ರಾಜಕೀಯ ಭಿನ್ನತೆ ಮರೆತು ಬಿಜೆಪಿ ಅಭ್ಯರ್ಥಿಗಳ ಜತೆ ಟಿಎಂಸಿ ಅಭ್ಯರ್ಥಿ ಹೋಳಿ!

Published : Mar 29, 2021, 12:39 PM ISTUpdated : Mar 29, 2021, 12:48 PM IST
ರಾಜಕೀಯ ಭಿನ್ನತೆ ಮರೆತು ಬಿಜೆಪಿ ಅಭ್ಯರ್ಥಿಗಳ ಜತೆ ಟಿಎಂಸಿ ಅಭ್ಯರ್ಥಿ ಹೋಳಿ!

ಸಾರಾಂಶ

 ರಾಜಕೀಯ ವೈರುಧ್ಯಗಳ ಮಧ್ಯೆಯೂ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಮದನ್‌ ಮಿತ್ರಾರಿಂದ ಹೋಳಿ ಆಚರಣೆ| ರಾಜಕೀಯ ಭಿನ್ನತೆ ಮರೆತು ಬಿಜೆಪಿ ಅಭ್ಯರ್ಥಿಗಳ ಜತೆ ಟಿಎಂಸಿ ಅಭ್ಯರ್ಥಿ ಹೋಳಿ!

ಕೋಲ್ಕತಾ(ಮಾ.29): ರಾಜಕೀಯ ವೈರುಧ್ಯಗಳ ಮಧ್ಯೆಯೂ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಮದನ್‌ ಮಿತ್ರಾ ಅವರು ಭಾನುವಾರ ತಮ್ಮ ರಾಜಕೀಯ ವಿರೋಧಿಗಳಾದ ಬಿಜೆಪಿಯ ಮೂವರು ನಾಯಕಿಯರೊಂದಿಗೆ ಹೂಗ್ಲಿ ನದಿಯ ಹಡಗೊಂದರಲ್ಲಿ ಹೋಳಿ ಆಚರಿಸಿ ಸಂಭ್ರಮಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಮರ್‌ಹಾತಿ ಕ್ಷೇತ್ರದಿಂದ ಸ್ಪರ್ಧಿಸಿರುವ ಟಿಎಂಸಿ ಅಭ್ಯರ್ಥಿ ಮಿತ್ರಾ ಅವರು ಬಿಜೆಪಿ ಅಭ್ಯರ್ಥಿಗಳಾದ ಪಾಯೆಲ್‌ ಸರ್ಕಾರ್‌, ಶ್ರಾವಂತಿ ಚಟರ್ಜಿ ಮತ್ತು ತನುಶ್ರೀ ಚಕ್ರವರ್ತಿ ಅವರೊಂದಿಗೆ ಹೋಳಿ ಹಬ್ಬ ಆಚರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಿತ್ರಾ, ‘ಅವರೆಲ್ಲ ಹಲವಾರು ವರ್ಷಗಳಿಂದ ಪರಿಚಿತವಿರುವ ಸ್ನೇಹಿತರು. ಹೋಳಿಯಲ್ಲಿ ರಾಜಕೀಯ ಇರಬಾರದು. ನಾನೇ ಅವರನ್ನು ಆಹ್ವಾನಿಸಿದ್ದೆ. ರಾಜಕೀಯ ವೈರುಧ್ಯ ನಮ್ಮ ವೈಯಕ್ತಿಕ ಸಂಬಂಧಕ್ಕೆ ಮುಳುವಾಗಬಾರದು. ನಮ್ಮದು ವಿಭಿನ್ನ ರಾಜಕೀಯ ಸಿದ್ಧಾಂತ. ಆದರೆ ಹೋಳಿ ದಿನ ನಾವೆಲ್ಲ ಒಟ್ಟಿಗೆ ಸೇರುತ್ತೇವೆ. ಇದು ಪಶ್ಚಿಮ ಬಂಗಾಳದ ಸಂಸ್ಕೃತಿ’ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು