ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ: ದಾಖಲೆ ಕಡ್ಡಾಯ

Published : Nov 17, 2023, 08:36 AM IST
ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ:  ದಾಖಲೆ ಕಡ್ಡಾಯ

ಸಾರಾಂಶ

ನವದಂಪತಿಗಳಿಗೆ ಸುಲಭವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವ ವಿಶೇಷ ಯೋಜನೆಯೊಂದನ್ನು ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿ ಜಾರಿಗೆ ತಂದಿದೆ. ಈ ಯೋಜನೆಯಡಿ ಯಾವುದೇ ಜೋಡಿ ಮದುವೆಯಾದ ಒಂದು ವಾರದೊಳಗೆ ವಿಶೇಷ ಟಿಕೆಟ್‌ ನೀಡಿ ಸುಲಭವಾಗಿ ದೇವರ ದರ್ಶನ ಪಡೆಯಬಹುದು.

ತಿರುಮಲ: ನವದಂಪತಿಗಳಿಗೆ ಸುಲಭವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವ ವಿಶೇಷ ಯೋಜನೆಯೊಂದನ್ನು ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿ ಜಾರಿಗೆ ತಂದಿದೆ. ಈ ಯೋಜನೆಯಡಿ ಯಾವುದೇ ಜೋಡಿ ಮದುವೆಯಾದ ಒಂದು ವಾರದೊಳಗೆ ವಿಶೇಷ ಟಿಕೆಟ್‌ ನೀಡಿ ಸುಲಭವಾಗಿ ದೇವರ ದರ್ಶನ ಪಡೆಯಬಹುದು.

ವೆಂಕಟೇಶ್ವರನ ದರ್ಶನ ಮಾಡಲು ದೇಗುಲದ ಆಡಳಿತ ಮಂಡಳೀ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಅದರಂತೆ ನವದಂಪತಿಗಳು ಮದುವೆಯ ದಿರಿಸಿನಲ್ಲೇ ಮದುವೆಯಾದ ಮರುಕ್ಷಣವೇ ಬಂದು ತಿಮ್ಮಪ್ಪನ ದರ್ಶನ ಪಡೆಯಬೇಕೆಂದು ಸೂಚಿಸಲಾಗಿದೆ. ಇದರ ಜೊತೆಗೆ ಶ್ರೀವಾರಿ ಕಲ್ಯಾಣೋತ್ಸವದ ಮದುವೆ ಸಮಾರಂಭ ಹಾಗೂ ದೇವರ ವಿಶೇಷ ದರ್ಶನದಲ್ಲೂ ನವದಂಪತಿಗಳಿಗೆ ಪ್ರತಿನಿತ್ಯ 20 ಟಿಕೆಟ್‌ಗಳನ್ನು ಮೀಸಲಿಡಲಾಗುತ್ತಿದೆ.

ತಿರುಪತಿಯಲ್ಲಿ 13 ಎಕರೆ ಕೊಡಿಸೋದಾಗಿ₹1 ಕೋಟಿ ಉಂಡೆ ನಾಮ ಹಾಕಿದ್ದವರ ಸೆರೆ

ದರ್ಶನಕ್ಕೂ ಒಂದು ವಾರ ಹಿಂದೆ ಮದುವೆಯಾದ ನವದಂಪತಿಗಳು ಆರ್ಜಿತ ಸೇವಾ ಲಕ್ಕಿ ಡಿಪ್‌ ಕೌಂಟರ್‌ನಲ್ಲಿ ಅರ್ಜಿ ಹಾಕಿ 1000 ರು. ಶುಲ್ಕ ಸಲ್ಲಿಸಿ ಕಲ್ಯಾಣೋತ್ಸವ ಸೇವಾ ಟಿಕೆಟ್‌ ಅನ್ನು 1000 ರು. ನೀಡಿ ಖರೀದಿಸಬಹುದು. ಟಿಕೆಟ್‌ ಖರೀದಿ ವೇಳೆ ಮದುವೆ ಫೋಟೋ, ಆಧಾರ್‌ ದಾಖಲೆ ನೀಡುವುದು ಕಡ್ಡಾಯ. ಜೊತೆಗೆ ದೇವರ ದರ್ಶನಕ್ಕೆ ವಿವಾಹದ ಉಡುಗೆಯಲ್ಲೇ ಹಾಜರಾಗಬೇಕು. ನಿತ್ಯ 20 ಜೋಡಿಗಳಿಗೆ ಮಾತ್ರವೇ ಈ ಅವಕಾಶ.

ತಿರುಪತಿ ಅಭಿವೃದ್ಧಿಗೆ ಟಿಟಿಡಿ ಬಜೆಟ್‌ನ ಶೇ.1 ಹಣ: ಪ್ರಸ್ತಾವ ತಿರಸ್ಕರಿಸಿದ ಸಿಎಂ ಜಗನ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಧಾರ್ ಬಯೋಮೆಟ್ರಿಕ್ ಶಿಲ್ಪಿ, ಬೆಂಗಳೂರಿನ ಸರ್ವಂ AI ಕಂಪನಿ ಕಟ್ಟಿದ ವಿವೇಕ್ ರಾಘವನ್ ಈಗ TIME100 AI 2026 ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿ!
ನೇಪಾಳದ ಹೃದಯವಿದ್ರಾವಕ ಘಟನೆ, ಕೆಸರಿನಡಿ ಸಿಲುಕಿದ ಶವ ಮೇಲಕ್ಕೆತ್ತಿ ಚಿನ್ನ ಕದಿಯುತ್ತಿರುವ ಕಟುಕರು