Operation Sindoor: ಕೊಂದಿದ್ದನ್ನು ಹೋಗಿ ಮೋದಿಗೆ ತಿಳಿಸು ಅಂದಿದ್ದ... ತಿಳಿಸಿದೆ ಅಷ್ಟೇ...

Published : May 07, 2025, 02:37 PM ISTUpdated : May 07, 2025, 09:08 PM IST
Operation Sindoor: ಕೊಂದಿದ್ದನ್ನು ಹೋಗಿ ಮೋದಿಗೆ ತಿಳಿಸು ಅಂದಿದ್ದ... ತಿಳಿಸಿದೆ ಅಷ್ಟೇ...

ಸಾರಾಂಶ

ಪೆಹಲ್ಗಾಮ್‌ನಲ್ಲಿ ೨೬ ಹಿಂದೂಗಳ ಹತ್ಯೆಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ ನಡೆಸಿದೆ. ಶಿವಮೊಗ್ಗದ ಪಲ್ಲವಿ, ಘಟನೆಯ ಪ್ರತ್ಯಕ್ಷದರ್ಶಿ, ಮೋದಿಗೆ ತಿಳಿಸಲು ಉಗ್ರರು ಹೇಳಿದ್ದಾಗಿ ತಿಳಿಸಿದ್ದರು. ಈ ದಾಳಿ ಬಾಲಾಕೋಟ್ ನಂತರದ ವ್ಯಾಪಕ ಗಡಿಯಾಚೆಗಿನ ಕಾರ್ಯಾಚರಣೆಯಾಗಿದೆ. ಮಂಜುನಾಥ್ ಕುಟುಂಬಕ್ಕೆ ಸೇಡು ತೀರಿಸಿದ ಸಮಾಧಾನವಿದೆ.

ಹಿಂದೂಗಳನ್ನು ಗುರಿಯಾಗಿಸಿಕೊಂಡು ಕಾಶ್ಮೀರದ ಪೆಹಲ್ಗಾಮ್​ನಲ್ಲಿ ನಡೆದ 26 ಮಂದಿಯ ಬರ್ಬರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಇದಾಗಲೇ ಆಪರೇಷನ್​ ಸಿಂದೂರ ರೆಡಿಯಾಗಿದ್ದು, ಉಗ್ರರ ನಿರ್ನಾಮ ಕಾರ್ಯ ನಡೆಯುತ್ತಿದೆ. ಉಗ್ರರ ಗುಂಡೇಟಿಗೆ ಬಲಿಯಾಗಿರುವ, ಹಾಗೂ ದಾಳಿ ನಡೆದ ತಕ್ಷಣ ಮೊದಲಿಗೆ ಆ ಬಗ್ಗೆ ಮಾಹಿತಿ ನೀಡಿದ್ದು ಶಿವಮೊಗ್ಗದ ಪಲ್ಲವಿ ಅವರು.  ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ ಅವರ ಪತ್ನಿ ಪಲ್ಲವಿ, ತಮ್ಮ ಪತಿಯ ಸಾವನ್ನು ಕಣ್ಣಾರೆ ಕಂಡವರು. ಮಗನ ಎದುರೇ ಪತಿಯನ್ನು ಉಗ್ರರು ಹತ್ಯೆ ಮಾಡಿದ್ದರು.  ಪಹಲ್ಗಾಮ್‌ ಬಳಿ ರಸ್ತೆಯಲ್ಲಿ ಬೇಲ್‌ಪುರಿ ತಿನ್ನುತ್ತಿರುವಾಗ ಸೇನಾ ಸಮವಸ್ತ್ರದಲ್ಲಿ ಬಂದಿದ್ದ ಉಗ್ರರು ಹೆಚ್ಚಿನವರಿಗೆ  ಹೆಸರು ಹಾಗೂ  ಧರ್ಮದ ಬಗ್ಗೆ ಕೇಳಿದ್ದಾರೆ. ಮುಸ್ಲಿಮರು ಅಲ್ಲ ಎಂದು ಗೊತ್ತಾದ ಬಳಿಕ ಗುಂಡು ಹಾರಿಸಿದ್ದಾರೆ ಎಂದು  ಪಲ್ಲವಿ ಅವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು.  ಈ ವೇಳೆ ನನ್ನ ಹಾಗೂ ನನ್ನ ಮಗನನ್ನೂ ಕೊಲ್ಲಿ ಎಂದು ಉಗ್ರರ ಎದುರು ನಾನು ಕಣ್ಣೀರಿಟ್ಟೆ. ಆದರೆ, ನೀನು ಹೆಂಗಸು ನಿನ್ನನ್ನು ಕೊಲ್ಲೋದಿಲ್ಲ. ಇದನ್ನ ನೀನು ಮೋದಿಗೆ ಹೋಗಿ ತಿಳಿಸು ಎಂದು ಆತ ಹೇಳಿದ್ದ ಎಂದಿದ್ದರು.

ಇದೀಗ ಇದಕ್ಕೆ ಸಂಬಂಧಿಸಿದ ಕಾರ್ಟೂನ್​ಗಳು ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕೊಲೆ  ಮಾಡಿದ್ದನ್ನು ಮೋದಿಗೆ ತಿಳಿದು ಅಂದಿದ್ನಲ್ಲ, ತಿಳಿಸಿದೆ ಅಷ್ಟೇ... ಎನ್ನುವ ಶೀರ್ಷಿಕೆಯ ಜೊತೆ ಈ ಕಾರ್ಟೂನ್​ ವೈರಲ್​ ಆಗುತ್ತಿದ್ದು, ಎಷ್ಟೊಂದು ಅರ್ಥಗರ್ಭಿತವಾಗಿದೆ. ಪ್ರಧಾನಿ ನರೇಂದ್ರ  ಮೋದಿಯವರಿಗೆ ತಿಳಿಸಿದ್ದರಿಂದ ಇಂದು ಏನಾಯಿತು ಎನ್ನುವುದರ ಹಿನ್ನೆಲೆಯಲ್ಲಿ ಈ ಕಾರ್ಟೂನ್​ ರಚಿಸಲಾಗಿದೆ.  

Operation Sindoor: ಸಿಂದೂರ ಕಸಿದ ಉಗ್ರರ ಮಟ್ಟ ಹಾಕಲು ನಿಂತ ಸೋಫಿಯಾ, ವ್ಯೋಮಿಕಾ

ಆಪರೇಷನ್​ ಸಿಂದೂರದ ಬಳಿಕ ಮಾತನಾಡಿರುವ ಪಲ್ಲವಿ ಅವರು, ಇದೊಂದು ಅತ್ಯಂತ ದಿಟ್ಟ ನಿರ್ಧಾರ. ಉಗ್ರರಿಗೆ ಶಿಕ್ಷೆಯಾಗಬೇಕು. ಹಿಂದೂಗಳ ಮಾರಣಹೋಮ ನಡೆಸಿದವರನ್ನು ಬಿಡಬಾರದು ಎಂದು ಹೇಳಿದ್ದಾರೆ. ಇದೇ ವೇಳೆ, ಉಗ್ರ ದಾಳಿಯಲ್ಲಿ ಮೃತಪಟ್ಟ  ಮಂಜುನಾಥ್ ತಾಯಿ ಸುಮತಿ ಕೂಡ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ನಡೆಸುವುದರ ಮೂಲಕ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ.  ಪ್ರಧಾನಿ ಮೋದಿಯವರು ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡಿದ್ದಾರೆ. ಎಲ್ಲದಕ್ಕೂ ಸೂಕ್ತ ಸಮಯ ಬಂದೇ ಬರುತ್ತದೆ. ನಾವು ಕಾಯಬೇಕು.  ನಮ್ಮನ್ನು ಬಿಟ್ಟು ಹೋಗಿರುವ ಮಂಜುನಾಥ್ ಮತ್ತೆ ಬರುವುದಿಲ್ಲ. ಆದರೆ ನಮ್ಮ ಕುಟುಂಬಕ್ಕೆ ಶಾಂತಿ ಸಿಕ್ಕಿದೆ. ದುಃಖದಲ್ಲಿದ್ದರೂ ಇಂದೊಂದು ಸಂತೋಷದ ಸಂಗತಿ ಎಂದು ಹೇಳಿದ್ದಾರೆ ಸುಮತಿ. 
 
ಅಷ್ಟಕ್ಕೂ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ ಭಾರತ ಇದುವರೆಗೆ ನಡೆಸಿದ ಯಾವುದೇ ಸೇನಾ ಕಾರ್ಯಾಚರಣೆಗಿಂತ ಭಿನ್ನವಾಗಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆಯೂ ಭಾರತದ ಭದ್ರತಾಪಡೆ ಬಾಲಕೋಟ್ ಕಾರ್ಯಾಚರಣೆಯ ನಂತರ ನಡೆಸಿದ ಅತ್ಯಂತ ವಿಸ್ತಾರವಾದ ಹಾಗೂ ಗಡಿಯಾಚೆಗೆ ನಡೆಸಿದ ದಾಳಿಯಾಗಿದೆ. ಬರೀ ಇಷ್ಟೇ ಅಲ್ಲ, ಈ ದಾಳಿಯೂ ಭಾರತದ ಭದ್ರತಾಪಡೆಗಳ ಕಾರ್ಯತಂತ್ರದಲ್ಲಿ ಆದ ಬದಲಾವಣೆಯಿಂದಲೂ ಗಮನ ಸೆಳೆಯುತ್ತಿದೆ. 2016 ರಲ್ಲಿ ನಡೆದ ಉರಿ ಸರ್ಜಿಕಲ್ ಸ್ಟ್ರೈಕ್‌ ಹಾಗೂ, 2019 ರಲ್ಲಿ ನಡೆದ ಬಾಲಕೋಟ್ ವೈಮಾನಿಕ ದಾಳಿಗಳು ಹಾಗೂ ಭಾರತ ನಡೆಸಿದ ಇತರ ದಾಳಿಗಳಿಗೆ ಒಂದು ನಿಗದಿತ ಪ್ರಮಾಣ ಹಾಗೂ ವ್ಯಾಪ್ತಿಗೆ ಸೀಮಿತವಾಗಿತ್ತು. ಆದರೆ ನಿನ್ನೆ ರಾತ್ರಿ ನಡೆದ ಆಪರೇಷನ್ ಸಿಂಧೂರ್ ತಾಂತ್ರಿಕವಾಗಿ ಬಹಳ ಬಲಿಷ್ಠ ಹಾಗೂ ವಿಸ್ತಾರವಾಗಿತ್ತು ಮತ್ತು ಭಾರತ ಇದುವರೆಗೆ ನಡೆಸಿದ ಯಾವುದೇ ಸೇನಾ ಕಾರ್ಯಾಚರಣೆಗಿಂತ ಇದು ವಿಭಿನ್ನವಾಗಿತ್ತು. ಪಾಕಿಸ್ತಾನ ಆಕ್ರಮಿತ ಪ್ರದೇಶದೊಳಗೆ ನುಗ್ಗಿ ನಡೆಸಿದ ಈ ದಾಳಿಯೂ ಭಾರತದ ಭದ್ರತಾಪಡೆಗಳು ತಮ್ಮ ಹಿಂದಿನ ತಂತ್ರಗಳಿಂದ ಹೊರಬಂದು ಹೊಸತಂತ್ರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿವೆ ಎಂಬುದನ್ನು ಬಹಿರಂಗಪಡಿಸಿದೆ. 

ಆಪರೇಷನ್ ಸಿಂಧೂರ್‌ಗೆ Shameless ಎಂದ ಟ್ರಂಪ್: ಯುಎಇ, ಇಸ್ರೇಲ್ ಹೇಳಿದ್ದೇನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌