ಗೋಮಾಂಸ ತಿಂದವ್ರನ್ನೂ ಹಿಂದೂ ಧರ್ಮಕ್ಕೆ ಮರಳಿ ಕರೆತರಬಹುದು: RSS ನಾಯಕ ದತ್ತಾತ್ರೇಯ ಹೊಸಬಾಳೆ

By BK AshwinFirst Published Feb 2, 2023, 11:36 PM IST
Highlights

ಇತರ ಧರ್ಮಗಳಿಗೆ ಮತಾಂತರಗೊಂಡವರಿಗೆ ನಮ್ಮ ಬಾಗಿಲು ಮುಚ್ಚಲು ಸಾಧ್ಯವಿಲ್ಲ ಎಂದು ಎಂ.ಎಸ್ ಗೋಳ್ವಾಲ್ಕರ್ ಅವರನ್ನು ಉಲ್ಲೇಖಿಸಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. 

ಜೈಪುರ (ಫೆಬ್ರವರಿ 2, 2023): ಗೋಮಾಂಸ ತಿಂದವರು ಕೂಡ ಹಿಂದೂ ಧರ್ಮಕ್ಕೆ ಮರು ಮತಾಂತರಗೊಳ್ಳಬಹುದು ಮತ್ತು ಅವರಿಗೆ ಬಾಗಿಲು ಮುಚ್ಚಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಬುಧವಾರ ಹೇಳಿದ್ದಾರೆ. ಜೈಪುರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ನಾಯಕ, ಹಿಂದೂ' ಎಂಬ ಪದವು ಈಗಾಗಲೇ ನಮ್ಮ ಸಂವಿಧಾನ ಮತ್ತು ದೇಶವನ್ನು ಪ್ರವೇಶಿಸಿದ್ದು, ಇದು ಇತಿಹಾಸದ ಸತ್ಯ. ಹಿಂದೂ ಎಂಬುದು ಒಂದು ಗುರುತು ಮತ್ತು ಜನರು ಸೇರಿರುವ ಸಂಸ್ಕೃತಿ ಎಂದೂ ಅವರು ಹೇಳಿದರು.

ಎಂ.ಎಸ್. ಗೋಳ್ವಾಲ್ಕರ್ (M.S. Golwalkar) ಅವರು ಹಿಂದೂಗಳ (Hindu) ಬಗ್ಗೆ ನಿಖರವಾದ ವ್ಯಾಖ್ಯಾನವನ್ನು ವಿವರಿಸದಿದ್ದರೂ, ವೀರ್ ಸಾವರ್ಕರ್ (Veer Savarkar) ಅವರು ತಮ್ಮ ಬರಹಗಳಲ್ಲಿ ಸಿಂಧೂ ನದಿಯವರೆಗಿನ (Sindhu River) ಭೂಮಿಯನ್ನು ತಮ್ಮ ಭೂಮಿ ಎಂದು ಪರಿಗಣಿಸುವವರು ಹಿಂದೂಗಳು ಎಂದು ಹೇಳಿದ್ದಾರೆ ಎಂದೂ ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದರು. ಇತರ ಧರ್ಮಗಳಿಗೆ ಮತಾಂತರಗೊಂಡವರಿಗೆ ನಮ್ಮ ಬಾಗಿಲು ಮುಚ್ಚಲು ಸಾಧ್ಯವಿಲ್ಲ ಎಂದು ಎಂ.ಎಸ್ ಗೋಳ್ವಾಲ್ಕರ್ ಅವರನ್ನು ಉಲ್ಲೇಖಿಸಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. 

ಇದನ್ನು ಓದಿ: ಬಡತನ, ನಿರುದ್ಯೋಗವೆಂಬ ರಾಕ್ಷಸರನ್ನು ಸಂಹರಿಸಬೇಕು: RSS ನಾಯಕ ದತ್ತಾತ್ರೇಯ ಹೊಸಬಾಳೆ

ಇತರ ಧರ್ಮಗಳಿಗೆ ಮತಾಂತರಗೊಂಡವರನ್ನು ಸಹ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಬಹುದು ಎಂದು ಗೋಳ್ವಾಲ್ಕರ್‌ ಹೇಳಿದ್ದರು. ಅವರು ಕೆಲವು ರೀತಿಯ ಒತ್ತಡದಲ್ಲಿ ಗೋಮಾಂಸವನ್ನು ತಿಂದಿರಬಹುದು. ಆದರೂ, ನಾವು ಅವರಿಗೆ ಬಾಗಿಲು ಮುಚ್ಚಲು ಸಾಧ್ಯವಿಲ್ಲ. ಅವರು ಸಹ ಹಿಂದೂ ಧರ್ಮಕ್ಕೆ ಮರಳಬಹುದು. ಹಾಗೂ, 'ಸಂಘ'ವನ್ನು (Sangh) ಅರ್ಥಮಾಡಿಕೊಳ್ಳಲು, ಒಬ್ಬರು ತಮ್ಮ ಮನಸ್ಸನ್ನು ಮಾತ್ರವಲ್ಲದೆ ಅವರ ಹೃದಯವನ್ನೂ ಸಹ ಓಪನ್‌ ಆಗಿಡಬೇಕು ಎಂದೂ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದು, ಪರೋಕ್ಷವಾಗಿ ಆರ್‌ಎಸ್‌ಎಸ್‌ ವಿರೋಧಿಗಳಿಗೆ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಪದೇ ಪದೇ ಟೀಕೆ ಮಾಡುವವರ ವಿರುದ್ಧ ತಿರುಗೇಟು ಕೊಟ್ಟಿದ್ದಾರೆ. 

ಒಮ್ಮೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರನ್ನು ಸಂಘ ಎಂದರೇನು ಎಂದು ಕೇಳಿದಾಗ, ಸಂಘದ ಸಂಸ್ಥಾಪಕರಿಗೆ ಮಾತ್ರ ಸಂಘ ಎಂದರೇನು ಎಂದು ತಿಳಿದಿದೆ, ಆದರೆ ನಾವೆಲ್ಲರೂ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಒಬ್ಬರಿಗೆ ಸಂಘವನ್ನು ಅರ್ಥಮಾಡಿಕೊಳ್ಳಲು ಹೃದಯ ಬೇಕು, ಆದರೆ ಮೆದುಳಲ್ಲ ಎಂದು ಹೇಳಿದ್ದರು ಎಂದೂ ದತ್ತಾತ್ರೇಯ ಹೊಸಬಾಳೆ ಹೇಳಿಕೊಂಡಿದ್ದಾರೆ.  

ಇದನ್ನೂ ಓದಿ: ಸ್ವ-ಇಚ್ಛೆಯಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡ್ರೆ ಅಭ್ಯಂತರವಿಲ್ಲ: ದತ್ತಾತ್ರೇಯ ಹೊಸಬಾಳೆ

ಇನ್ನು, ಸಂಘವು ಇಡೀ ಹಿಂದೂ ಸಮಾಜವನ್ನು ತನ್ನ ಕುಟುಂಬವೆಂದು ಪರಿಗಣಿಸುತ್ತದೆ ಎಂದೂ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಹೇಳಿದರು. ಹಿಂದೂ ಸಮಾಜದ ಎಲ್ಲಾ ಸದಸ್ಯರು ಸಂಘ ಪರಿವಾರದ ಭಾಗವಾಗಿದ್ದಾರೆ. ಹಾಗಾಗಿ ನಮ್ಮ ಜನರಲ್ಲಿ ಬದಲಾವಣೆ ತರುವುದು ಮತ್ತು ಅವರಲ್ಲಿ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಭಾವನೆಗಳನ್ನು ಬೆಳೆಸುವುದು ನಮ್ಮ ಕರ್ತವ್ಯ. ಆಗ ಮಾತ್ರ ನಾವು ಸಮಾಜವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಸಮಾಜವನ್ನು ಒಗ್ಗೂಡಿಸುವ ಮತ್ತು ಶಕ್ತಿಯುತವಾಗಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ನಾವು ರಾಷ್ಟ್ರೀಯ ಏಕತೆಗಾಗಿ ಕೆಲಸ ಮಾಡಬೇಕು, ಗೋಸಂರಕ್ಷಣೆಯನ್ನು ಸಬಲೀಕರಣಗೊಳಿಸಬೇಕು ಮತ್ತು ಧಾರ್ಮಿಕ ಮತಾಂತರಗಳ ವಿರುದ್ಧ ಹೋರಾಡಬೇಕು ಎಂದೂ ದತ್ತಾತ್ರೇಯ ಹೊಸಬಾಳೆ ಅವರು ಕಿವಿ ಮಾತು ಹೇಳಿದರು.

ಅಲ್ಲದೆ, ದೇಶದ ಜನರು ಈಗ ಸಂಘದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೊಂದಿರುವುದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂದು ಕೇಂದ್ರ ಹಂತವನ್ನು ತಲುಪಿದೆ ಎಂದೂ ದತ್ತಾತ್ರೇಯ ಹೊಸಬಾಳೆ ಹೇಳಿದರು. 

ಇದನ್ನೂ ಓದಿ: ಹಿಂದುತ್ವ ಎನ್ನುವುದು ಎಡವೂ ಅಲ್ಲ, ಬಲವೂ ಅಲ್ಲ: ದತ್ತಾತ್ರೇಯ ಹೊಸಬಾಳೆ!

click me!