Mahindra Xylo ಬನ್ನೇರುಘಟ್ಟದಲ್ಲಿ ಪ್ರವಾಸಿಗರಿದ್ದ ಸಫಾರಿ ಗಾಡಿಯನ್ನು ಎಳೆದಾಡಿದ ಹುಲಿ... ಆನಂದ್‌ ಮಹೀಂದ್ರಾ ಹೇಳಿದ್ದೇನು..!

By Suvarna NewsFirst Published Jan 2, 2022, 6:05 PM IST
Highlights
  • ಸಫಾರಿ ವಾಹನವನ್ನು ಹಲ್ಲಿನಿಂದ ಕಚ್ಚಿ ಎಳೆದ ಹುಲಿ
  • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ
  • ವಿಡಿಯೋ ಪೋಸ್ಟ್‌ ಮಾಡಿದ ಆನಂದ್‌ ಮಹೀಂದ್ರಾ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರನ್ನು ಸಫಾರಿ ಕರೆ ತಂದ ವಾಹನವೊಂದು ರಸ್ತೆ ಮಧ್ಯೆಯೇ ಕೆಟ್ಟು ನಿಂತಿದ್ದು, ಈ ವೇಳೆ ಅಲ್ಲಿಗೆ ಬಂದ ಹುಲಿಯೊಂದು ಅದನ್ನು ಹಿಂಭಾಗದಿಂದ ಎಳೆಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೋಡುಗರು ಶಾಕ್‌ ಆಗಿದ್ದಾರೆ.

ವಿಡಿಯೋದಲ್ಲಿ ತೋರಿಸುವಂತೆ ಮಹೀಂದ್ರಾ ಕ್ಸೈಲೋ ವಾಹನದ ಬಂಪರ್‌ ಅನ್ನು ಹುಲಿ ಮತ್ತೆ ಮತ್ತೆ ಎಳೆಯುತ್ತಲೇ ಇದೆ. ನಂತರ ಹಿಡಿತ ಸಾಧಿಸಿದ  ಹುಲಿ ಅದನ್ನು ಸ್ವಲ್ಪ ಸ್ವಲ್ಪವೇ ತನ್ನ ಹಲ್ಲಿನಿಂದಲೇ ಹಿಂದಕ್ಕೆ ಎಳೆದಿದೆ. ಈ ಸಫಾರಿ ವಾಹನದ ತುಂಬಾ ಪ್ರವಾಸಿಗರಿದ್ದು, ವಾಹನ ಸ್ಟಾರ್ಟ್‌ ಆಗುತ್ತಿಲ್ಲ ಎಂದು ಹೇಳುತ್ತಿರುವುದು ಕೇಳಿಸುತ್ತಿದೆ. ಜೊತೆಗೆ ಸಫಾರಿ ವಾಹನದ ಒಳಗಿದ್ದ ಪ್ರವಾಸಿಗರು ತಾವಿದ್ದ ವಾಹನವನ್ನು ಹಿಂಭಾಗದಿಂದ ಹುಲಿ ಕಚ್ಚಿ ಎಳೆಯುತ್ತಿರುವುದನ್ನು ನೋಡಿ ಗಾಬರಿಯಾಗಿದ್ದಾರೆ. ಅಲ್ಲದೇ ಬೇಗ ಹೋಗಿ ಹೋಗಿ ಅದು ಹಿಂಭಾಗದಿಂದ ವಾಹನವನ್ನು ಎಳೆಯುತ್ತಿದೆ ಎಂದು ಇಂಗ್ಲೀಷ್‌ನಲ್ಲಿ ಮಹಿಳೆಯೊಬ್ಬರು ಹೇಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ. ಈ ವೇಳೆ ವಾಹನದ ಚಾಲಕ ಗಾಡಿ ಸ್ಟಾರ್ಟ್‌ ಆಗುತ್ತಿಲ್ಲ ಎನ್ನುತ್ತಿದ್ದಾರೆ.

Going around like wildfire. Apparently on the Ooty to Mysore Road near Theppakadu. Well, that car is a Xylo, so I guess I’m not surprised he’s chewing on it. He probably shares my view that Mahindra cars are Deeeliciousss. 😊 pic.twitter.com/A2w7162oVU

— anand mahindra (@anandmahindra)

 

ಇನ್ನು ಹುಲಿ ಹಲ್ಲಿನಿಂದ ಕಚ್ಚಿ ಎಳೆಯುತ್ತಿರುವ ವಾಹನ ಮಹೀಂದ್ರಾ ಸಂಸ್ಥೆಯ ಮಹೀಂದ್ರಾ ಕ್ಸೈಲೋ ಆಗಿದ್ದು, ಎಂದು ತಿಳಿದು ಬಂದಿದೆ. ಮಹೀಂದ್ರಾ ಸಂಸ್ಥೆಯ ಆನಂದ್‌ ಮಹೀಂದ್ರಾ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಹುಲಿ ಮಹೀಂದ್ರಾ ಕ್ಸೈಲೋ ವಾಹನವನ್ನು ಕಚ್ಚಿ ಎಳೆಯುತ್ತಿರುವುದನ್ನು ನೋಡಿ ನನಗೇನು ಆಶ್ಚರ್ಯವಾಗುತ್ತಿಲ್ಲ. ಬಹುಶಃ ಅದು ನನ್ನಂತೆ ಮಹೀಂದ್ರಾ ಕಾರು ತುಂಬಾ ಸಿಹಿಯಾಗಿದೆ ಎಂದು ಯೋಚಿಸುತ್ತಿರಬಹುದು ಎಂದು ಅವರು ಬರೆದುಕೊಂಡು ಈ ವಿಡಿಯೋವನ್ನು ಫೋಸ್ಟ್‌ ಮಾಡಿದ್ದಾರೆ. 

ಪ್ರವಾಸಿಗರ ಎದುರೇ ಬೀದಿ ನಾಯಿ ಮೇಲೆರಗಿದ ಹುಲಿ... ಭಯಾನಕ ವಿಡಿಯೋ ವೈರಲ್‌

ಈ ವಿಡಿಯೋವನ್ನು ಇದುವರೆಗೂ 5.1 ಲಕ್ಷ ಜನ ವೀಕ್ಷಿಸಿದ್ದು, 27 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ. ಅಲ್ಲದೇ ಸಾವಿರಕ್ಕೂ ಹೆಚ್ಚು ಜನ ಇದಕ್ಕೆ ಕಾಮೆಂಟ್‌ ಮಾಡಿದ್ದಾರೆ. ಬಹುಶಃ ಹುಲಿ ಗಾಡಿ ಸ್ಟಾರ್ಟ್‌ ಮಾಡಲು ಸಹಾಯ ಮಾಡುತ್ತಿರಬೇಕು ಎಂದು ಕಾಮೆಂಟ್‌ ಮಾಡಿದ್ದಾರೆ. ಹುಲಿಯ ಶಕ್ತಿ ಏನೆಂಬುದು ಇಲ್ಲಿ ಕಾಣಿಸುತ್ತಿದೆ ಎಂದು ಮತ್ತೊರ್ವರು ಕಾಮೆಂಟ್ ಮಾಡಿದ್ದಾರೆ. 

Viral Video| 6 ಹುಲಿಗಳು ಒಟ್ಟಿಗೆ ವಾಕ್‌: ವಿಡಿಯೋ ವೈರಲ್‌! 

ಆನಂದ್ ಮಹೀಂದ್ರ ಉದ್ಯಮದಲ್ಲಿ ಅದೆಷ್ಟು ಸಕ್ರಿಯರಾಗಿದ್ದಾರೋ, ಅಷ್ಟೇಯಾಗಿ ಸಾಮಾಜಿಕ ಜಾಲತಾಣದ ಅದರಲ್ಲೂ ಟ್ವಿಟರ್‌ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆನಂದ್ ಮಹೀಂದ್ರಾಗೆ ಟ್ವಿಟರ್‌ನಲ್ಲಿ 8.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆನಂದ್ ಮಹೀಂದ್ರ ವಿಶೇಷ ವ್ಯಕ್ತಿಗಳನ್ನು ಸಾಮಾಜಿಕ ತಾಲತಾಣದ ಮೂಲಕ ಪರಿಚಯಿಸಿದ್ದಾರೆ. ಅವರ ಮಾನವೀಯತೆ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಇನ್ನು ತಿರುಗೇಟು ನೀಡಬೇಕಾದ ಅನಿವಾರ್ಯತೆ ಇದ್ದಲ್ಲಿ ತಕ್ಕ ಉತ್ತರ ನೀಡಿ ಎಲ್ಲಾ ಟೀಕಾಕಾರ ಬಾಯಿ ಮುಚ್ಚಿಸುವಲ್ಲೂ ಆನಂದ್ ಮಹೀಂದ್ರ ಸೈ ಎನಿಸಿಕೊಂಡಿದ್ದಾರೆ. 

click me!