ಚೀನಾಕ್ಕಿಂತ, ಭಾರತದಂಥ ಮುಕ್ತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾಯೋಕೆ ಇಷ್ಟ: ದಲೈಲಾಮಾ

By Santosh Naik  |  First Published Sep 23, 2022, 9:42 AM IST

ಚೀನಾದ ಅಧಿಕಾರಿಗಳು  ದಲೈ ಲಾಮಾ ಅವರನ್ನು "ವಿವಾದಾತ್ಮಕ ಮತ್ತು ಪ್ರತ್ಯೇಕತಾವಾದಿ ವ್ಯಕ್ತಿ" ಎಂದೇ ಪರಿಗಣಿಸಿದ್ದು, ಅವರಿಗೆ ಭಾರತ ಆಶ್ರಯ ನೀಡಿದ್ದು ತಪ್ಪು ಎಂದು ವಾದಿಸುತ್ತಿದೆ.
 


ನವದೆಹಲಿ (ಸೆ. 23): ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ಗುರುವಾರ ಚೀನಾದ ವಿರುದ್ಧ ವಾಗ್ದಾಳಿ ನಡೆಸಿದರು, "ಕೃತಕ ಚೀನಾದ ಅಧಿಕಾರಿಗಳ ನಡುವೆ ಸಾಯುವುದಕ್ಕಿಂತ ಹೆಚ್ಚಾಗಿ ಭಾರತದ ಮುಕ್ತ ಪ್ರಜಾಪ್ರಭುತ್ವದಲ್ಲಿ ಸಾಯಲು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದಶಕಗಳಿಂದ ನೆಲೆಸಿರುವ ದಲೈಲಾಮಾ, ತಮ್ಮ ನಿವಾಸದಲ್ಲಿ ಯು ಮುಖಂಡರೊಂದಿಗೆ ಎರಡು ದಿನಗಳ ಸಂವಾದವನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್ (ಯುಎಸ್‌ಐಪಿ) ಆಯೋಜಿಸಿದ ಸಂವಾದದಲ್ಲಿ ಮಾತನಾಡಿದ ದಲೈ ಲಾಮಾ, “ನನ್ನ ಸಾಯುವ ದಿನಗಳು ಬಂದಾಗ, ಭಾರತದಲ್ಲೇ ನಾನು ಸಾಯಲು ಇಷ್ಟಪಡುತ್ತೇನೆ. ಭಾರತ ಪ್ರೀತಿಯನ್ನು ತೋರುವ ಜನರಿಂದ ತುಂಬಿದೆ. ಇಲ್ಲಿ ಕೃತಕತೆಗಳಿಲ್ಲ. ಹಾಗೇನಾದರೂ ನಾನು ಚೀನಾದ ಅಧಿಕಾರಿಗಳ ಎದುರು ಸಾವು ಕಂಡಲ್ಲಿ, ಬಹುಶಃ ನನ್ನ ಸಾವು ಕೂಡ ಕೃತಕವಾಗಿರುತ್ತದೆ.ಸ್ವತಂತ್ರ ಹಾಗೂ ಮುಕ್ತ ಪ್ರಜಾಪ್ರಭುತ್ವವಿರುವ ಈ ದೇಶದಲ್ಲಿ ಸಾಯುವುದನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಸಾವಿನ ಸಮಯದಲ್ಲಿ, ನಮ್ಮ ಸಾವಿಗೆ ನಿಜವಾದ ಭಾವನೆಗಳನ್ನು ತೋರಿಸುವ ವಿಶ್ವಾಸಾರ್ಹ ಸ್ನೇಹಿತರಿಂದ ಸುತ್ತುವರಿದಿರಬೇಕು ಎಂದು ಅವರು ಹೇಳಿದ್ದಾರೆ.

ಚೀನಾದ ಅಧಿಕಾರಿಗಳು ಸಾಮಾನ್ಯವಾಗಿ ದಲೈ ಲಾಮಾ ಅವರನ್ನು "ವಿವಾದಾತ್ಮಕ ಮತ್ತು ಪ್ರತ್ಯೇಕತಾವಾದಿ ವ್ಯಕ್ತಿ" ಎಂದು ಪರಿಗಣಿಸಿದ್ದಾರೆ. ದಲೈ ಲಾಮಾ ಅವರು ಟಿಬೆಟ್ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಚೀನಾದೊಂದಿಗೆ ಮಧ್ಯಂತರ ಮಾತುಕತೆಗೆ ಪ್ರತಿಪಾದಿಸಲು ವರ್ಷಗಳಿಂದ ಪ್ರಯತ್ನಿಸಿದ್ದಾರೆ. ಕಳೆದ ತಿಂಗಳು, ಮೂರು ವರ್ಷಗಳ ನಂತರ ದಲೈ ಲಾಮಾ ನವದೆಹಲಿಗೆ ಭೇಟಿ ನೀಡಿದ್ದರು.

ಅಂದಿನ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರ ಎದುರಲ್ಲೇ ಹೇಳಿದ್ದೆ: ಭಾರತದ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ (Former Prime Minister Dalai Lama) ಅವರ ಎದರೇ ತಾವು ಈ ಮಾತನ್ನು ಹೇಳಿದ್ದೆ ಎಂದು ದಲೈಲಾಮಾ ಹೇಳಿದ್ದಾರೆ. ನಾನು ಇನ್ನೊಂದಷ್ಟು 15-20 ವರ್ಷ ಬದುಕಿರಬಹುದು. ಆರೆ, ಸಾವು ಯಾವಾಗ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ, ನನ್ನ ಸಾವು ಭಾರತದಂಥ ದೇಶದಲ್ಲಿ ಆಗಬೇಕು ಎನ್ನುವುದು ಆಸೆ ಎಂದು ಹೇಳಿದ್ದೆ' ಎಂದರು

ದಲೈ ಲಾಮಾ ಅವರು ತಮ್ಮ ಆಧ್ಯಾತ್ಮಿಕ ಶ್ರೀಮಂತಿಕೆಯ (spiritual Wisdom) ಕಾರಣದಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ. ಅದಲ್ಲದೆ,  ಅವರು ಟಿಬೆಟಿಯನ್ನರ ಅತಿದೊಡ್ಡ ರಾಜಕೀಯ ಪ್ರತಿನಿಧಿಯೂ ಆಗಿದ್ದಾರೆ. ಚೀನಾ ಸರ್ಕಾರವು ದಲೈ ಲಾಮಾ ಅವರನ್ನು ವಿವಾದಾತ್ಮಕ ಮತ್ತು ಪ್ರತ್ಯೇಕತಾವಾದಿ ಎಂದು ಬಣ್ಣಿಸುತ್ತದೆ. ಮತ್ತೊಂದೆಡೆ, ದಲೈ ಲಾಮಾ ಅನೇಕ ಸಂದರ್ಭಗಳಲ್ಲಿ ಚೀನಾದ ನೀತಿಗಳನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ.

Tap to resize

Latest Videos

ದಲೈ ಲಾಮಾರನ್ನು ಟಿಬೆಟ್‌ನಿಂದ ಸೇಫಾಗಿ ಕರೆತಂದಿದ್ದ ಕೊನೆಯ ಭಾರತೀಯ ಯೋಧ ನಿಧನ!

1950 ರ ದಶಕದಲ್ಲಿ, ಚೀನಾ (China) ಅಕ್ರಮವಾಗಿ ಟಿಬೆಟ್ (Tibet) ಅನ್ನು ವಶಪಡಿಸಿಕೊಂಡಿತು. ಆಗ ದಲೈಲಾಮಾ ಭಾರತದಿಂದ ಆಶ್ರಯ ಕೋರಿದರು. ಆ ಸಮಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು ಮತ್ತು ಅವರಿಗೆ ಭಾರತದಲ್ಲಿ ಆಶ್ರಯ ನೀಡಿತ್ತು. ಟಿಬೆಟಿಯನ್ ಸರ್ಕಾರವು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ದಲೈಲಾಮಾ ಅವರು ಚೀನಾದೊಂದಿಗೆ ಮಾತುಕತೆ ಮೂಲಕ ಟಿಬೆಟ್ ಸಮಸ್ಯೆಯನ್ನು ಪರಿಹರಿಸಲು ಹಲವು ಬಾರಿ ಪ್ರಯತ್ನಿಸಿದ್ದಾರೆ. ಅದೇ ಸಮಯದಲ್ಲಿ, ದಲೈ ಲಾಮಾ ಬಗ್ಗೆ ಭಾರತ ಸರ್ಕಾರದ ನಿಲುವು ಯಾವಾಗಲೂ ಸ್ಪಷ್ಟವಾಗಿದೆ. ಭಾರತದ ಜನರು ಅವರನ್ನು ಶ್ರೇಷ್ಠ ಧಾರ್ಮಿಕ ನಾಯಕ ಎಂದು ಪರಿಗಣಿಸುತ್ತಾರೆ ಮತ್ತು ಗೌರವಿಸುತ್ತಾರೆ. ಭಾರತದಲ್ಲಿ, ಅವರು ತಮ್ಮ ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಅನುಸರಿಸಲು ಸ್ವಾತಂತ್ರ್ಯವನ್ನು ಹೊಂದಿದ್ದಾರೆ.

ನಮ್ಮವರೇ ದಲೈಲಾಮಾ ಉತ್ತರಾಧಿಕಾರಿ: ಭಾರತಕ್ಕೆ ಚೀನಾ ಪರೋಕ್ಷ ಎಚ್ಚರಿಕೆ!

ಮುಖ್ಯಮಂತ್ರಿಗಳ ಪರಿಹಾರ ನಿಧಿ ಮುಖ್ಯಸ್ಥರಿಗೆ 10 ಲಕ್ಷ ರೂ: ಸಚಿವ ಜೈ ರಾಮ್ ಠಾಕೂರ್ ಅವರು ದಲೈ ಲಾಮಾ ಟ್ರಸ್ಟ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ಚೆಕ್ ನೀಡಿದರು. ಮುಖ್ಯ ಪ್ರತಿನಿಧಿಗಳ ಕಚೇರಿಯ ವಂಗ್ಯಾಲ್ ಲಾಮಾ ಅವರು ಮುಖ್ಯಮಂತ್ರಿಗೆ ಈ ಚೆಕ್ ನೀಡಿದರು. ಈ ಪವಿತ್ರ ಕಾರ್ಯಕ್ಕಾಗಿ ಧಾರ್ಮಿಕ ಮುಖಂಡ ದಲೈಲಾಮಾ ಅವರಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು.

click me!