ಸಂಸತ್ ಒಳಗೆ ಸ್ಫೋಟ ಪ್ರಕರಣ : ಮನೋರಂಜನ್‌ ಸೇರಿ ಐವರ ಮಂಪರು ಪರೀಕ್ಷೆಗೆ ಕೋರ್ಟ್‌ ಸಮ್ಮತಿ

By Kannadaprabha News  |  First Published Jan 6, 2024, 10:04 AM IST

ಸಂಸತ್ತಿನಲ್ಲಿ ನಡೆದ ಹೊಗೆ ದಾಳಿ ಪ್ರಕರಣದ 6 ಆರೋಪಿಗಳ ಪೈಕಿ ಮೈಸೂರಿನ ಮನೋರಂಜನ್‌ ಸೇರಿದಂತೆ 5 ಜನರು ತಮ್ಮನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ತಮ್ಮ ಪರೀಕ್ಷೆಗೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಐವರು ಆರೋಪಿಗಳಿಗೆ ಮಂಪರು ಪರೀಕ್ಷೆ ನಡೆಸಲು ದೆಹಲಿ ನ್ಯಾಯಾಲಯವು ತನಿಖಾಧಿಕಾರಿಗಳಿಗೆ ಅನುಮತಿ ನೀಡಿದೆ.


ನವದೆಹಲಿ: ಸಂಸತ್ತಿನಲ್ಲಿ ನಡೆದ ಹೊಗೆ ದಾಳಿ ಪ್ರಕರಣದ 6 ಆರೋಪಿಗಳ ಪೈಕಿ ಮೈಸೂರಿನ ಮನೋರಂಜನ್‌ ಸೇರಿದಂತೆ 5 ಜನರು ತಮ್ಮನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ತಮ್ಮ ಪರೀಕ್ಷೆಗೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಐವರು ಆರೋಪಿಗಳಿಗೆ ಮಂಪರು ಪರೀಕ್ಷೆ ನಡೆಸಲು ದೆಹಲಿ ನ್ಯಾಯಾಲಯವು ತನಿಖಾಧಿಕಾರಿಗಳಿಗೆ ಅನುಮತಿ ನೀಡಿದೆ.

ಐವರು ಆರೋಪಿಗಳನ್ನು ಹೊರತುಪಡಿಸಿ, ಪ್ರಕರಣದ ಏಕೈಕ ಮಹಿಳಾ ಆರೋಪಿ ನೀಲಂ ಆಜಾದ್‌ ಮಾತ್ರ ತನ್ನ ಮಂಪರು ಪರೀಕ್ಷೆಗೆ ಸಮ್ಮತಿ ನೀಡಿಲ್ಲ. ಇದೇ ವೇಳೆ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ 8 ದಿನಗಳ ಕಾಲ ವಿಸ್ತರಣೆ ಮಾಡಿದೆ. ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಸ್ತರಣೆ ಕೋರಿ ಹಾಗೂ ಮಂಪರು ಪರೀಕ್ಷೆಗೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ವಿಚಾರಣೆಯ ಬಳಿಕ ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೋಲ್ ಧನರಾಜ್ ಶಿಂಧೆ, ನೀಲಂ ಆಜಾದ್, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 8 ದಿನಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಸಂಸತ್ ದಾಳಿಕೋರರಿಗೆ ಪಾಸ್‌; ಪ್ರತಾಪ್‌ ಸಿಂಹ ಹೇಳಿಕೆ ದಾಖಲು: ದಾಳಿ ವೇಳೆ ಬಿಜೆಪಿ ಸಂಸದರು ಪರಾರಿ; ರಾಹುಲ್‌ ಗಾಂಧಿ ವ್ಯಂಗ್ಯ

ಚಳಿಗಾಲದ ಅಧಿವೇಶನದ ಸಮಯದಲ್ಲಿ ಡಿ.13ರಂದು ಈ ಆರೋಪಿಗಳು ಸಂಸತ್‌ ಭವನದಲ್ಲಿ ಹೊಗೆ ಬಾಂಬ್‌ ಸ್ಫೋಟ ಮಾಡಿದ್ದರು.

Tap to resize

Latest Videos

ಲೋಕ ಚುನಾವಣೆ ಸಿದ್ಧತೆ: ಜ.7ರಿಂದ ಚುನಾವಣಾ ಆಯೋಗದ ರಾಜ್ಯ ಪ್ರವಾಸ

ನವದೆಹಲಿ: ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ವಿವಿಧ ರಾಜ್ಯಗಳ ಸನ್ನದ್ಧ ಸ್ಥಿತಿಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ಜ.7ರಿಂದ ವಿವಿಧ ರಾಜ್ಯಗಳ ಪ್ರವಾಸ ಆರಂಭಿಸಲಿದೆ. ಇದರ ಮೊದಲ ಭಾಗವಾಗಿ ಜ.7ರಿಂದ ನಾಲ್ಕು ದಿನಗಳ ಕಾಲ ದಕ್ಷಿಣ ಭಾರತದ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮತ್ತು ಚುನಾವಣಾ ಆಯುಕ್ತರಾದ ಅನೂಪ್‌ಚಂದ್ರ ಪಾಂಡೆ ಮತ್ತು ಅರುಣ್‌ ಗೋಯೆಲ್ ಅವರ ತಂಡ ತೆರಳಿ ಪರಿಶೀಲನೆ ನಡೆಸಲಿದೆ. ಅಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು, ರಾಜಕೀಯ ನಾಯಕರು, ಹಿರಿಯ ಅಧಿಕಾರಿಗಳು ಮತ್ತು ತಳಮಟ್ಟದ ಚುನಾವಣಾ ಸಿಬ್ಬಂದಿಯ ಜೊತೆ ತಯಾರಿಯ ಕುರಿತು ಸಮಾಲೋಚನೆ ನಡೆಸಲಿದೆ. ಉಪ ಚುನಾವಣಾ ಆಯುಕ್ತರು ಈಗಾಗಲೇ ಒಮ್ಮೆ ಎಲ್ಲ ರಾಜ್ಯಗಳಲ್ಲಿ ತಯಾರಿಯನ್ನು ಪರಿಶೀಲನೆ ಮಾಡಿ ಬಂದಿದ್ದಾರೆ.

ಸಂಸತ್ ಭದ್ರತೆಯಲ್ಲಿ ದೊಡ್ಡ ಬದಲಾವಣೆ: ದೆಹಲಿ ಪೊಲೀಸರ ಬದಲು ಇನ್ಮುಂದೆ ಸಿಐಎಸ್‌ಎಫ್‌ ರಕ್ಷಣೆ

ಆಪ್‌ಗೆ ಮತ್ತೊಂದು ಸಂಕಷ್ಟ: ಕಳಪೆ ಔಷಧ ಕೇಸಲ್ಲಿ ಸಿಬಿಐ ತನಿಖೆಗೆ ಕೇಂದ್ರದ ಆದೇಶ

ನವದೆಹಲಿ: ದೆಹಲಿ ಸರ್ಕಾರದ ಆಸ್ಪತ್ರೆಗಳಿಗೆ ಕಳಪೆ ಗುಣಮಟ್ಟದ ಔಷಧ ಪೂರೈಕೆ ಮತ್ತು ಅದೇ ಔಷಧಗಳ್ನು ಮೊಹಲ್ಲಾ ಕ್ಲಿನಿಕ್‌ಗಳಿಗೆ ಪೂರೈಕೆ ಮಾಡಿ ಭಾರೀ ವಂಚನೆ ಎಸಗಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಈ ಕುರಿತು ಉಪರಾಜ್ಯಪಾಲ ಸಕ್ಸೇನಾ ಸಲಹೆ ಬೆನ್ನಲ್ಲೇ ಈ ಆದೇಶ ಹೊರಡಿಸಲಾಗಿದೆ. ಹೀಗಾಗಿ ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಹಲವು ಸಚಿವರು ಜೈಲು ಪಾಲಾಗಿರುವುದನ್ನು ನೋಡಿರುವ ದೆಹಲಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.

ದಿಲ್ಲಿಯ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ವಿತರಿಸಲಾಗುವ ಔಷಧಿಗಳು ಗುಣಮಟ್ಟದ ಪ್ರಮಾಣಿತ ಪರೀಕ್ಷೆಗಳಲ್ಲಿ ವಿಫಲವಾಗಿವೆ. ಅಲ್ಲದೇ ಇಲ್ಲಿ ನೀಡಲಾಗುವ ಔಷಧಿಗಳು ಜೀವಕ್ಕೆ ಅಪಾಯಕಾರಿಯಾಗಿವೆ ಎಂದು ಈ ಹಿಂದೆ ಸಕ್ಸೇನಾ ಆರೋಪಿಸಿದ್ದರು.

click me!