ಐತಿಹಾಸಿಕ ಸಾಧನೆ ಮಾಡಿದ ನೌಕಾಸೇನೆ, ರಾತ್ರಿ ಹೊತ್ತಿನಲ್ಲಿ ಯುದ್ಧನೌಕೆಯಲ್ಲಿ ಯಶಸ್ವಿಯಾಗಿ ಇಳಿದ ಮಿಗ್‌-29ಕೆ!

Published : May 25, 2023, 05:04 PM ISTUpdated : May 25, 2023, 05:17 PM IST
ಐತಿಹಾಸಿಕ ಸಾಧನೆ ಮಾಡಿದ ನೌಕಾಸೇನೆ, ರಾತ್ರಿ ಹೊತ್ತಿನಲ್ಲಿ ಯುದ್ಧನೌಕೆಯಲ್ಲಿ ಯಶಸ್ವಿಯಾಗಿ ಇಳಿದ ಮಿಗ್‌-29ಕೆ!

ಸಾರಾಂಶ

ಭಾರತೀಯ ನೌಕಾಸೇನೆ ತನ್ನ ಐತಿಹಾಸಿಕ 'ನೈಟ್‌ ಟ್ರ್ಯಾಪ್‌'ನಲ್ಲಿ ಯಶಸ್ವಿಯಾಗಿದೆ. ನೈಟ್‌ ಟ್ರ್ಯಾಪ್‌ ಎಂದರೆ, ರಾತ್ರಿಯ ವೇಳೆ ಯುದ್ಧವಿಮಾನವನ್ನು ಯುದ್ಧನೌಕೆಯ ಮೇಲೆ ಯಶಸ್ವಿಯಾಗಿ ಇಳಿಸುವ ಪ್ರಕ್ರಿಯೆಯಾಗಿದೆ. ನೌಕಾ ಪೈಲಟ್‌ಗಳ ಪಾಲಿಗೆ ಇದರಷ್ಟು ಸವಾಲಿನ ಸಂಗತಿ ಇನ್ನೊಂದಿಲ್ಲ ಎನ್ನಲಾಗುತ್ತದೆ.

ನವದೆಹಲಿ (ಮೇ.25): ಭಾರತೀಯ ನೌಕಾಸೇನೆ ತನ್ನ ಐತಿಹಾಸಿಕ ನೈಟ್‌ ಟ್ರ್ಯಾಪ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಸ್ವದೇಶಿ ನಿರ್ಮಿತ ಐಎನ್‌ಸ್‌ ವಿಕ್ರಾಂತ್‌ ಯುದ್ಧನೌಕೆಯ ಮೇಲೆ ರಾತ್ರಿ ಹೊತ್ತಿನಲ್ಲಿ ಯಶಸ್ವಿಯಾಗಿ ಮಿಗ್‌-29ಕೆ ಯುದ್ಧವಿಮಾನವನ್ನು ಲ್ಯಾಂಡ್‌ ಮಾಡುವ ಮೂಲಕ ಐತಿಹಾಸಿಕ ಶ್ರೇಯ ಪಡೆದುಕೊಂಡಿದೆ. ಯುದ್ಧಕಾಲದ ವೇಳೆ ಈ ಸಾಮರ್ಥ್ಯ ಬಹಳ ಪ್ರಮುಖವಾಗಿರುತ್ತದೆ. ನೈಟ್‌ ಟ್ರ್ಯಾಪ್‌ ಎನ್ನುವುದು ನೌಕಾಸೇನೆಯಲ್ಲಿ ಬಹಳ ಪ್ರಮುಖವಾಗಿ ಬಳಸುವ ಪದ. ಯುದ್ಧವಿಮಾನಗಳನ್ನು ರಾತ್ರಿಯ ವೇಳೆ ಯುದ್ಧನೌಕೆಯ ಮೇಲೆ ಲ್ಯಾಂಡ್‌ ಮಾಡುವ ಸಾಹಸಕ್ಕೆ ನೈಟ್‌ ಟ್ರ್ಯಾಪ್‌ ಎನ್ನುತ್ತಾರೆ. ನೌಕಾಪೈಲಟ್‌ಗಳ ಪಾಲಿಗೆ ಇದರಷ್ಟು ಸವಾಲಿನ ಸಂಗತಿ ಇನ್ನೊಂದಿರೋದಿಲ್ಲ. ಐಎನ್‌ಎಸ್ ವಿಕ್ರಾಂತ್‌ನಲ್ಲಿ ಪ್ರಯೋಗ ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ನೌಕಾಪಡೆಯ ಪಿಆರ್‌ಒ ಕಮಾಂಡರ್ ವಿವೇಕ್ ಮಧ್ವಲ್ ಹೇಳಿದ್ದಾರೆ. ಪ್ರಯೋಗದ ವೇಳೆ ಯುದ್ಧ ವಿಮಾನ ರಾತ್ರಿ ಲ್ಯಾಂಡಿಂಗ್ಅನ್ನು ಯಶಸ್ವಿಯಾಗಿ ಮಾಡಿದೆ. ಇದು ತುಂಬಾ ಚಾಲೆಂಜಿಂಗ್ ಆಗಿತ್ತು. ಯಶಸ್ವಿ ಲ್ಯಾಂಡಿಂಗ್ ವಿಕ್ರಾಂತ್ ಸಿಬ್ಬಂದಿ ಮತ್ತು ನೌಕಾ ಪೈಲಟ್‌ಗಳ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ತಿಳಿಸಿದ್ದಾರೆ.

ಯುದ್ಧಕಾಲದಲ್ಲಿ ಅಗತ್ಯವಾದ ಸಾಮರ್ಥ್ಯ: ಯುದ್ಧವಿಮಾನವನ್ನು ರಾತ್ರಿಯ ವೇಳೆ ಯುದ್ಧನೌಕೆಯ ಮೇಲೆ ಲ್ಯಾಂಡ್‌ ಮಾಡುವ ಸಾಮರ್ಥ್ಯ ಯುದ್ಧ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ನೆರವಿಗೆ ಬರುತ್ತದೆ. ಯುದ್ಧ ನೌಕೆಎನ್ನುವುದು ಅಕ್ಷರಶಃ ನೌಕಾಸೇನೆಯ ಪಾಲಿಗೆ ತೇಲುವ ಏರ್‌ಬೇಸ್‌ಗಳು ಇದ್ದ ಹಾಗೆ. ಫೈಟರ್‌ ಜೆಟ್‌ಗಳನ್ನು ಈ ಯುದ್ಧನೌಕೆಯ ಮೇಲೆ ನಿಲ್ಲಿಸಿ ಇಡಲಾಗುತ್ತದೆ. ಯುದ್ಧ ವಿಮಾನವು ಇಲ್ಲಿಂದ ಟೇಕ್ ಆಫ್ ಆಗುತ್ತದೆ ಮತ್ತು ದಾಳಿ ಅಥವಾ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ ಇಲ್ಲಿಗೇ ಮರಳಿ ಬಂದಿಳಿಯುತ್ತದೆ. ಅನೇಕ ಬಾರಿ ಫೈಟರ್ ಜೆಟ್‌ಗಳು ರಾತ್ರಿಯಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಬೇಕಾಗುತ್ತದೆ. ಐಎನ್‌ಎಸ್ ವಿಕ್ರಾಂತ್ ನೈಟ್ ಲ್ಯಾಂಡಿಂಗ್ ಸಾಮರ್ಥ್ಯವನ್ನು ಹೊಂದಿರುವುದರಿಂದ ರಾತ್ರಿಯಲ್ಲೂ ಇಲ್ಲಿಂದಲೇ ವಿಮಾನಗಳನ್ನು ನಿರ್ವಹಿಸಬಹುದಾಗಿದೆ.

ಎರಡು ವಿಮಾನವಾಹಕ ನೌಕೆ ಹೊಂದಿರುವ ನೌಕಾಸೇನೆ: ಭಾರತೀಯ ನೌಕಾಪಡೆಯು ಪ್ರಸ್ತುತ ಎರಡು ವಿಮಾನವಾಹಕ ನೌಕೆಗಳನ್ನು ಹೊಂದಿದೆ. ಒಂದಕ್ಕೆ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಇನ್ನೊಂದಕ್ಕೆ ಐಎನ್‌ಎಸ್ ವಿಕ್ರಾಂತ್ ಎಂದು ಹೆಸರಿಡಲಾಗಿದೆ. ಐಎನ್‌ಎಸ್‌ ವಿಕ್ರಮಾದಿತ್ಯವನ್ನು ನೌಕಾಪಡೆಯು ಸಕ್ರಿಯ ಕರ್ತವ್ಯದಲ್ಲಿ ಬಳಸುತ್ತಿದೆ. ರಷ್ಯಾದಿಂದ ಖರೀದಿಸಿದ ಮಿಗ್‌-29ಕೆ ಯುದ್ಧ ವಿಮಾನವನ್ನು ಇದಕ್ಕಾಗಿ ನಿಯೋಜಿಸಲಾಗಿದೆ.

ಐಎನ್‌ಎಸ್ ವಿಕ್ರಾಂತ್ ಪ್ರಸ್ತುತ ಪ್ರಯೋಗ ಹಂತದಲ್ಲಿದೆ. ಇದಕ್ಕಾಗಿ ನೌಕಾಪಡೆ ಹೊಸ ಯುದ್ಧ ವಿಮಾನಗಳನ್ನು ಖರೀದಿಸಲಿದೆ. ಫ್ರಾನ್ಸ್‌ನ ರಫೇಲ್ ಎಂ ಮತ್ತು ಅಮೆರಿಕದ ಎಫ್-18 ಸೂಪರ್ ಹಾರ್ನೆಟ್ ನಡುವೆ ಡಿಕ್ಕಿಯಾಗಿದೆ. ಎರಡೂ ವಿಮಾನಗಳನ್ನು ನೌಕಾಪಡೆಯು ಬಳಸುವ ಅತ್ಯುತ್ತಮ ಯುದ್ಧ ವಿಮಾನಗಳೆಂದು ಪರಿಗಣಿಸಲಾಗಿದೆ.

INS Vikrant ಮೋದಿ ಕನಸಿನ ವಿಕ್ರಾಂತ್ ಅರ್ಭಟಕ್ಕೆ ಚೀನಾ ಅಮೆರಿಕಾಗೆ ನಡುಕ!

ಫೈಟರ್‌ ಜೆಟ್‌ಗಳನ್ನು ಸಾಮಾನ್ಯ ರನ್‌ವೇಗಳಲ್ಲಿ ಲ್ಯಾಂಡ್‌ ಮಾಡೋದಕ್ಕೂ ವಿಮಾನವಾಹಕ ಯುದ್ಧನೌಕೆಯ ಫ್ಲೈಟ್‌ ಡೆಕ್‌ನಲ್ಲಿ ಲ್ಯಾಂಡ್‌ ಮಾಡೋದಕ್ಕೂ ದೊಡ್ಡ ಮಟ್ಟದ ವ್ಯತ್ಯಾವಿರುತ್ತದೆ. ಅದಕ್ಕೆ ಕಾರಣ, ಯುದ್ಧನೌಕೆಯ ರನ್‌ವೇ, ಸಾಮಾನ್ಯ ರನ್‌ವೇಯಷ್ಟು ಉದ್ದವಾಗಿ ಇರೋದಿಲ್ಲ. ನೌಕೆಯ ಫ್ಲೈಟ್ ಡೆಕ್‌ನಲ್ಲಿ ಇಳಿಯುವಾಗ, ಪೈಲಟ್ ಜೆಟ್‌ನ ಟೈಲ್‌ಹುಕ್ ಅನ್ನು ಕೆಳಗಿಳಿಸುತ್ತಾನೆ ಮತ್ತು ಬಂಧಿಸುವ ತಂತಿಯ ಗುರಿಯನ್ನು ಹೊಂದುತ್ತಾನೆ, ಇದು ವಿಮಾನವನ್ನು ಬಲೆಗೆ ಬೀಳಿಸುತ್ತದೆ ಮತ್ತು ಅದರ ವೇಗವನ್ನು 250 km/hr ನಿಂದ 0 ಗೆ ಇಳಿಸುವ ಶಕ್ತಿಯನ್ನು ಹೊಂದಿರುತ್ತದೆ.

ಹಿಂದು ಮಹಾಸಾಗರದಲ್ಲಿ ಇಮ್ಮಡಿಯಾಯ್ತು ಭಾರತದ ಬಲ; ಇಲ್ಲಿದೆ 20 ಸಾವಿರ ಕೋಟಿಯ INS Vikrant ಚಿತ್ರ!

ನೈಟ್‌ ಟ್ರ್ಯಾಪ್‌ ಸಮಯದಲ್ಲಿ ಜೆಟ್‌ಅನ್ನು ಲ್ಯಾಂಡ್‌ ಮಾಡುವುದು ದೊಡ್ಡ ಸವಾಲು ಅದನ್ನೋದಕ್ಕೆ ಇನ್ನೊಂದು ಕಾರಣವೂ ಇದೆ. ಯುದ್ಧನೌಕೆ ಸಮುದ್ರದಲ್ಲಿ ಗಂಟೆಗೆ 40-50ರ ವೇಗದಲ್ಲಿ ಚಲಿಸುತ್ತಿರುತ್ತದೆ. ಯುದ್ಧವಿಮಾನ, ಯುದ್ಧನೌಕೆಯ ವೇಗವನ್ನು ನೋಡಿಕೊಂಡು ಜೆಟ್‌ಅನ್ನು ಲ್ಯಾಂಡ್‌ ಮಾಡುವ ಸವಾಲು ಹೊಂದಿರುತ್ತಾನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್