುವುದನ್ನು ಕರ್ತವ್ಯದಲ್ಲಿದ್ದ ಕೆಲವು ಆರ್‌ಪಿಎಫ್ ಸಿಬ್ಬಂದಿ ಗಮನಿಸಿದರು. ಮತ್ತು ಒಂದು ಗುಂಪು ಬಾನ್‌ಫೈರ್ ಸುತ್ತ ಇರುವುದನ್ನು ಕಂಡುಕೊಂಡರು. ಬಳಿಕ ಪೊಲೀಸರು ಈ ಬಗ್ಗೆ ಪ್ರಯಾಣಿಕರನ್ನು ವಿಚಾರಿಸಿ, ನಂತರ ಚಂದನ್ ಮತ್ತು ದೇವೇಂದ್ರನ ಬಳಿಗೆ ತೆರಳಿದರು.
ರೈಲಿನಲ್ಲಿ ಮಲಗಿದ್ದ ಯುವತಿ ಮುಖದ ಮೇಲೆ ಹಸ್ತಮೈಥುನ ಮೂಲಕ ವೀರ‍್ಯಸ್ಖಲನ ಮಾಡಿದ ಕಾಮುಕ!
ಅಲ್ಲದೆ, ಬೆಂಕಿಯನ್ನು ಗಮನಿಸಿದ ಪೊಲೀಸ್ ತಂಡ, ಆಲಿಗಢದಲ್ಲಿರುವ ಹತ್ತಿರದ ಆರ್‌ಪಿಎಫ್ ಬೇಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲಿ ಆರೋಪಿಗಳನ್ನು ಬಂಧಿಸಿ ಮತ್ತು ಬೆಂಕಿ ನಂದಿಸಲು ಹಾಗೂ ಸಂಭವಿಸಿರುವ ಹಾನಿ ಬಗ್ಗೆ ತಡೆಗಟ್ಟುವ ಕ್ರಮ ಕೈಗೊಳ್ಳಲು ರೈಲನ್ನು ಕೆಲ ಸಮಯ ಅಲ್ಲೇ ನಿಲ್ಲಿಸಲಾಯಿತು.
ಜತೆಗೆ, ಸಗಣಿಯನ್ನು ನೋಡಿಯೂ ಪೊಲೀಸರು ಶಾಕ್ ಆಗಿದ್ದಾರೆ. ಅಂತಹ ದಹಿಸುವ ವಸ್ತುಗಳನ್ನು ರೈಲಿಗೆ ತಂದಿದ್ದಕ್ಕೆ ಆತಂಕಗೊಂಡಿದ್ದಾರೆ. ಇಂತಹ ಯಾವುದೇ ವಸ್ತುಗಳನ್ನು ಪ್ಲಾಟ್‌ಫಾರ್ಮ್‌ಗಳಲ್ಲಿ ಅಥವಾ ನಿಲ್ದಾಣಗಳ ಬಳಿ ಎಲ್ಲಿಯೂ ಮಾರಾಟ ಮಾಡುವುದಿಲ್ಲ. ಆರೋಪಗಳೇ ಇದನ್ನು ತಮ್ಮೊಂದಿಗೆ ತಂದಿರಬೇಕು. ಹೆಚ್ಚಿನ ತನಿಖೆಗಳ ನಡೆಯುತ್ತಿವೆ ಎಂದೂ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ