ದೆಹಲಿಯಿಂದ ಆಡಳಿತ ನಡೆಸುತ್ತಿದ್ದ ಮೊಘಲ್ ದೊರೆಗಳಲ್ಲಿ ಅನೇಕರು ದಕ್ಷರಾಗಿದ್ದರು, ಕೆಲ ರಾಜರು ದೇಶದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ, ಅದಕ್ಷ ರಾಜನಾಗಿದ್ದ ಫರುಕ್ಷಿಯಾರ್ ಕೈಗೊಂಡ ಒಂದೇ ಒಂದು ನಿರ್ಧಾರ ಭಾರತದ ಚರಿತ್ರೆಯ ಪುಟಗಳ ಕರಾಳ ಅಧ್ಯಾಯಕ್ಕೆ ಕಾರಣವಾಯಿತು.
ಭಾರತ ತನ್ನ ಇತಿಹಾಸದಲ್ಲಿ ಎಂತೆಂತಹ ವೈಭವವನ್ನು, ಕರಾಳತೆಯನ್ನು ಕಂಡಿದೆ. ನೂರಾರು ರಾಜಮನೆತನಗಳು, ದೇಶಪ್ರೇಮಿ ರಾಜರು (Patriatric Kings), ಅವರ ನಡುವಿನ ಯುದ್ಧ, ರಾಜಪ್ರಭುತ್ವಗಳ ವೈಭವ, ಸುವಿಶಾಲ ಪ್ರದೇಶದಲ್ಲಿ ಅವು ದಕ್ಷತೆಯಿಂದ ಆಡಳಿತ ನಡೆಸುತ್ತಿದ್ದ ರೀತಿಯನ್ನು ಕಂಡಿದೆ. ಹಾಗೆಯೇ, ಆಫ್ಗಾನಿಸ್ತಾನದ ಕಡೆಯಿಂದ ದಾಳಿಗೈದ ಮುಸ್ಲಿಂ ರಾಜರು ದೇಶದ ವೈಭವದ ಮೇಲೆ ನಡೆಸಿದ ಹಾನಿಗೆ ಸಾಕ್ಷಿಯಾಗಿದೆ. ನಮ್ಮ ದೇಶ ಕಂಡ ಅತ್ಯಂತ ಸಬಲ ಮುಸ್ಲಿಂ ರಾಜಮನೆತನವೆಂದರೆ ಮೊಘಲರದ್ದು. ಮೊಘಲ್ ಸಾಮ್ರಾಜ್ಯದಲ್ಲಿ ಬಾಬರ್ ನಿಂದ ಔರಂಗಜೇಬ್ ವರೆಗಿನ ಆಡಳಿತವನ್ನು ಸಾಮಾನ್ಯವಾಗಿ ಹೆಸರಿಸಲಾಗುತ್ತದೆ. ಈ ಪ್ರಭುತ್ವದಲ್ಲಿ ಅನೇಕ ರಾಜರು ಸರ್ವಜನರನ್ನೂ ಸಮಭಾವದಲ್ಲಿ ಕಂಡಿದ್ದರೆ, ಅನೇಕರು ಹಿಂದು ದ್ವೇಷಿಯಾಗಿದ್ದರು ಎನ್ನುವುದು ಜಗಜ್ಜಾಹೀರಾಗಿರುವ ಸಂಗತಿ. ಹಿಂದುಗಳಿಗೆ ಪ್ರತ್ಯೇಕ ತೆರಿಗೆ ವಿಧಿಸಲಾಗುತ್ತಿತ್ತು, ಮತಾಂತರಕ್ಕೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಅತ್ಯಂತ ಪ್ರಬಲ ಸಾಮ್ರಾಜ್ಯವಾಗಿದ್ದರೂ ಔರಂಗಜೇಬ್ ನಂತರ ಮೊಘಲರ ದಕ್ಷತೆ ಕ್ಷೀಣಿಸುತ್ತ ಸಾಗಿತ್ತು. ಅದರಲ್ಲೂ ಒಬ್ಬ ರಾಜ ತೆಗೆದುಕೊಂಡ ನಿರ್ಣಯದಿಂದ ಕೇವಲ ಮೊಘಲ್ ಸಾಮ್ರಾಜ್ಯ ಮಾತ್ರವಲ್ಲ, ಇಡೀ ಭಾರತದ ಭವಿಷ್ಯ ಮುಂದಿನ 200ಕ್ಕೂ ಅಧಿಕ ವರ್ಷಗಳ ಕಾಲ ವಿದೇಶಿಗರ ಕೈಯಲ್ಲಿ ನಲುಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತು ಎನ್ನುವುದು ಐತಿಹಾಸಿಕ ಸತ್ಯ.
ಔರಂಗಜೇಬ್ ನಂತರ ಆಡಳಿತಕ್ಕೆ (Rule) ಬಂದ ರಾಜರು (Emperors) ತಮ್ಮ ಸಾಮ್ರಾಜ್ಯದ (Empire) ದಕ್ಷತೆ ಕಾಪಾಡಿಕೊಳ್ಳಲು ಸೋತಿದ್ದರು. ಇದು ಮೊಘಲ್ (Mughal) ಸಾಮ್ರಾಜ್ಯದ ಅವನತಿಗೆ ಪ್ರಮುಖ ಕಾರಣವಾಗಿತ್ತು. ಜತೆಗೆ, ಔರಂಗಜೇಬ್ ಮೊಮ್ಮಗ ಫರುಕ್ಷಿಯಾರ್ (Farrukshiyar) ಎಂಬಾತ ತೆಗೆದುಕೊಂಡ ಮೂರ್ಖ ನಿರ್ಣಯದಿಂದ ದೇಶದ ಭವಿಷ್ಯವೇ ಬದಲಾಗಿ ಹೋಯಿತು. ದೇಶದ ಪ್ರಗತಿ (Development) ಕುಂಠಿತವಾಯಿತು. ಆರ್ಥಿಕವಾಗಿ ಅವನತಿಯತ್ತ ಸಾಗಿತು. ಅವನೇ ಮೊಘಲ್ ಸುಲ್ತಾನರ ಕೊನೆಯ (Last) ರಾಜ.ಸ್ವತಃ ಆಡಳಿತ ನಡೆಸುವ ನೈಪುಣ್ಯತೆ, ದಕ್ಷತೆ ಇವನಲ್ಲಿ ಇರಲಿಲ್ಲ. ಹೀಗಾಗಿ, ಮತ್ತೊಬ್ಬರ ಮೇಲೆ ಅವಲಂಬನೆ ಹೊಂದಿದ್ದ. ಈತ ತನ್ನ ಚಿಕ್ಕಪ್ಪನಾದ ಜಹಂದರ್ ಶಾನನ್ನು ಕೊಲೆಗೈದು ಅಧಿಕಾರಕ್ಕೇರಿದ್ದ. 1713 ರಿಂದ 1719ರವರೆಗೆ ಆಡಳಿತ ನಡೆಸಿದ್ದ. ಹೆಸರಿಗೆ ಮಾತ್ರ ಈತ ಸುಲ್ತಾನ, ಆಡಳಿತದ ಬಹುಪಾಲು ಅಧಿಕಾರವೆಲ್ಲ (Power) ಸಯ್ಯಿದ್ ಸಹೋದರರ ಕಪಿಮುಷ್ಟಿಯಲ್ಲಿ ಇತ್ತು.
ಇದೇ ಸಯ್ಯಿದ್ ಸಹೋದರರು 1707ರಲ್ಲಿ ಔರಂಗಜೇಬನ ಆಡಳಿತದಲ್ಲೂ ಭಾಗಿಯಾಗಿದ್ದರು.
ಜನ ಇಂಥ ವಸ್ತುನೂ ಖರೀದಿ ಮಾಡ್ತಾರಾ? ತನ್ನ ಹೂಸು, ಬೆವರು ಮಾರಿ, ಲಕ್ಷ ಗಳಿಸಿದ ಮಹಿಳೆ!
ಸಯ್ಯಿದ್ ಹಸನ್ ಅಲಿ ಖಾನ್ ಮತ್ತು ಸಯ್ಯಿದ್ ಹುಸೇನ್ ಅಲಿ ಖಾನ್ ತಮ್ಮ ಪ್ರಭಾವ (Influence) ವಿಸ್ತರಿಸಿಕೊಂಡು ಆತನ ಮರಣದ ನಂತರ ಅಧಿಕಾರವನ್ನು ತಮ್ಮ ಕೈಯಲ್ಲಿ ಇರಿಸಿಕೊಂಡಿದ್ದರು. ಮೊಘಲ್ ಕೋರ್ಟ್ ಕೂಡ ಅವರ ನಿರ್ಧಾರಗಳನ್ನು ಅನುಸರಿಸುತ್ತಿತ್ತು. ತಾವು ಬಯಸಿದವರನ್ನು ಅಧಿಕಾರದಲ್ಲಿ ಕೂರಿಸುವಷ್ಟು ಪ್ರಾಬಲ್ಯ ಹೊಂದಿದ್ದರು. ಈ ಸಮಯದಲ್ಲಿ ಫರುಕ್ಷಿಯಾರ್ ರಾಜನಾಗಿದ್ದ. ಈತ 1717ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ (British East India Company) ಭಾರತದಲ್ಲಿ ವ್ಯಾಪಾರ ನಡೆಸಲು ಅನುಮತಿ ನೀಡಿದವನು ಇವನೇ. ಯಾವುದೇ ತೆರಿಗೆ ಇಲ್ಲದೆ ದೇಶದಲ್ಲಿ ವ್ಯಾಪಾರ ನಡೆಸಲು ಈತ ಅನುಮತಿ (Permission) ನೀಡಿದ ಕೆಲವೇ ಸಮಯದಲ್ಲಿ ಕಂಪನಿಯು ಬಂಗಾಳ, ಒಡಿಶಾ ಮತ್ತು ಬಿಹಾರಗಳಲ್ಲಿ ವ್ಯಾಪಾರ ಆರಂಭಿಸಿತು. ತೆರಿಗೆ ರಹಿತವಾಗಿ ವ್ಯಾಪಾರಕ್ಕೆ ಅವಕಾಶ ನೀಡಿದ್ದ ರಾಜನಿಗೆ ವಾರ್ಷಿಕವಾಗಿ 3 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು.
ದೊರೆ ಫರುಕ್ಷಿಯಾರ್ ಮತ್ತು ಸಯ್ಯಿದ್ ಸಹೋದರರಿಗೆ ಈ ಸಮಯದಲ್ಲಿ ಭಿನ್ನಾಭಿಪ್ರಾಯ (Disagreements) ತಲೆ ಎತ್ತಿತು. ಪರಸ್ಪರ ಅಪನಂಬಿಕೆ ಬೆಳೆಯಿತು. ಒಬ್ಬರು ಮತ್ತೊಬ್ಬರ ಸೋಲಿಗಾಗಿ ಪ್ರಯತ್ನಿಸತೊಡಗಿದರು. 1719ರಲ್ಲಿ ಅಜಿತ್ ಸಿಂಗ್ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ. ಇದಕ್ಕೆ ಸಯ್ಯಿದ್ ಸಹೋದರರು ಬೆಂಬಲ ನೀಡಿದ್ದರು. ಪರಿಣಾಮವಾಗಿ, ಫರುಕ್ಷಿಯಾರ್ ತನ್ನ ತಾಯಿ, ಪತ್ನಿಯರು ಮತ್ತು ಮಕ್ಕಳೊಂದಿಗೆ ಅಡಗುದಾಣ ಸೇರಬೇಕಾದ ಸ್ಥಿತಿ ನಿರ್ಮಾಣವಾಯಿತು. ಆದರೂ ಆತ ಸೆರೆಸಿಕ್ಕ ಹಾಗೂ ಅವನನ್ನು ಹತ್ಯೆ ಮಾಡಲಾಯಿತು.
ಎಂಟು ಗಂಟೆ ಡ್ರೈವ್ ಮಾಡ್ಕೊಂಡು ಮದುವೆಗೆ ಹೋದವಳಿಗೆ ಹೀಗ್ ಅವಮಾನ ಮಾಡೋದಾ?
ಮೊಘಲ್ ದೊರೆ ಫರುಕ್ಷಿಯಾರ್ ಹಾಗೂ ಸಯ್ಯಿದ್ ಸಹೋದರರ ನಡುವಿನ ವೈರತ್ವದಿಂದಾಗಿ ನಡೆದ ಘಟನಾವಳಿಗಳಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ನೇರವಾಗಿ ಲಾಭವಾಯಿತು. ಅವರು ಉತ್ತರ (North) ಭಾರತದ ಮೇಲೆ ಸುಲಭವಾಗಿ ನಿಯಂತ್ರಣ ಹೊಂದಲು ಈ ಘಟನೆ ಕಾರಣವಾಯಿತು. ಮುಂದಿನ 200 ವರ್ಷಗಳ (Years) ಕಾಲದ ಭಾರತದ (India) ಚರಿತ್ರೆಯೇ (History) ಬದಲಾಗಿ ಹೋಯಿತು.