ಮತ್ತೊಂದು ಕೊಳವೆ ಬಾವಿ ದುರಂತ ನಡೆದಿದೆ. ಬರೋಬ್ಬರಿ 700 ಅಡಿ ಕೊಳವೆ ಬಾವಿಗೆ ಬಿದ್ದಿರುವ ಬಾಲಕಿ ರಕ್ಷಣೆಗಾಗಿ ಕೈಗಳ ಮೂಲಕ ಅಂಗಲಾಚುತ್ತಿರುವ ದೃಶ್ಯ ಎಂತವರ ಕಣ್ಣಲ್ಲೂ ನೀರು ಜಿನುಗಿಸುತ್ತೆ.
ಜೈಪುರ(ಡಿ.24) ಕೊಳವೆ ಬಾವಿ ಘೋರ ದುರಂತ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿದ್ದರೂ ಕಣ್ತೆರೆಸುತ್ತಿಲ್ಲ. ಆದರೆ ಹಲವರು ಮಾಡುವ ತಪ್ಪಿಗೆ ಬಲಿಯಾಗುತ್ತಿರುವುದು ಪುಟಾಣಿ ಮಕ್ಕಳು. ಇದೀಗ ಬರೋಬ್ಬರಿ 700 ಅಡಿ ಕೊಳವೆ ಬಾವಿಗೆ 3 ವರ್ಷದ ಬಾಲಕಿ ಬಿದ್ದು ಒದ್ದಾಡುತ್ತಿದ್ದಾಳೆ. ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿದೆ. ಆಳದ ಪ್ರಮಾಣ ಹೆಚ್ಚಾಗಿರುವ ಕಾರಣ ರಕ್ಷಣಾ ಕಾರ್ಯಾಚರಣೆ ಸವಾಲಾಗಿದೆ. ಬರೋಬ್ಬರಿ 150 ಅಡಿಯಿಂದ ಬಾಲಕಿ ತನ್ನನ್ನು ರಕ್ಷಿಸುವಂತೆ ಕೈಗಳನ್ನು ಮೇಲಕ್ಕೆತ್ತಿ ಅಂಗಲಾಚುತ್ತಿರುವ ದೃಶ್ಯ ಕರುಳು ಚುರ್ ಎನಿಸುವಂತಿದೆ. ಈ ಘಟನೆ ರಾಜಸ್ಥಾನದ ಕಿರಾತಪುರದ ಬದಿಯಾಲಿ ಧಾನಿಯಲ್ಲಿ ನಡೆದಿದೆ.
ಮೂರು ವರ್ಷದ ಬಾಲಕಿ ಹೆಸರು ಚೇತನಾ. ತಂದೆ ಜೊತೆ ಆಟವಾಡುತ್ತಿರುವಾಗ ಬಾಲಕಿ 700 ಅಡಿಯ ಕೊಳವೆ ಬಾವಿಗೆ ಬಿದ್ದಿದ್ದಾಳೆ. ನೀರಿಲ್ಲದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೇ ಬಿಡಲಾಗಿತ್ತು. ಇದರ ಪಕ್ಕ ಗಿಡ ಗಂಟೆಗಳು, ಹುಲ್ಲುಗಳು ಬೆಳೆದು ಕೊಳವೆ ಬಾವಿಯ ಯಾವುದೇ ಗುರುತು ಇರಲಿಲ್ಲ. ಇದರ ಪರಿಣಾಮ 3 ವರ್ಷದ ಚೇತನಾ ಕೊಳವೆಗೆ ಬಿದ್ದಿದ್ದಾಳೆ. ಸುಮಾರು 150 ಅಡಿಯಲ್ಲಿ ಬಾಲಕಿ ಸಿಲುಕಿ ಕೊಂಡಿದ್ದಾಳೆ.
undefined
ವಿಜಯಪುರ: ಬಾವಿಗೆ ಬಿದ್ದು ಬದುಕಿದ ಮಗು, ತಂದೆಗೆ ಎಫ್‌ಐಆರ್ ಸಂಕಷ್ಟ
ಬಾಲಕಿ ಕೊಳವೆ ಬಾವಿಗೆ ಬೀಳುತ್ತಿದ್ದಂತೆ ತಂದೆ ಚೀರಾಡಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣವೆ ಸ್ಥಳೀಯರು ಧಾವಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಜಿಲ್ಲಾಡಳಿತ ಸ್ಥಳಕ್ಕೆ ಆಗಮಿಸಿದೆ. ಇತ್ತ ಪೊಲೀಸರು,ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ಕೊಳೆವೆ ಬಾವಿ ಅಡಿಯಲ್ಲಿ ಸಿಲುಕಿಕೊಂಡಿರುವ ಬಾಲಕಿಗೆ ಆಮ್ಲಜನ ಪೂರೈಕೆ ಮಾಡಲಾಗಿದೆ. ಇತ್ತ ಜೆಸಿಬಿ ಹಾಗೂ ಇತರ ಯಂತ್ರಗಳ ಮೂಲಕ ಮತ್ತೊಂದು ಬದಿಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಕಳೆದ 15ಕ್ಕೂ ಹೆಚ್ಚು ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.
ರಕ್ಷಣಾ ಕಾರ್ಯಾಚರಣೆ ಆರಂಭದಲ್ಲೇ ಆಮ್ಲಜನ ಜೊತೆಗೆ ಕ್ಯಾಮಾರ ಹಾಕಲಾಗಿದೆ. ಈ ಕ್ಯಾಮೆರಾದಲ್ಲಿ ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯಗಳು ಸೆರೆಯಾಗಿದೆ. ಕೈಗಳ ಮೂಲಕ ರಕ್ಷಣೆಗೆ ಅಂಗಲಾಚುತ್ತಿದ್ದಾಳೆ. ಇತ್ತ ಹುಕ್ ಟೆಕ್ನಿಕ್ ಮೂಲಕ ಬಾಲಕಿಯ ರಕ್ಷಿಸು ಕಾರ್ಯ ನಡೆಯುತ್ತಿದೆ. ಆದರೆ ಈಗಾಗಲೇ ಕಾರ್ಯಾಚರಣೆ ಸುದೀರ್ಘ ಗಂಟೆ ತೆಗೆದುಕೊಂಡಿದೆ. ಇತ್ತ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಆದರೆ ಇದುವರೆಗೂ ಬಾಲಕಿ ರಕ್ಷಣೆ ಸಾಧ್ಯವಾಗಿಲ್ಲ.
Kotputli, Rajasthan: A three-year-old girl, Chetna, fell into a borewell while playing in Kotputli on Monday afternoon. CCTV footage showed her waving for help. The administration launched a rescue operation, continuing efforts late into the night. The child’s cries were heard… pic.twitter.com/tbbgALw2Vo
— IANS (@ians_india)
ಹುಕ್ ಟೆಕ್ನಿಕ್ ಮೂಲಕ ಬಾಲಕಿಯ ರಕ್ಷಣೆಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ಬಾಲಕಿಯ ಪೋಷಕರಿಂದ ಅನುಮತಿ ಪಡೆದುಕೊಂಡಿದೆ. ಕಾರಣ ಈ ಕಾರ್ಯಾಚರಣೆಯಲ್ಲಿ ಬಾಲಕಿಗೆ ಗಾಯವಾಗುವ ಸಾಧ್ಯತೆ ಇದೆ. ಇದು ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳು ಇದೆ. ಹುಕ್ ಟೆಕ್ನಿಕ್ ಯಶಸ್ವಿಯಾದರೆ ಬಾಲಕಿಯನ್ನು ಹೊರತೆಗೆಯಲು ರಕ್ಷಣಾ ತಂಡಗಳಿಗೆ ಸಾಧ್ಯವಾಗಲಿದೆ. ಆದರೆ ಸ್ವಲ್ಪ ಯಾಮಾರಿದರರೂ ಬಾಲಕಿಯ ಜೀವನಕ್ಕೆ ಮತ್ತಷ್ಟು ಅಪಾಯವಾಗಲಿದೆ.
ಹುಕ್ ಟೆಕ್ನಿಕ್ ಮೂಲಕ ಬಾಲಕಿಯ ರಕ್ಷಣೆಗೆ ಅನುಮತಿ ನೀಡಿರುವ ಕಾರಣ ಈಗಾಗಲೇ ಈ ತಂತ್ರಜ್ಞಾನದ ಮೂಲಕ ಬಾಲಕಿಯ ರಕ್ಷಣೆಗೆ ಪ್ರಯತ್ನಗಳು ನಡೆಯುತ್ತಿದೆ. ಕೊಳವೆ ಬಾವಿಯೊಳಕ್ಕೆ ಕಬ್ಬಿಣದ ರಾಡ್ ಇಳಿಸಿ ಅದರಲ್ಲಿರುವ ಹುಕ್ ಮೂಲಕ ಬಾಲಕಿಯನ್ನು ಮೇಲಕ್ಕೆತ್ತುವ ವಿಧಾನವಾಗಿದೆ. ಇತ್ತ ಜೆಸಿಬಿ ಮೂಲಕ ಬಾಲಕಿ ಇರುವ ಅಡಿ ತಲುಪಲು ಕನಿಷ್ಠ 5 ದಿನಗಳ ಅವಶ್ಯಕತೆ ಇದೆ ಎಂದು ಹೇಳಲಾಗಿದೆ. ಬಾಲಕಿಯನ್ನು ಅದಷ್ಟು ಬೇಗ ರಕ್ಷಿಸಲು ಇದೀಗ ಹುಕ್ ಟೆಕ್ನಿಕ್ ಬಳಸಲಾಗುತ್ತಿದೆ. ಪೋಷಕರು ಮಗಳ ಸುರಕ್ಷಿತವಾಗಿ ಹೊರಬರಲು ಬೇಡುತ್ತಿದ್ದಾರೆ. ಕುಟುಂಬಸ್ಥರು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗುತ್ತದೆ.
ಬೋರ್ ಫೇಲಾಯ್ತಾ?, ಮುಚ್ಚದಿದ್ದರೆ 1 ವರ್ಷ ಜೈಲು!