ಮಾಸ್ಕ್‌ಹಾಕದ ಮಿನಿಸ್ಟರ್ ಮಗನ ಪ್ರಶ್ನೆ ಮಾಡಿದ್ದಕ್ಕೆ ಮಹಿಳಾ ಅಧಿಕಾರಿಗೆ ಸಿಕ್ಕ ಬಹುಮಾನ!

Published : Jul 12, 2020, 04:10 PM ISTUpdated : Jul 12, 2020, 04:15 PM IST
ಮಾಸ್ಕ್‌ಹಾಕದ ಮಿನಿಸ್ಟರ್ ಮಗನ ಪ್ರಶ್ನೆ ಮಾಡಿದ್ದಕ್ಕೆ ಮಹಿಳಾ ಅಧಿಕಾರಿಗೆ ಸಿಕ್ಕ ಬಹುಮಾನ!

ಸಾರಾಂಶ

ಮಿನಿಸ್ಟರ್ ಮಗನ ಪ್ರಶ್ನೆ ಮಾಡಿದ್ದಕ್ಕೆ ರಾಜೀನಾಮೆ ಪಡೆದುಕೊಂಡರು/ ಸಚಿವರ ಮಗನ ಪ್ರಶ್ನೆ ಮಾಡಿದ್ದ ಮಹಿಳಾ ಕಾನ್ ಸ್ಟೇಬಲ್/ ಪೊಲೀಸ್ ಸಿಬ್ಬಂದಿಯಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ

ಅಹಮದಾಬಾದ್(ಜು.  12)  ಮಾಸ್ಕ್ ಧರಿಸದೇ ಕೊರೋನಾ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ಗುಜರಾತ್ ಸಚಿವರೊಬ್ಬರ ಪುತ್ರನ ತಡೆದಿದ್ದಕ್ಕೆ ಈ ಮಹಿಳಾ ಪೊಲೀಸ್ ಸಿಬ್ಬಂದಿ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬಂದಿದೆ.

ಸೂರತ್ ನಲ್ಲಿ ಬುಧವಾರ ರಾತ್ರಿ 10.30  ರ ವೇಳೆ ಸಚಿವರ ಪುತ್ರನನ್ನು ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ ಕಾನ್ಸ್ಟೇಬಲ್ ಸುನೀತಾ ಯಾದವ್ ಗೆ ಸಚಿವರ ಪುತ್ರ ಧಮ್ಕಿ ಹಾಕಿದ್ದ. ಸುನೀತಾ ಮೇಲಿನ ಅಧಿಕಾರಿಗಳಿಗೆ ದೂರು ನೀಡಿದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳದೆ ಸಿಬ್ಬಂದಿಯಿಂದಲೇ ರಾಜೀನಾಮೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಮಾತ್ರ ಅಲ್ಲ, 10  ಜಿಲ್ಲೆಗಳಲ್ಲಿ ಲಾಕ್ ಡೌನ್

ಗುಜರಾತ್ ಆರೋಗ್ಯ ಸಚಿವ ಕುಮಾರ್ ಕನಾನಿಯ ಪುತ್ರ ಪ್ರಕಾಶ್ ಮತ್ತು ಪೊಲೀಸ್ ಸಿಬ್ಬಂದಿ ಸುನೀತಾ ನಡುವೆ ನಡೆದ ವಾಗ್ವಾದದ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ವಾಗ್ವಾದ ನಡೆಯುತ್ತಿದ್ದಾಗ ಮೇಲಿನ ಅಧಿಕಾರಿ ಅಲ್ಲಿಗೆ ಬಂದಿದ್ದಾರೆ. ತಕ್ಷಣ ಸುನೀತಾ ಅವರನ್ನು ಅಲ್ಲಿಂದ ಕಳುಹಿಸಲಾಗಿದೆ. ಸುನೀತಾ ಅವರೇ ರಾಜೀನಾಮೆ ನೀಡಿದ್ದಾರೆ ಎಂದು ಎಸಿಪಿ ಪಿಎಲ್ ಚೌಧರಿ ತಿಳಿಸಿದ್ದಾರೆ.

ಅತ್ಯಾಚಾರ ಆರೋಪಿಯಿಂದ ಲಂಚ ಪಡೆದ ಮಹಿಳಾ ಪಿಎಸ್‌ಐ

ಸೂರತ್ ಪ್ರಕರಣ ಪೊಲೀಸ್ ಆಯುಕ್ತರ ಗಮನಕ್ಕೂ ಬಂದಿದ್ದು ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಎಸಿಪಿ ಸಿಕೆ ಪಟೇಲ್ ತಿಳಿಸಿದ್ದಾರೆ. ಆರೋಗ್ಯ  ಸಮಸ್ಯೆ ಎದುರಿಸುತ್ತಿದ್ದ ಮಾವನವರನ್ನು ನೋಡಲು ನನ್ನ ಮಗ ತೆರಳುತ್ತಿದ್ದ ವೇಳೆ ಪೊಲೀಸರು ಅಡ್ಡ ಹಾಕಿದ್ದಾರೆ ಎಂದು ಆರೋಗ್ಯ ಸಚಿವ ಕುಮಾರ್ ಕನಾನಿ ಹೇಳಿಕೆ ನೀಡಿದ್ದಾರೆ.

ನನ್ನ ಮಗನನ್ನು ಅಡ್ಡ ಹಾಕಿ ಇದು ಶಾಸಕರ ಕಾರು, ನೀವು ಹೇಗೆ ಇದರೊಳಗೆ ಪ್ರಯಾಣ ಮಾಡುತ್ತಿರುವಿರಿ ಎಂದೆಲ್ಲ ಪ್ರಶ್ನೆ ಕೇಳಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಒಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಪ್ರಶ್ನೆ ಮಾಡಿದ ಕಾರಣಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಾಲ ಕಟ್ಟುವ ಸಲುವಾಗಿ 100ಕ್ಕೂ ಅಧಿಕ ಪುರುಷರ ಜೊತೆ ಹೆಂಡ್ತಿಯ ಸೆ*ಕ್ಸ್‌; ವಿಡಿಯೋ ಮಾಡಿ ಹಣ ವಸೂಲಿ ಮಾಡ್ತಿದ್ದ ಗಂಡ!
2026 5 ರಾಶಿಗೆ ಅತ್ಯುತ್ತಮ ವರ್ಷ, ಕೈ ತುಂಬಾ ಹಣ ಜೊತೆ ಕೋಟ್ಯಾಧಿಪತಿ ಯೋಗ ಬಾಬಾ ವಂಗಾ ಪ್ರಕಾರ