ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ 100 ಕೋಟಿ ನೆರವು ಕೋರಿದ ಭಾರತ್‌, ಸೀರಂ ಸಂಸ್ಥೆ!

By Kannadaprabha NewsFirst Published Mar 29, 2021, 11:03 AM IST
Highlights

ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ 100 ಕೋಟಿ ನೆರವು ಕೋರಿದ ಭಾರತ್‌, ಸೀರಂ ಸಂಸ್ಥೆ| ಕೋವಿಡ್‌ ಸುರಕ್ಷಾ ನಿಧಿಯಿಂದ ನೆರವು ಯಾಚನೆ

ನವದೆಹಲಿ(ಮಾ.29): ದೇಶಾದ್ಯಂತ ಕೊರೋನಾ 2ನೇ ಅಲೆ ಕಾಣಿಸಿಕೊಂಡು ಲಸಿಕೆಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ, ಉತ್ಪಾದನೆ ಹೆಚ್ಚಳದ ನಿಟ್ಟಿನಲ್ಲಿ ನೆರವು ನೀಡುವಂತೆ ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಮತ್ತು ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಕೇಂದ್ರ ಸರ್ಕಾರದ ನೆರವು ಕೋರಿವೆ.

ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದಿಸುತ್ತಿರುವ ಭಾರತ್‌ ಬಯೋಟೆಕ್‌ ಸಂಸ್ಥೆ 100 ಕೋಟಿ ರು. ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೆ, ಕೋವಿಶೀಲ್ಡ್‌ ಲಸಿಕೆ ಉತ್ಪಾದಿಸುತ್ತಿರುವ ಸೀರಂ ಇನ್‌ಸ್ಟಿಟ್ಯೂಟ್‌ ಮೌಖಿಕವಾಗಿ ಇಂಥದ್ದೊಂದು ಬೇಡಿಕೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತ್‌ ಬಯೋಟೆಕ್‌ ಸಂಸ್ಥೆ ಮಾಸಿಕ 40 ಲಕ್ಷ ಡೋಸ್‌ ಲಸಿಕೆ ಉತ್ಪಾದಿಸುತ್ತಿದ್ದರೆ, ಸೀರಂ ಸಂಸ್ಥೆ 2020ರ ಮಾಚ್‌ರ್‍ ತಿಂಗಳ ಮುಕ್ತಾಯದ ವೇಳೆಗೆ ಮಾಸಿಕ 10 ಕೋಟಿ ಡೋಸ್‌ ಉತ್ಪಾದಿಸುವ ಗುರಿ ಹಾಕಿಕೊಂಡಿದೆ.

ಸುರಕ್ಷಾ ನಿಧಿ:

ಕನಿಷ್ಠ 5-6 ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಿ, ಅದನ್ನು ಅನುಮೋದನೆ ಹಂತಕ್ಕೆ ತಲುಪಿಸಿ, ಮಾರುಕಟ್ಟೆಬಿಡುಗಡೆ ಮಾಡಲು ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2020ರ ನವೆಂಬರ್‌ನಲ್ಲಿ ಕೋವಿಡ್‌ ಸುರಕ್ಷಾ ನಿಧಿ ಸ್ಥಾಪಿಸಿತ್ತು.

click me!