
ನವದೆಹಲಿ(ಫೆ.2) ಪ್ರಧಾನಿ ನರೇಂದ್ರ ಮೋದಿ 2019ರಿಂದ ಇಲ್ಲೀವರೆಗೆ ಏಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ, ಮೋದಿಗಾಗಿ ಸರ್ಕಾರ ಖರ್ಚು ಮಾಡಿದ ವೆಚ್ಚ ಎಷ್ಟು? ಈ ಎಲ್ಲಾ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಈ ಕುರಿತು ಕೇಂದ್ರ ಸಚಿವ ವಿ ಮುರಳೀಧರನ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. 2019ರಿಂದ ಇಲ್ಲೀವೆರಗೆ ಪ್ರಧಾನಿ ನರೇಂದ್ರ ಮೋದಿ 21 ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ 22.76 ಕೋಟಿ ರೂಪಾಯಿ ಖರ್ಚು ಮಾಡಿದೆ. ಇನ್ನು ಭಾರತದ ರಾಷ್ಟ್ರಪತಿ 2019ರಿಂದ ಇಲ್ಲೀವರೆಗೆ(ರಾಮನಾಥ್ ಕೋವಿಂದ್ ಹಾಗೂ ದ್ರೌಪದಿ ಮುರ್ಮು) ಒಟ್ಟು 8 ವಿದೇಶಿ ಪ್ರವಾಸ ಮಾಡಿದ್ದಾರೆ. ಇದಕ್ಕಾಗಿ ಭಾರತ ಸರ್ಕಾರ 6.24 ಕೋಟಿ ರೂಪಾಯಿ ಖರ್ಚು ಮಾಡಿದೆ.
ರಾಷ್ಟ್ರಪತಿಗಳ ವಿದೇಶಿ ಭೇಟಿಗೆ ಭಾರತ ಸರ್ಕಾರ 6,24,31,424 ರೂಪಾಯಿ ಖರ್ಚು ಮಾಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ವಿದೇಶಿ ಪ್ರವಾಸಕ್ಕೆ 22,76,76,934 ರೂಪಾಯಿ ವೆಚ್ಚ ಮಾಡಲಾಗಿದೆ. ಇದರ ಜೊತೆಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ವಿದೇಶಿ ಪ್ರವಾಸಕ್ಕೆ 20,87,01,475 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
Budget 2023: ಅಮೃತ ಕಾಲದ ಬಜೆಟ್, ಭವಿಷ್ಯದ ಭಾರತಕ್ಕೆ ಬುನಾದಿ: ಪ್ರಧಾನಿ ಮೋದಿ
2019ರಿಂದ ಇಲ್ಲೀವರೆಗೆ ವಿದೇಶಾಂಗ ಸಚಿವ ಜೈಶಂಕರ್ ಅತೀ ಹೆಚ್ಚು ವಿದೇಶ ಪ್ರವಾಸ ಮಾಡಿದ್ದಾರೆ. ಜೈಶಂಕರ್ ಈ ಅವಧಿಯಲ್ಲಿ 86 ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ. ಇದಕ್ಕಾಗಿ 20.80 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇನ್ನು 2019ರಿಂದ ಇಲ್ಲೀವರಗೆ ಪ್ರಧಾನಿ ಮೋದಿ ಜಪಾನ್‌ಗೆ 3 ಬಾರಿ ಪ್ರವಾಸ ಮಾಡಿದ್ದಾರೆ. ಅಮೆರಿಕ ಹಾಗೂ ಯುಎಇಗೆ ಎರಡೆರಡು ಬಾರಿ ಪ್ರವಾಸ ಮಾಡಿದ್ದಾರೆ.
2019ರಿಂದ ಇಲ್ಲೀವರೆಗೆ ರಾಷ್ಟ್ರಪತಿ ಒಟ್ಟು 8 ವಿದೇಶಿ ಪ್ರವಾಸ ಮಾಡಿದ್ದಾರೆ. ಇದರಲ್ಲಿ 7 ಪ್ರವಾಸ ಈ ಹಿಂದಿನ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಮಾಡಿದ್ದಾರೆ. ಇನ್ನು ದ್ರೌಪದಿ ಮುರ್ಮು ಯುಕೆ ಪ್ರವಾಸ ಕೈಗೊಂಡಿದ್ದಾರೆ. ಬ್ರಿಟನ್ ರಾಣಿ ನಿಧನ ವೇಳೆ ಕಳೆದ ಸೆಪ್ಟೆಂಬರ್‌ನಲ್ಲಿ ದ್ರೌಪದಿ ಮುರ್ಮು ಲಂಡನ್ ಪ್ರವಾಸ ಮಾಡಿದ್ದರು.
ಮೊದಲ ಬಾರಿಗೆ ಶ್ವೇತ ಭವನಕ್ಕೆ ಪ್ರಧಾನಿ ಮೋದಿ ಪ್ರವಾಸ: ಜೋ ಬೈಡೆನ್ ಆತಿಥ್ಯಕ್ಕೆ ಶೀಘ್ರದಲ್ಲೇ ಡೇಟ್ ಫಿಕ್ಸ್..!
ಬಜೆಟ್ ಬಳಿಕ ವಿದೇಶಿ ಪ್ರವಾಸ ದುಬಾರಿ
ವಿದೇಶಗಳಿಗೆ ಪ್ರಯಾಣ ಬೆಳೆಸುವವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಇದರಿಂದಾಗಿ ವಿದೇಶಿ ಪ್ರವಾಸಕ್ಕೆ ಹೋಗುವವರಿಗೆ ತಗಲುವ ವೆಚ್ಚದಲ್ಲಿ ಹೆಚ್ಚಳವಾಗಲಿದೆ. ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್)ವನ್ನು ಶೇ.5ರಿಂದ 20ಕ್ಕೆ ಹೆಚ್ಚಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಇದಕ್ಕೆ ಟ್ರಾವೆಲ್ ಏಜೆನ್ಸಿಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ. ನಾವು ವಿದೇಶಿ ಪ್ರವಾಸವನ್ನು ಮತ್ತಷ್ಟುಸುಲಭವಾಗಿ ನಡೆಸಲು ಅನುಕೂಲ ಆಗುವಂತೆ ವ್ಯವಸ್ಥೆ ಮಾಡಬೇಕು ಎಂದು ಕೇಳಿಕೊಂಡಿದ್ದೇವು. ಆದರೆ ಸರ್ಕಾರ ಏಕಾಏಕಿ ಶೇ.5ರಷ್ಟಿದ್ದ ತೆರಿಗೆಯನ್ನು ಶೇ.20ಕ್ಕೆ ಹೆಚ್ಚಿಸಲು ನಿರ್ಧರಿಸಿರುವುದು ಆಘಾತವುಂಟು ಮಾಡಿದೆ ಎಂದು ಅವಲತ್ತುಕೊಂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ