ಸುಶೀಲ್ ಮೋದಿ ಅನುಪಸ್ಥಿತಿ ಕಾಡಲಿದೆ, ಆದರೆ ಇದು ಬಿಜೆಪಿ ನಿರ್ಧಾರ: ನಿತೀಶ್ ಕುಮಾರ್!

By Suvarna NewsFirst Published Nov 17, 2020, 7:40 AM IST
Highlights

ಸುಶೀಲ್ ಮೋದಿಗೆ ಸಿಗದ ಡಿಸಿಎಂ ಸ್ಥಾನ| ಬಿಜೆಪಿಯ ಇನ್ನಿಬ್ಬರಿಗೆ ಬಿಹಾರ ಡಿಸಿಎಂ ಸ್ಥಾನ| ಇದು ಬಿಜೆಪಿ ನಿರ್ಧಾಋ ಎಂದ ನಿತೀಶ್ ಕುಮಾರ್

ಪಾಟ್ನಾ(ನ.17): ಬಿಹಾರ ಮಾಜಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿಯ ಇಬ್ಬರು ನಾಯಕರು ಪಡೆದುಕೊಂಡಿದ್ದಾರೆ. ಹೀಗಿರುವಾಗ ಇಲ್ಲಿ ಸುಶೀಲ್ ಮೋದಿ ಅನುಪಸ್ಥಿತಿ ಎಲ್ಲರನ್ನೂ ಕಾಡಲಿದೆ. ಸುಶೀಲ್ ಮೋದಿ ಮಾಜಿ ಬಾಸ್ ನಿತೀಶ್ ಕುಮಾರ್ ಬಳಿ ಈ ಕುರಿತು ಪ್ರಶ್ನಿಸಿದಾಗ ಹೌದು ಸುಶೀಲ್ ಮೋದಿ ಕೊರತೆ ಬಹಳಷ್ಟು ಕಾಡಲಿದೆ. ಆದರೆ ಇದು ಬಿಜೆಪಿ ನಿರ್ಧಾರ ಎಂದಿದ್ದಾರೆ. ನಿತೀಶ್ ಕುಮಾರ್ ನಿನ್ನೆ ಸೋಮವಾರ 24 ಇತರ ಸಚಿವರೊಂದಿಗೆ ಏಳನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್!

ಇನ್ನು ಅತ್ಯಂತ ವಿಶ್ವಾಸಾರ್ಹ ಸಹೋದ್ಯೋಗಿ, 68 ವರ್ಷದ ಜೊತೆಗಾರನಿಲ್ಲದೇ ಆರಾಮಾಗಿ ಇರಲು ಸಾಧ್ಯವೇ ಎಂದು ನಿತೀಶ್‌ರನ್ನು ಪ್ರಶ್ನಿಸಿದಾಗ ಇದು ಬಿಜೆಪ ನಿರ್ಧಾರ. ಕಮಲ ಪಾಳಯವೇ ಯಾರು ಸಚಿವರಾಗುತ್ತಾರೆ, ಯಾರು ಉಪ ಮುಖ್ಯಮಂತ್ರಿಯಾಗ್ತಾರೆ ಎಂಬುವುದನ್ನು ನಿರ್ಧರಿಸುತ್ತದೆ ಎಂದಿದ್ದಾರೆ.

ಇನ್ನು ಈ ಹಿಂದೆಯೂ ನಿತೀಶ್ ಕುಮಾರ್ ಯಾವಾಗೆಲ್ಲಾ ಬಿಜೆಪಿ ನಾಯಕರ ಟೀಕೆಗೆ ಗಗುರಿಯಾಗಿದ್ದರೋ, ಆವಾಗೆಲ್ಲಾ ಅವರನ್ನು ಕಾಪಾಡಲು ಸುಶೀಲ್ ಮೋದಿ ಮುಂದಾಗಿದ್ದರು. ಇನ್ನು ಸುಶೀಲ್ ಮೋದಿಯನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆಂದು ಬಿಜೆಪಿ ತಿಳಿಸಿದೆ. 

ಬಿಹಾರ ಸಿಎಂ ಆದ ನಿತೀಶ್ ಕುಮಾರ್, ಚುನಾವಣಾ ತಂತ್ರಗಾರ ಕೊಟ್ಟ ಪ್ರತಿಕ್ರಿಯೆ ಇದು!

ಇನ್ನು ಸುಶೀಲ್ ಮೋದಿ ಕ್ಷಮತೆಯನ್ನು ಉಪಯೋಗಿಸಬೇಕೆಂದು ನಿಮಗನಿಸುತ್ತದೆಯೇ ಎಂದು ನಿತೀಶ್‌ರನ್ನು ಪ್ರಶ್ನಿಸಿದಾಗ 'ಇದು ಬಿಜೆಪಿ ನಿರ್ಧಾರ, ಈ ಪ್ರಶ್ನೆಯನ್ನು ಬಿಜೆಪಿ ಬಳಿ ಕೇಳಿ' ಎಂದಿದ್ದಾರೆ.

click me!