ಟಿಪ್ಪು ಸುಲ್ತಾನ್ ಕತ್ತಿಯನ್ನು ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 14 ಮಿಲಿಯನ್ ಪೌಂಡ್‌ಗಳಿಗೆ ಅಥವಾ ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 140 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ.
ಲಂಡನ್ (ಮೇ 25, 2023): ಟಿಪ್ಪು ಸುಲ್ತಾನ್ ನಮ್ಮ ಮೈಸೂರಿನ ದೊರೆ. 18ನೇ ಶತಮಾನದ ದೊರೆಯಾದ್ರೂ ರಾಜ್ಯ ರಾಜಕೀಯದಲ್ಲಿ ಈಗಲೂ ಆಗಾಗ್ಗೆ ಈ ಹೆಸರು ಸದ್ದು ಮಾಡುತ್ತಲೇ ಇರುತ್ತದೆ. ಟಿಪ್ಪು ಜಯಂತಿ ಮುಂತಾದ ವಿಚಾರಗಳಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿರುತ್ತದೆ. ಇನ್ನೊಂದೆಡೆ, 18ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್‌ನ ಕತ್ತಿ ಈ ಹಿಂದೆ ಮದ್ಯ ದೊರೆ ವಿಜಯ್ ಮಲ್ಯ ಒಡೆತನದಲ್ಲಿತ್ತು. 2004ರಲ್ಲಿ 1.5 ಕೋಟಿಗೆ ಖರೀದಿಸಿದ್ದ ಖಡ್ಗವನ್ನು ಈಗ ಲಂಡನ್‌ನಲ್ಲಿ ಹರಾಜಿಗೆ ಹಾಕಲಾಗಿದೆ. ಈಗ ಹರಾಜಾಗಿರುವ ಬೆಲೆ ಎಷ್ಟು ಗೊತ್ತಾ..?
ಟಿಪ್ಪು ಸುಲ್ತಾನ್ ಕತ್ತಿಯನ್ನು ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 14 ಮಿಲಿಯನ್ ಪೌಂಡ್‌ಗಳಿಗೆ ($ 17.4 ಮಿಲಿಯನ್) ಅಥವಾ ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 140 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ. ಈ ಬೆಲೆ ಅಂದಾಜಿಗಿಂತ 7 ಪಟ್ಟು ಹೆಚ್ಚಾಗಿದೆ ಎಂದು ಮಾರಾಟವನ್ನು ಆಯೋಜಿಸಿದ ಆಕ್ಷನ್ ಹೌಸ್ ಬೋನ್‌ಹಾಮ್ಸ್ ಮಂಗಳವಾರ ಮಾಹಿತಿ ನೀಡಿದೆ. ಈ ಖಡ್ಗ ಟಿಪ್ಪು ಸುಲ್ತಾನ್‌ನದೇ ಎಂಬುದು ಸಾಬೀತಾಗಿದ್ದು, ಈ ಖಡ್ಗವು ಅತ್ಯಂತ ಪ್ರಮುಖವಾಗಿದೆ ಎಂದು ಬೊನ್ಹಾಮ್ಸ್ ತಿಳಿಸಿದೆ. ಇದೇ ಖಡ್ಗವನ್ನು ಮದ್ಯದ ದೊರೆ ವಿಜಯ್ ಮಲ್ಯ 1.5 ಕೋಟಿ ರೂ. ಗೆ ಖರೀದಿಸಿದ್ದರು.
ಇದನ್ನು ಓದಿ: ಟ್ವಿಟ್ಟರ್ ಕಚೇರಿ ಬಾಡಿಗೆ ಕಟ್ಟೋಕೂ ದುಡ್ಡಿಲ್ಲದೆ ಕಾಫಿ ಮೇಕರ್, ಲೋಗೋವನ್ನೂ ಹರಾಜಿಗೆ ಹಾಕಿದ ಎಲಾನ್ ಮಸ್ಕ್..!
ಟಿಪ್ಪು ಸುಲ್ತಾನ್ 18 ನೇ ಶತಮಾನದ ಉತ್ತರಾರ್ಧದಲ್ಲಿ ಯುದ್ಧಗಳಲ್ಲಿ ಖ್ಯಾತಿ ಗಳಿಸಿದರು. ಅವರು 1175 ಮತ್ತು 1779 ರ ನಡುವೆ ಹಲವಾರು ಸಂದರ್ಭಗಳಲ್ಲಿ ಮರಾಠರ ವಿರುದ್ಧ ಹೋರಾಡಿದ್ದಾರೆ. ಆದರೆ, ಅನೇಕ ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ ಹಾಗೂ ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿದೆ ಎಂಬ ಅಪಖ್ಯಾತಿಯೂ ಅವರ ಮೇಲಿದೆ.
ಇನ್ನೂ ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ಈ ಅದ್ಭುತವಾದ ಖಡ್ಗವು ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದ ಎಲ್ಲಾ ಆಯುಧಗಳಲ್ಲಿ ಶ್ರೇಷ್ಠವಾಗಿದೆ. ಟಿಪ್ಪು ಸುಲ್ತಾನನೊಂದಿಗಿನ ಅದರ ನಿಕಟ ವೈಯಕ್ತಿಕ ಒಡನಾಟ, ಅದನ್ನು ವಶಪಡಿಸಿಕೊಂಡ ದಿನದಿಂದ ಅದರ ನಿಷ್ಪಾಪ ಮೂಲವನ್ನು ಕಂಡುಹಿಡಿಯಬಹುದು ಮತ್ತು ಅದರ ತಯಾರಿಕೆಯಲ್ಲಿ ತೊಡಗಿರುವ ಅತ್ಯುತ್ತಮ ಕರಕುಶಲತೆ. ಇದು ಅನನ್ಯ ಮತ್ತು ಹೆಚ್ಚು ಅಪೇಕ್ಷಣೀಯವಾಗಿದೆ" ಎಂದು ಇಸ್ಲಾಮಿಕ್ ಮತ್ತು ಭಾರತೀಯ ಕಲೆ ಹಾಗೂ ಹರಾಜುದಾರರ ಬೋನ್‌ಹಾಮ್ಸ್ ಮುಖ್ಯಸ್ಥ ಆಲಿವರ್ ವೈಟ್ ಹೇಳಿದರು.
ಇದನ್ನೂ ಓದಿ: Uttar Pradesh: ₹ 10 ಕೋಟಿ ಮೌಲ್ಯದ ತಿಮಿಂಗಲ ವಾಂತಿ ವಶಕ್ಕೆ: ವಾಂತಿಗೇಕಿಷ್ಟು ಬೆಲೆ ನೋಡಿ..!
ಟಿಪ್ಪು ಸುಲ್ತಾನ್ ಅರಮನೆಯ ಖಾಸಗಿ ಕ್ವಾರ್ಟರ್ಸ್‌ನಲ್ಲಿ ಈ ಖಡ್ಗ ಪತ್ತೆಯಾಗಿತ್ತು ಎಂದು ತಿಳಿದುಬಂದಿದೆ. "ಖಡ್ಗವು ಅಸಾಧಾರಣ ಇತಿಹಾಸವನ್ನು ಹೊಂದಿದೆ, ಆಶ್ಚರ್ಯಕರ ಮೂಲ ಮತ್ತು ಅಪ್ರತಿಮ ಕುಶಲತೆಯನ್ನು ಹೊಂದಿದೆ. ಈ ಹಿನ್ನೆಲೆ ಈ ಖಡ್ಗಕ್ಕೆ ಇಬ್ಬರು ಫೋನ್ ಮೂಲಕ ಬಿಡ್ ಮಾಡ್ತಿದ್ದರು ಮತ್ತು ಕೋಣೆಯಲ್ಲಿದ್ದ ಒಬ್ಬರು ಬಿಡ್‌ದಾರರ ನಡುವೆ ತೀವ್ರ ಪೈಪೋಟಿ ಇತ್ತು ಎನ್ನುವುದ್ರಲ್ಲಿ ಆಶ್ಚರ್ಯವೇನಿಲ್ಲ. ಈ ಫಲಿತಾಂಶದಿಂದ ನಾವು ಸಂತೋಷಪಡುತ್ತೇವೆ" ಎಂದು ಮತ್ತು ಬೊನ್‌ಹಾಮ್ಸ್‌ನಲ್ಲಿ ಭಾರತೀಯ ಕಲೆ ಮತ್ತು ಇಸ್ಲಾಮಿಕ್ ಗುಂಪಿನ ಮುಖ್ಯಸ್ಥರಾದ ನಿಮಾ ಸಾಗರ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟಿಪ್ಪು ಸುಲ್ತಾನ್‌ನನ್ನು "ಮೈಸೂರಿನ ಹುಲಿ" ಎಂದೂ ಕರೆಯಲಾಗ್ತಿತ್ತು. ಅವರು ಯುದ್ಧಗಳಲ್ಲಿ ರಾಕೆಟ್ ಫಿರಂಗಿ ಬಳಕೆಗೆ ಪ್ರವರ್ತಕರಾಗಿದ್ದರು ಮತ್ತು ಮೈಸೂರನ್ನು ಭಾರತದಲ್ಲಿ ಅತ್ಯಂತ ಕ್ರಿಯಾತ್ಮಕ ಆರ್ಥಿಕತೆಯಾಗಿ ಪರಿವರ್ತಿಸಿದರು ಎಂದು ಬೋನ್‌ಹಾಮ್ಸ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಟಿಪ್ಪು ಸುಲ್ತಾನ್ ಕೊಲ್ಲಲ್ಪಟ್ಟ ನಂತರ, ಅವರ ಧೈರ್ಯದ ಸಂಕೇತವಾಗಿ ಅವರ ಖಡ್ಗವನ್ನು ಬ್ರಿಟಿಷ್ ಮೇಜರ್ ಜನರಲ್ ಡೇವಿಡ್ ಬೈರ್ಡ್‌ಗೆ ನೀಡಲಾಯಿತು ಎಂದು ಆಕ್ಷನ್ ಹೌಸ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಇನ್ಮುಂದೆ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಫೋನ್ ನಂಬರ್ ಕೇಳಂಗಿಲ್ಲ: ಕೇಂದ್ರ ಸರ್ಕಾರ ಸೂಚನೆ