
ನವದೆಹಲಿ (ಅ.17): ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಜೊತೆಗಿನ ವೈಯಕ್ತಿಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟ್ರೋಲಿಗರ ಫೇವರಿಟ್ ಆಗಿದ್ದಾರೆ. ತಮ್ಮ ವೈಯಕ್ತಿಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಹುವಾ ಮೊಯಿತ್ರಾ, ಬಂಗಾಳದ ಮಹಿಳೆಯರು ಜೀವನವನ್ನು ನಡೆಸುತ್ತಾರೆ, ಸುಳ್ಳನಲ್ಲ.. ಎಂದು ಬರೆದುಕೊಂಡಿದ್ದಾರೆ. ಸಂಜೆ ಪಾರ್ಟಿಯಲ್ಲಿ ಶಶಿ ತರೂರ್ ಅವರೊಂದಿಗೆ ಭಾಗಿಯಾಗಿದ್ದ ಮಹುವಾ ಮೊಯಿತ್ರಾ, ಸಿಗಾರ್ ಸೇದುತ್ತಿರುವ ಚಿತ್ರಗಳು ವೈರಲ್ ಆಗಿದ್ದವು. ಸಾಮಾನ್ಯವಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಮಹುವಾ ಮೊಯಿತ್ರಾ ತುಂಡುಡುಗೆಯಲ್ಲಿ ಸಿಗಾರ್ ಸೇದುತ್ತಿರುವ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಯಾರೋ ಶೇರ್ ಮಾಡಿಕೊಂಡಿದ್ದರು. ತಕ್ಷಣವೇ ಇದು ವೈರಲ್ ಆಗಿತ್ತು. ಈ ಚಿತ್ರಗಳಿಗೆ ಸಂಬಂಧಪಟ್ಟಂತೆ ಮೊಯಿತ್ರಾ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ತನ್ನ ಟ್ವೀಟ್‌ನಲ್ಲಿ, ಮಹುವಾ ಮೊಯಿತ್ರಾ, “ನನ್ನ ಕೆಲವು ವೈಯಕ್ತಿಕ ಫೋಟೋಗಳನ್ನು ಬಿಜೆಪಿಯ ಟ್ರೋಲ್ ಸೇನೆಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದನ್ನು ನೋಡಿ ತುಂಬಾ ಖುಷಿಯಾಯಿತು. ನನಗೆ ಬಿಳಿ ರವಿಕೆಗಿಂತ ಹಸಿರು ಡ್ರೆಸ್ ಧರಿಸೋದು ಇಷ್ಟ. ಇನ್ನು ಕ್ರಾಪಿಂಗ್ ಬಗ್ಗೆ ನಾನ್ಯಾಕೆ ತಲೆಕೆಡಸಿಕೊಳ್ಳಬೇಕು. ಅಂದು ರಾತ್ರಿಯ ಊಟದಲ್ಲಿದ್ದ ಉಳಿದ ಜನರನ್ನು ತೋರಿಸಿ. ಬಂಗಾಳದ ಮಹಿಳೆಯರು ಜೀವನ ನಡೆಸುತ್ತಾರೆ. ಸುಳ್ಳನಲ್ಲ..' ಎಂದು ಅವರು ಬರೆದಿದ್ದಾರೆ.
ಮಹುವಾ ಮೊಯಿತ್ರಾ ಅವರ ಫೋಟೋಗಳನ್ನು ಟ್ವಿಟರ್‌ನಲ್ಲಿ ಜನರು ವ್ಯಾಪಕವಾಗಿ ಕಂಚಿಕೊಂಡಿದ್ದಾರೆ. ವಿಚ್ಛೇದನ ಪಡೆದುಕೊಂಡಿದ್ದರೂ, ಶಶಿ ತರೂರ್ ಅವರ ಜೊತೆ ಪಾರ್ಟಿ ಮಾಡುತ್ತಾ ಸಿಗರೇಟ್ ಸೇದುತ್ತಿರುವ ಅವರ ಬಗ್ಗೆ ಟೀಕೆ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಶಶಿ ತರೂರ್ ಅವರ ಕುರಿತಾಗಿ ಯಾವುದೇ ಟ್ವೀಟ್‌ಗಳು ಇದ್ದಿರಲಿಲ್ಲ. ಬದಲಾಗಿ ಮಹುವಾ ಮೊಯಿತ್ರಾ ಅವರನ್ನೇ ಟಾರ್ಗೆಟ್ ಮಾಡಿ ಹೆಚ್ಚಿನ ಟ್ವೀಟ್‌ಗಳನ್ನು ಮಾಡಲಾಗಿತ್ತು. ಟ್ವಿಟರ್‌ನಲ್ಲಿ ಮಹುವಾ ಮೊಯಿತ್ರಾ ವಿರುದ್ಧದ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ರೆಂಡಿಂಗ್ ಆಗಿತ್ತು. ತಮ್ಮ ಪೋಸ್ಟ್‌ನಲ್ಲಿ, ಲೋಕಸಭಾ ಸಂಸದೆಯಾಗಿರುವ ಮೊಯಿತ್ರಾ, ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವಲ್ಲಿ ಬಿಜೆಪಿ ಐಟಿ ಸೆಲ್ ಭಾಗಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಐಟಿ ಸೆಲ್ ಪಾರ್ಟಿಯ ಸಂಪೂರ್ಣ ಫೋಟೋವನ್ನು ಕ್ರಾಪ್ ಮಾಡುವ ಬದಲು ಅಪ್‌ಲೋಡ್ ಮಾಡಬೇಕು ಎಂದು ಅವರು ಹೇಳಿದರು.
ಸಿಗಾರ್ ಸೇದುತ್ತಾ ಶಾಂಪೇನ್ ಕುಡಿಯುತ್ತಿರುವ ಮಹುವಾ ಮೊಯಿತ್ರಾ ಅವರ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಫೋಟೋ ಒಂದರಲ್ಲಿ ಶಶಿ ತರೂರ್ ಜೊತೆ ಪೋಸ್ ಕೊಟ್ಟಿದ್ದರು. ಆದರೆ, ತಾನು ಧೂಮಪಾನ ಮಾಡುವುದಿಲ್ಲ ಎಂದು ಮಹುವಾ ಮೊಯಿತ್ರಾ ಸ್ಪಷ್ಟಪಡಿಸಿದ್ದಾರೆ ಮತ್ತು ಫೋಟೋದಲ್ಲಿ ಅವರು ತಮಾಷೆಗಾಗಿ ಈ ಪೋಸ್ ನೀಡಿದ್ದೆ ಎಂದು ಹೇಳಿದ್ದಾರೆ.
‘ನಾನು ಧೂಮಪಾನ ಮಾಡುವುದಿಲ್ಲ, ಸಿಗರೇಟ್ ಅಲರ್ಜಿ ತಮಗಿದೆ’ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ. ತಮ್ಮ ಪೋಸ್ಟ್‌ಗೆ ಬಂದಿರುವ ಕಾಮೆಂಟ್‌ಗಳಲ್ಲಿ ಒಂದಕ್ಕೆ ಉತ್ತರಿಸುತ್ತಾ, ಮಹುವಾ ಮೊಯಿತ್ರಾ ತಾನು ಧೂಮಪಾನ ಮಾಡುವುದಿಲ್ಲ ಮತ್ತು ಸಿಗರೇಟ್‌ಗಳಿಗೆ ತೀವ್ರ ಅಲರ್ಜಿಯನ್ನು ಹೊಂದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. “ನಾನು ಧೂಮಪಾನ ಮಾಡುವುದಿಲ್ಲ. ನನಗೆ ಸಿಗರೇಟ್‌ಗೆ ತೀವ್ರ ಅಲರ್ಜಿ. ನಾನು ಸ್ನೇಹಿತರೊಬ್ಬರ ಸಿಗಾರ್‌ನೊಂದಿಗೆ ತಮಾಷೆಗಾಗಿ ಪೋಸ್ ನೀಡುತ್ತಿದ್ದೆ, ”ಎಂದು ತಿಳಿಸಿದ್ದಾರೆ.
ವಿಪಕ್ಷದ ಪ್ರಶ್ನೆಗಳಿಗೆ ಮೋದಿ ಸಿಡಿಗುಂಡು: ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಹೀನಾಯ ಸೋಲು
ಭಾನುವಾರ ಆಕೆ ಪಾರ್ಟಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. "I.N.D.I ಜಮಾತ್.... ಬಂಧಗಳನ್ನು ಬಲಪಡಿಸುವುದು, ಒಂದು ಬಾರಿಗೆ ಒಂದು ಸಿಪ್ ಮತ್ತು ಒಂದು ಪಫ್. ಹರಾಮಿ ಮೊಯಿತ್ರಾ ಯಾಕೆ ಟ್ರೆಂಡಿಂಗ್ ಆಗ್ತಿದೆ ಅನ್ನೋದು ಗೊತ್ತಿಲ್ವಲ್ಲ ಎಂದು ಟ್ವೀಟ್ ಮಾಡಿದ್ದರು.
ಸದನದಲ್ಲಿ ಹಣದುಬ್ಬರ ಚರ್ಚೆ ವೇಳೆ, 1.6 ಲಕ್ಷದ ಬ್ಯಾಗ್‌ಅನ್ನು ಮುಚ್ಚಿಟ್ಟ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ