ಪಾಕ್ ನಿಂದ ಬರ್ತಿದ್ದ ಹಿಂದೂಗಳ ಜೊತೆ ನಂಟು ಹೊಂದಿದ್ದ ವಸ್ತು, ಆಗ್ಬಹುದು ದುಬಾರಿ

Published : May 07, 2025, 03:01 PM ISTUpdated : May 07, 2025, 03:04 PM IST
ಪಾಕ್ ನಿಂದ ಬರ್ತಿದ್ದ ಹಿಂದೂಗಳ ಜೊತೆ ನಂಟು ಹೊಂದಿದ್ದ ವಸ್ತು, ಆಗ್ಬಹುದು ದುಬಾರಿ

ಸಾರಾಂಶ

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಮೂಲಕ 9 ಪಾಕ್ ಭಯೋತ್ಪಾದಕ ನೆಲೆಗಳನ್ನು ನಾಶಗೊಳಿಸಿದೆ. ಮಸೂದ್ ಕುಟುಂಬ ಸರ್ವನಾಶವಾಗಿದೆ. ಭಾರತ-ಪಾಕ್ ವ್ಯಾಪಾರ ಸ್ಥಗಿತಗೊಂಡಿದೆ. ಕಲ್ಲುಪ್ಪು, ಮುಲ್ತಾನಿ ಮಿಟ್ಟಿಯಂತಹ ಪಾಕ್ ಮೂಲದ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ. ಒಣಹಣ್ಣುಗಳಿಗೆ ಪರ್ಯಾಯ ಆಯ್ಕೆಗಳಿವೆ.

ಪಹಲ್ಗಾಮ್ ದಾಳಿ (Pahalgam attack ) ಗೆ ಭಾರತ ಪ್ರತೀಕಾರ ತೆಗೆದುಕೊಂಡಿದೆ. ಆಪರೇಶನ್ ಸಿಂಧೂರ್ (Operation Sindhur) ಮೂಲಕ ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ನೆಲೆಗಳನ್ನು ದ್ವಂಸಗೊಳಿಸಿದೆ. ಅಮಾಯಕರನ್ನು ಬಲಿ ಪಡೆದ ಪಾಪಿ, ಭಯೋತ್ಪಾದಕ ಮಸೂದ್ನ ಇಡೀ ಕುಟುಂಬ ಸರ್ವನಾಶವಾಗಿದೆ.  ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತ್ರ  ಭಾರತ, ಪಾಕ್ ನೊಂದಿಗಿನ ಎಲ್ಲ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ಭಾರತ (India)ದಿಂದ ಪಾಕಿಸ್ತಾನಕ್ಕೆ ಯಾವುದೇ ವಸ್ತು ಆಮದಾಗ್ತಿಲ್ಲ. ಹಾಗೆ ಪಾಕಿಸ್ತಾನದಿಂದ ಯಾವುದೇ ವಸ್ತು ಭಾರತಕ್ಕೆ ಆಮದಾಗ್ತಿಲ್ಲ.  

ಪಾಕ್ ಜೊತೆ ವ್ಯಾಪಾರ ಸ್ಥಗಿತಗೊಳಿಸೋದ್ರಿಂದ ಭಾರತಕ್ಕೆ ಹೆಚ್ಚಿನ ನಷ್ಟವೇನಿಲ್ಲ. ಪಾಕ್ ನಿಂದ ಬರ್ತಿದ್ದ ವಸ್ತುಗಳನ್ನು ಭಾರತ ಬೇರೆ ದೇಶಗಳಿಂದ ತರಿಸ್ಬಹುದು, ಆದ್ರೆ ಒಂದೆರಡು ವಸ್ತುವಿಗೆ ಮಾತ್ರ ಭಾರತ ಪಾಕನ್ನು ಮಾತ್ರ ಅವಲಂಬಿಸಿತ್ತು. ಅದ್ರ ಬೆಲೆ ಈಗ ದುಬಾರಿಯಾಗುವ ಸಾಧ್ಯತೆ ಇದೆ. ಅದು ಭಾರತದಲ್ಲಿ ಸಿಗೋದು ಕಷ್ಟವಾಗ್ಬಹುದು.  

ಪಾಕ್ ನಿಂದ ಮಾತ್ರ ಆಮದಾಗ್ತಿದ್ದ ವಸ್ತು :  

ಕಲ್ಲು ಉಪ್ಪು : ಕಲ್ಲುಪ್ಪು ಹಿಂದೂಗಳೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ.  ಪಾಕಿಸ್ತಾನದ ಪರ್ವತಗಳಲ್ಲಿ ಮಾತ್ರ ಕಂಡು ಬರುವುದು ಕಲ್ಲುಪ್ಪು.  ಭಾರತವು ಪಾಕಿಸ್ತಾನದಿಂದ ದೊಡ್ಡ ಪ್ರಮಾಣದಲ್ಲಿ ಸೇಂಧ್ ಉಪ್ಪನ್ನು ಆಮದು ಮಾಡಿಕೊಳ್ಳುತ್ತಿತ್ತು. ಭಾರತದಲ್ಲಿ, ಹಿಂದೂ ಹಬ್ಬಗಳ ಸಮಯದಲ್ಲಿ ಉಪವಾಸದ ಸಮಯದಲ್ಲಿ ಕಲ್ಲು ಉಪ್ಪನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತೆ.  ಕಲ್ಲುಪ್ಪಿನಲ್ಲಿ ಸೋಡಿಯಂ ಕ್ಲೋರೈಡ್ ಜೊತೆಗೆ, ಇತರ ಕೆಲವು ಖನಿಜ ಅಂಶಗಳು ಸಹ ಕಂಡುಬರುತ್ತವೆ. ಇವು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಹಿಂದೂ ಧರ್ಮದಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ, ಅನೇಕ ಜನರು ನವರಾತ್ರಿ, ಏಕಾದಶಿ ಅಥವಾ ಇತರ ಧಾರ್ಮಿಕ ಉಪವಾಸಗಳ ಸಮಯದಲ್ಲಿ ತಮ್ಮ ಆಹಾರದಲ್ಲಿ ಸಾಮಾನ್ಯ ಉಪ್ಪಿನ ಬದಲಿಗೆ ಕಲ್ಲು ಉಪ್ಪನ್ನು ಬಳಸುತ್ತಾರೆ. ಉಪವಾಸಕ್ಕಾಗಿ ತಯಾರಿಸಿದ ಆಲೂಗಡ್ಡೆ ಟಿಕ್ಕಿ, ಸಾಬುದಾನ ಖಿಚಡಿ ಮುಂತಾದ ಭಕ್ಷ್ಯಗಳಿಗೆ ಕಲ್ಲು ಉಪ್ಪನ್ನು ಸೇರಿಸಲಾಗುತ್ತದೆ. ಈಗ ಪಾಕಿಸ್ತಾನದಿಂದ ಕಲ್ಲುಪ್ಪು ಆಮದು ಸಂಪೂರ್ಣ ಬಂದಾಗಿದೆ. ಇದ್ರಿಂದ ಭಾರತದಲ್ಲಿ ಕಲ್ಲುಪ್ಪಿನ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಕಲ್ಲುಪ್ಪು ಸಿಗೋದೇ ಕಷ್ಟವಾಗ್ಬಹುದು.

ಮುಲ್ತಾನಿ ಮಿಟ್ಟಿ : ಪಾಕಿಸ್ತಾನ ಹೊರತುಪಡಿಸಿ ಜಗತ್ತಿನ ಬೇರೆಲ್ಲಿಯೂ ಕಂಡುಬರದ ಇನ್ನೊಂದು ವಸ್ತು ಅಂದ್ರೆ ಅದು ಮುಲ್ತಾನಿ ಮಿಟ್ಟಿ. ಸೌಂದರ್ಯವರ್ಧಕಗಳಲ್ಲಿ ಬಳಸಲಾಗುವ ಮುಲ್ತಾನಿ ಮಿಟ್ಟಿಯನ್ನು ಭಾರತ , ಪಾಕಿಸ್ತಾನದಿಂದ ಆಮದು ಮಾಡಿಕೊಳ್ತಿತ್ತು. ಪಾಕಿಸ್ತಾನದ ಸರಕುಗಳನ್ನು ಯಾವುದೇ ಮೂರನೇ ದೇಶದ ಮೂಲಕವೂ ಭಾರತಕ್ಕೆ ಆಮದು ಮಾಡಿಕೊಳ್ಳಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ  ಮುಲ್ತಾನಿ ಮಿಟ್ಟಿ ಬೆಲೆ ಕೂಡ  ದುಬಾರಿಯಾಗಬಹುದು.

ಒಣ ಹಣ್ಣು – ತಾಜಾ ಹಣ್ಣು : ಭಾರತ ಪಾಕಿಸ್ತಾನದಿಂದ ಒಣ ಹಣ್ಣುಗಳು ಮತ್ತು ತಾಜಾ ಹಣ್ಣುಗಳನ್ನು ಕೂಡ ಆಮದು ಮಾಡಿಕೊಳ್ಳುತ್ತಿತ್ತು. ಆದ್ರೆ ಈ ವಿಷ್ಯದಲ್ಲಿ  ಭಾರತಕ್ಕೆ ಪಾಕ್ ಮಾತ್ರ ಆಯ್ಕೆ ಅಲ್ಲ. ಇತರ ಹಲವು ಆಯ್ಕೆಗಳಿವೆ. ಭಾರತ ಬೇರೆ ದೇಶಗಳ ಜೊತೆ ಒಪ್ಪಂದ ಮಾಡಿಕೊಳ್ಳುವವರೆಗೆ ಒಣ ಹಣ್ಣುಗಳ ಬೆಲೆಗಳು ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ. 

ಪಾಕಿಸ್ತಾನದಿಂದ ಭಾರತಕ್ಕೆ ಆಮದಾಗ್ತಿದ್ದ ವಸ್ತುಗಳು :  ಕಲ್ಲಂಗಡಿ,  ಸಿಮೆಂಟ್, ಕಲ್ಲು ಉಪ್ಪು, ಒಣ ಹಣ್ಣುಗಳು, ಕಲ್ಲು, ಸುಣ್ಣ, ಹತ್ತಿ, ಉಕ್ಕು, ಕನ್ನಡಕಕ್ಕೆ ಬಳಸುವ ಆಪ್ಟಿಕಲ್ ವಸ್ತುಗಳು, ಸಾವಯವ ರಾಸಾಯನಿಕಗಳು, ಚರ್ಮದ ವಸ್ತುಗಳು, ತಾಮ್ರ, ಗಂಧಕ, ಬಟ್ಟೆ, ಚಪ್ಪಲಿಗಳು, ಮುಲ್ತಾನಿ ಮಿಟ್ಟಿ.

ಭಾರತದಿಂದ ಪಾಕಿಸ್ತಾನಕ್ಕೆ ರಫ್ತಾಗ್ತಿದ್ದ ವಸ್ತು : ಭಾರತದಿಂದ ಪಾಕಿಸ್ತಾನಕ್ಕೆ ಹೋಗುವ ವಸ್ತುಗಳಲ್ಲಿ ತೆಂಗಿನಕಾಯಿ, ಹಣ್ಣುಗಳು, ತರಕಾರಿಗಳು, ಚಹಾ, ಮಸಾಲೆಗಳು, ಸಕ್ಕರೆ, ಎಣ್ಣೆಕಾಳುಗಳು, ಪಶು ಆಹಾರ, ಡೈರಿ ಉತ್ಪನ್ನಗಳು, ಪ್ಲಾಸ್ಟಿಕ್ ಉತ್ಪನ್ನಗಳು, ಔಷಧಗಳು, ಮೋಟಾರ್ ಭಾಗಗಳು, ಬಣ್ಣಗಳು ಮತ್ತು ಕಾಫಿ ಸೇರಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು