ಬಿಹಾರ ಸಿಎಂ ಆದ ನಿತೀಶ್ ಕುಮಾರ್| ಸಿಎಂ ನಿತೀಶ್ ಕುಮಾರ್‌ಗೆ ವ್ಯಂಗ್ಯಭರಿತ ಟ್ವೀಟ್ ಮೂಲಕ ಶುಭ ಕೋರಿದ ಪ್ರಶಾಂತ್ ಕಿಶೋರ್| ದಣಿದ, ರಾಜಕೀಯವಾಗಿ ಮಹತ್ವ ಕಳೆದುಕೊಂಡ ನಾಯಕ
ಪಾಟ್ನಾ(ನ.17): ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಿರುವಾಗ ಜೆಡಿಯುನಿಂದ ಹೊರ ಹಾಕಲ್ಪಟ್ಟ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಏಳನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್‌ಗೆ ವ್ಯಂಗ್ಯಭರಿತ ಶುಭಾಶಯ ಕೋರಿದ್ದಾರೆ.
ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್!
ಹೌದು ನಿತೀಶ್ ಕುಮಾರ್ ಸಿಎಂ ಆದ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ 'ಬಿಜೆಪಿ ನಾಮನಿರ್ದೇಶಿತ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಜಿ ಅವರಿಗೆ ಅಭಿನಂದನೆಗಳು' ಎಂದಿದ್ದಾರೆ. ಇಷ್ಟೇ ಅಲ್ಲದೇ ಬಿಹಾರ ಇನ್ನೂ ಕೆಲ ವರ್ಷ ಓರ್ವ ದಣಿದ ಹಾಗೂ ರಾಜಕೀಯವಾಗಿ ಮಹತ್ವ ಕಳೆದುಕೊಂಡ ನಾಯಕನನ್ನು ಸಹಿಸಿಕೊಳ್ಳಬೇಕು. ಈ ಮೂಲಕ ಪ್ರಭಾವಹೀನ ಆಡಳಿತ ನೋಡಲು ಸಿದ್ಧರಾಗಬೇಕು ಎಂದಿದ್ದಾರೆ.
भाजपा मनोनीत मुख्यमंत्री के तौर पर शपथ लेने पर जी को बधाई।
With a tired and politically belittled leader as CM, should brace for few more years of lacklustre governance.
ಕೆಲ ವರ್ಷಗಳ ಹಿಂದೆ ನಿತೀಶ್ ಕುಮಾರ್‌ರವರ ಆಪ್ತರಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಜೆಡಿಯು ಉಪಾಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. ಆದರೆ ಅವರ ಕೆಲ ಸ್ವತಂತ್ರ ಹಾಗೂ ಸಂಘರ್ಷದ ದೃಷ್ಟಿಕೋನಗಳಿಂದಾಗಿ ನಿತೀಶ್ ಹಾಗೂ ಪ್ರಶಾಂತ್ ನಡುವೆ ಸಂಬಂಧ ಹದಗೆಟ್ಟಿತು ಹಾಗೂ ಅವರನ್ನು ಜೆಡಿಯುನಿಂದ ಹೊರ ಹಾಕಲಾಯ್ತು.