ಬಿಜೆಪಿ ಶಾಸಕ ರಾಜು ಕುಮಾರ್‌ಗೆ 4 ವರ್ಷ ಜೈಲು ಶಿಕ್ಷೆ ತೀರ್ಪು ನೀಡಿದ ಕೋರ್ಟ್, ಏನಿದು ಸೆಲೆಬ್ರೇಶನ್ ಪ್ರಕರಣ?

Published : Jul 04, 2026, 05:03 PM IST
Court Orders

ಸಾರಾಂಶ

ಬಿಜೆಪಿ ಶಾಸಕ ರಾಜು ಕುಮಾರ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದ್ದು ಮಾತ್ರವಲ್ಲ, 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡಲು ಸೂಚಿಸಿದೆ. ಏನಿದು ಬಿಜೆಪಿ ಶಾಸಕನ ಸೆಲೆಬ್ರೇಷನ್ ಪ್ರಕರಣ?

ನವದೆಹಲಿ (ಜು.04) ತನ್ನ ಫಾರ್ಮ್ ಹೌಸ್‌ನಲ್ಲಿ ಸಂಭ್ರಮಾಚರಣೆ ನಡೆಸಿ ಎಡವಟ್ಟು ಮಾಡಿಕೊಂಡ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ದೆಹಲಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೊತೆಗೆ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡಲು ಸೂಚಿಸಿದೆ. ಕಳೆದ ತಿಂಗಳು ಕೋರ್ಟ್ ರಾಜು ಕುಮಾರ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಇದೀಗ ಶಿಕ್ಷೆ ಪ್ರಕಟಿಸಿದೆ. ಈ ಮೂಲಕ 2018ರ ಪ್ರಕರಣದಲ್ಲಿ ಶಾಸಕ ರಾಜು ಕುಮಾರ್ ಸಿಂಗ್ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ.

ಏನಿದು ಪ್ರಕರಣ?

2018ರ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ಬಿಹಾರದ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ದಕ್ಷಿಣ ದೆಹಲಿಯಲ್ಲಿರುವ ತನ್ನ ಫಾರ್ಮ್ ಹೌಸ್‌ನಲ್ಲಿ ಅದ್ಧೂರಿ ಪಾರ್ಟಿ ಆಯೋಜಿಸಿದ್ದರು. ಹಲವರನ್ನು ಆಹ್ವಾನಿಸಿದ್ದರು. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ರಾಜು ಕುಮಾರ್ ಸಿಂಗ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕೈಯಲ್ಲಿದ್ದ ರಿವಾಲ್ವರ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದರು. ಆದರೆ ಹೀಗೆ ಹಾರಿಸಿದ ಗುಂಡು ಅದೇ ನ್ಯೂ ಇಯರ್ ಪಾರ್ಟಿಯಲ್ಲಿದ್ದ ಅರ್ಚನಾ ಗುಪ್ತಾಗೆ ತಾಗಿತ್ತು. ಅರ್ಚನಾ ಗುಪ್ತ ಈ ಘಟನೆಯಲ್ಲಿ ಮೃತಪಟ್ಟಿದ್ದರು.

ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಲು ಮನವಿ

ಕೋರ್ಟ್‌ನ ಸ್ಪೆಷಲ್ ಜಡ್ಜ್ ವಿಶಾಲ್ ಗೊಂಗೆ ಈ ಪ್ರಕರಣದಲ್ಲಿ ಇಂದು ಶಿಕ್ಷೆ ಪ್ರಕಟಿಸಿದ್ದಾರೆ. ಈ ಶಿಕ್ಷೆ ಪ್ರಕಟಕ್ಕೂ ಮುನ್ನ ರಾಜು ಕುಮಾರ್ ಸಿಂಗ್ ಜಡ್ಜ್ ಬಳಿ ವಿಶೇಷ ಮನವಿ ಮಾಡಿದ್ದರು. ಪಿಸ್ತೂಲ್‌ನ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ಕೇವಲ ಸಂಭ್ರಮಾಚರಣೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ಮಾಡಿದ್ದೇನೆ. ಯಾರಿಗೂ ಗುಂಡು ತಗುಲದಂತೆ ಆಕಾಶಕ್ಕೆ ಪಿಸ್ತೂಲ್ ಹಿಡಿದು ಗುಂಡು ಹಾರಿಸಿದ್ದೆ.ಆದರೆ ವಿಜ್ಞಾನದ ಅರಿವಿಲ್ಲದ ಕಾರಣ ಗುಂಡು 45ರ ಹರೆಯದ ಮಹಿಳೆಗೆ ತಾಗಿತ್ತು ಎಂದು ಜಡ್ಜ್ ಮುಂದೆ ಹೇಳಿದ್ದಾರೆ. ಹೀಗಾಗಿ ಜೈಲು ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ರಾಜು ಕುಮಾರ್ ಸಿಂಗ್ ಮನವಿ ತಿರಸ್ಕರಿಸಿದ ಜಡ್ಜ್ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಇಷ್ಟೇ ಅಲ್ಲ ಮೃತ ಮಹಿಳೆ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚಿಸಿದ್ದಾರೆ.

ಅನರ್ಹಗೊಳ್ಳಲಿದೆ ಶಾಸಕ ಸ್ಥಾನ

ಶಾಸಕರು ಹಾಗೂ ಸಂಸದರು 2 ಅಥವಾ 2 ವರ್ಷಕ್ಕಿಂತ ಮೇಲ್ಪಟ್ಟು ಜೈಲು ಶಿಕ್ಷೆಗೆ ಒಳಪಟ್ಟರೆ ಅವರ ಶಾಸಕ ಅಥವಾ ಸಂಸದ ಸ್ಥಾನ ಅನರ್ಹವಾಗಲಿದೆ. ಇದೀಗ ರಾಜು ಕುಮಾರ್ ಸಿಂಗ್ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಆಟೋಮ್ಯಾಟಿಕ್ ಆಗಿ ಶಾಸಕ ರಾಜು ಕುಮಾರ್ ಸಿಂಗ್ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

No Gold Bride: ಸಾಲ ಮಾಡಿ ಮದುವೆಯಾಗೋ ಈ ಕಾಲದಲ್ಲಿ, ಗುಲಗಂಜಿ ಚಿನ್ನವಿಲ್ಲ; ನಿರಾಭರಣಳಾಗಿ ಮಂಟಪಕ್ಕೆ ಬಂದ ವಧು!
ಪ್ರತಿ 12 ವರ್ಷಕ್ಕೊಮ್ಮೆ ದೇವರ ವಿಗ್ರಹಗಳನ್ನ ಬದಲಿಸೋದ್ಯಾಕೆ? ಪುರಿ ಜಗನ್ನಾಥನ ರಹಸ್ಯ..!