
ಕೋಲ್ಕತಾ(ಜು.08); ಬಿಜೆಪಿ ವಿವಾದಿತ ನಾಯಕಿ ನೂಪುರ್ ಶರ್ಮಾ ವಿರುದ್ಧ ಮತ್ತೊಬ್ಬ ನಾಯಕ ನಾಲಿಗೆ ಹರಿಬಿಟ್ಟಿದ್ದಾನೆ. ನೂಪುರ್ ಶರ್ಮಾ ತಲೆ ಕಡಿದು ತಂದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮಮತಾ ಬ್ಯಾನರ್ಜಿಯ ಟಿಎಂಸಿ ಪಕ್ಷದ ಸಂಸದ ವಾಸಿಮ್ ರಝಾ ಘೋಷಿಸಿದ್ದಾನೆ. ಇದು ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿದೆ.
ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆ, ಹಿಂಸಾಚಾರ ನಡೆದಿದೆ. ಇದೀಗ ನೂಪುರ್ ಬೆಂಬಲಿಸಿದವರ ಹತ್ಯೆಗಳು ನಡೆದಿದೆ. ಈ ಸಂಘರ್ಷಕ್ಕೆ ಇಷ್ಟಕ್ಕೆ ತಣ್ಣಗಾಗಲು ಕೆಲ ಮೂಲಭೂತವಾದಿಗಳು ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ನೂಪುರ್ ಶರ್ಮಾ ಕಲೆ ಕಡೆಯುವಂತೆ ಪ್ರಚೋದಿಸಿ ವಿವಾದ ಸೃಷ್ಟಿಸಲಾಗಿದೆ.
ನೂಪುರ್ ಶರ್ಮ ತಲೆ ಕತ್ತರಿಸುವ ಹೇಳಿಕೆ ನೀಡಿದ್ದ ಸಲ್ಮಾನ್ ಚಿಸ್ತಿ ಬಂಧನ!
ನೂಪುರ್ ಶರ್ಮಾ ಶರ್ಮಾಗೆ ಸಾವಿರಕ್ಕೂ ಹೆಚ್ಚು ಬೆದರಿಕೆ ಬಂದಿದೆ. ಇದೇ ವೇಳೆ ನೂಪುರ್ ಬೆಂಬಲಕ್ಕೆ ನಿಂತವರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ. ಇದೀಗ ರಾಜಕೀಯ ನಾಯಕರು ಇದಕ್ಕೆ ತುಪ್ಪು ಸುರಿದು ದೇಶದಲ್ಲಿ ಕೋಮಸಂಘರ್ಷಕ್ಕೆ ಹೊಸ ದಾರಿ ಮಾಡಿಕೊಡುತ್ತಿದ್ದಾರೆ.
ನೂಪುರ್‌ಗೆ ಶಿರಚ್ಛೇದ ಬೆದರಿಕೆ ಹಾಕಿದ್ದ ಒಬ್ಬನ ಬಂಧನ
ಪ್ರವಾದಿ ಮೊಹಮ್ಮದ್ ಅವಹೇಳನ ಮಾಡಿದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಶಿರಚ್ಛೇದ ಬೆದರಿಕೆ ಹಾಕಿದ ವ್ಯಕ್ತಿಯೊಬ್ಬನನ್ನು ಗುರುವಾರ ಇಲ್ಲಿ ಬಂಧಿಸಲಾಗಿದೆ. ನಾಸೀರ್ ಹುಸೇನ್ ಎಂಬ ವ್ಯಕ್ತಿ ಶಿರಚ್ಛೇದ ಬೆದರಿಕೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಒಂದು ಗಂಟೆಯಲ್ಲೇ ಅವರನ್ನು ಬಂಧಿಸಲಾಗಿದೆ. ನಾಸೀರ್ ವಿಡಿಯೋದಲ್ಲಿ ಬೆದರಿಕೆ ಹಾಕಿದ್ದು, ಎರಡು ಕೋಮುಗಳ ನಡುವೆ ಉದ್ವಿಗ್ನತೆಗೆ ಪ್ರಚೋದಿಸಿದ್ದ ಎಂದು ಪೊಲೀಸರು ಹೇಳಿದ್ದರೆ. ‘ಕೋಮುಗಲಭೆ ಪ್ರಚೋದಿಸುವ ಯಾವುದೇ ಕೃತ್ಯಗಳನ್ನು ಉ. ಪ್ರ. ಸರ್ಕಾರ ಸಹಿಸುವುದಿಲ್ಲ ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಈ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದರು.
ನೂಪುರ್‌ಗೆ ಬೆಂಬಲ ಸೂಚಿಸಿದ ಟಿ ಸ್ಟಾಲ್ ಹಿಂದೂ ಯುವಕನ ಮೇಲೆ 20 ಮಂದಿಯಿಂದ ಭೀಕರ ದಾಳಿ!
ನೂಪುರ್ ನಾಲಿಗೆ ತನ್ನಿ, 2 ಕೋಟಿ ಪಡೆಯಿರಿ: ಹರಾರಯಣ ವ್ಯಕ್ತಿ ಘೋಷಣೆ
ಪ್ರವಾದಿ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ವಿರುದ್ಧ ಹೇಳಿಕೆಗಳ ಸರಣಿ ಮುಂದುವರೆದಿದ್ದು, ಹರಾರಯಣದ ಮೇವಾತ್‌ನ ವ್ಯಕ್ತಿಯೊಬ್ಬನು ನೂಪುರ್ ನಾಲಿಗೆ ಸೀಳಿದವರಿಗೆ 2 ಕೋಟಿ ರು. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ ವಿಡಿಯೋ ವೈರಲ್ ಆಗಿದೆ.
‘ಇಡೀ ಮೇವಾತ್ ಪರವಾಗಿ ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾಳ ನಾಲಿಗೆಯನ್ನು ಕತ್ತರಿಸಿ. ನಾಲಿಗೆ ತನ್ನಿ, 2 ಕೋಟಿ ಪಡೆಯಿರಿ. ಇದನ್ನು ಈಗಲೇ ಮಾಡಿ ತೋರಿಸಿ, ತಕ್ಷಣ ಹಣ ಪಡೆಯಿರಿ’ ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾನೆ.
ಈ ವಿಡಿಯೋ ಪೊಲೀಸರಿಗೆ ಕೂಡಾ ತಲುಪಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ ಇಂತಹ ದ್ವೇಷ ಹರಡುವ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ ಎಂದು ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ