
ತಿರುಪತಿ: ಜನವರಿ 2 ರಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಹಾಗೂ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಅಂದು ನಿರ್ಮಿಸಲಾಗುವ ವಿಶೇಷ ಪುಷ್ಪಾಲಂಕೃತ ವೈಕುಂಠ ದ್ವಾರದಲ್ಲೇ ಹೆಚ್ಚು ಭಕ್ತಾದಿಗಳು ಹಾದು ಹೋಗಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜನವರಿ 2 ರಿಂದ 11 ರವರೆಗೆ ವಿಶೇಷ ದರ್ಶನ ಹಾಗೂ ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ. ಕಳೆದ 2 ವರ್ಷಗಳಿಂದ ಏಕಾದಶಿ ಸಮಯದಲ್ಲಿ 10 ದಿನಗಳವರೆಗೆ ವೈಕುಂಠ ದ್ವಾರ ತೆರೆಯಲಾಗುತ್ತಿದೆ. ಮುಂಜಾನೆ 5 ಗಂಟೆಗೆ ದೇವರ ದರ್ಶನ ಆರಂಭವಾಗಲಿದ್ದು ಪ್ರತಿ ದಿನ 80,000 ಭಕ್ತಾದಿಗಳಿಗೆ ದರ್ಶನ ಕಲ್ಪಿಸಲಾಗುತ್ತದೆ. ಜ.2ರ ಏಕಾದಶಿಯಂದು ಮುಂಜಾನೆ 9 ರಿಂದ 11 ಗಂಟೆವರೆಗೆ ಸ್ವರ್ಣ ರಥ ಮೆರವಣಿಗೆ ನಡೆಯಲಿದೆ.
ತಿಮ್ಮಪ್ಪನಿಗೆ ದೇಶದ ಎಷ್ಟು ಕಡೆ ಆಸ್ತಿ ಇದೆ: ಇರುವ ಬಂಗಾರವೆಷ್ಟು? ಬ್ಯಾಂಕಲ್ಲಿರುವ ದುಡ್ಡೆಷ್ಟು ಗೊತ್ತಾ?
Panchang: ಇಂದು ಏಕಾದಶಿ, ವಿಷ್ಣು ಆರಾಧನೆಯಿಂದ ಫಲಸಿದ್ಧಿ
Mokshada Ekadashi 2022: ಈ ದಿನ ಈ ಪರಿಹಾರ ಕೆಲಸ ಮಾಡಿದ್ರೆ ಶ್ರೀಹರಿಯ ಒಲುಮೆ ಸಿದ್ಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ