ಝೂ ಸಿಬ್ಬಂದಿ ಮೇಲೆ ದಾಳಿ ನಡೆಸಿ ನೀರಿಗೆ ಎಳೆದೊಯ್ದ ಮೊಸಳೆ, ನೆರವಿಗೆ ಧಾವಿಸಿದ ಪ್ರವಾಸಿಗ!

By Suvarna NewsFirst Published Mar 5, 2024, 4:46 PM IST
Highlights

ಮೃಗಲಾಯದ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ನಡೆಸಿದ ಮೊಸಳೆ ನೇರವಾಗಿ ಸಿಬ್ಬಂದಿಯನ್ನು ನೀರಿಗೆ ಎಳೆದೊಯ್ದು, ತಿನ್ನಲು ಪ್ರಯತ್ನಿಸಿದೆ. ಆದರೆ ಪ್ರವಾಸಿಗನೊಬ್ಬ ತಕ್ಷಣವೇ ನೀರಿಗೆ ಹಾರಿ ಸಾಹಸಮಯ ರೀತಿಯಲ್ಲಿ ಸಿಬ್ಬಂದಿಯನ್ನು ರಕ್ಷಿಸಿದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
 

ಮೃಗಾಲಯದಲ್ಲಿ ಪ್ರವಾಸಿಗರ ಅಜಾಗರೂಕತೆಯಿಂದ ಪ್ರಾಣಿಗಳು ದಾಳಿ ನಡೆಸಿದ ಹಲವು ಘಟನೆಗಳು ವರದಿಯಾಗಿದೆ. ಪ್ರಾಣಿಗಳಿಗೆ ಪ್ರತಿ ದಿನ ಆಹಾರ ನೀಡುವ ಸಿಬ್ಬಂದಿಗಳ ಮೇಲೂ ದಾಳಿ ನಡೆದ ಘಟನೆಗಳಿವೆ. ಇದೀಗ ಮೊಸಳೆಯೊಂದು ಏಕಾಏಕಿ ಸಿಬ್ಬಂದಿ ಮೇಲೆ ದಾಳಿ ನಡೆಸಿದ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ದಿಢೀರ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ನೀರಿಗೆ ಎಳೆದೊಯ್ದ ಮೊಸಳೆ ತಿನ್ನಲು ಪ್ರಯತ್ನಿಸಿದೆ. ಆದರೆ ಪ್ರವಾಸಿಗನೊಬ್ಬ ನೆರವಿಗೆ ಧಾವಿಸಿದ್ದಾನೆ. ನೀರಿಗೆ ಹಾರಿ ಮೊಸಳೆಯನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಕೆಲ ಹೊತ್ತಿನ ಸಾಹಸಹದ ಬಳಿಕ ಸಿಬ್ಬಂದಿಯನ್ನು ಮೊಸಳೆ ಬಾಯಿಯಿಂದ ರಕ್ಷಿಸುವಲ್ಲಿ ಪ್ರವಾಸಿಗ ಯಶಸ್ವಿಯಾದ ಈ ಭಯಾನಕ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.

2021ರ ಈ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇದೀಗ ಹಲವರು ಈ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ನೀರಿನ ಟ್ಯಾಂಕ್‌ನಲ್ಲಿ ಮೊಸಳೆಯನ್ನು ಬಿಡಲಾಗಿದೆ. ಈ ಮೊಸಳಗೆ ಆಹಾರಗಳನ್ನು ಸಿಬ್ಬಂದಿಗಳು ನೀಡುತ್ತಾರೆ. ಹೀಗೆ ಮೊಸಳೆಯ ಬಳಿಕ ಬಂದ ಸಿಬ್ಬಂದಿ ಇನ್ನೇನು ಆಹಾರ ನೀಡಲು ತಯಾರಿ ನಡೆಸಿದ್ದಾರೆ. ಅಷ್ಟರಲ್ಲೇ ಮೊಸಳೆ ಸಿಬ್ಬಂದಿಯ ಕೈಯನ್ನು ಕಚ್ಚಿದೆ.

ತಾನೇ ಪ್ರೀತಿಯಿಂದ ಸಾಕಿದ್ದ ಹಲ್ಲಿ ಕಚ್ಚಿ ವ್ಯಕ್ತಿ ಸಾವು

ಮೊಸಳೆ ದಾಳಿ ಬೆನ್ನಲ್ಲೇ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಆದರೆ ಮೊಸಳೆ ಸಿಬ್ಬಂದಿಯನ್ನು ನೀರಿನ ಟ್ಯಾಂಕ್‌ಗೆ ಎಳೆದೊಯ್ದಿದೆ. ಬಳಿಕ ಸಿಬ್ಬಂದಿಯನ್ನು ತಿನ್ನಲು ಪ್ರಯತ್ನಿಸಿದೆ. ಒಂದೆರೆಡು ಸುತ್ತು ಪಲ್ಟಿ ಹೊಡೆದ ಮೊಸಳೆ ಸಿಬ್ಬಂದಿ ಮೇಲೆ ಭೀಕರ ದಾಳಿ ನಡೆಸಿದೆ. ಇದೇ ವೇಳೆ ಹಲವು ಪ್ರವಾಸಿದರು ಗಾಜಿನ ಹೊರಗಿನಿಂದ ವೀಕ್ಷಕರಾಗಿ ಏನೂ ಮಾಡಲು ಸಾಧ್ಯವಾಗದೇ ನೋಡುತ್ತಲೇ ನಿಂತಿದ್ದಾರೆ. 

 

Crocodile attacks zoo keeper and a visitor jumps in the cage to help pic.twitter.com/IFUonmU18g

— non aesthetic things (@PicturesFoIder)

 

ಸಿಬ್ಬಂದಿ ಪಕ್ಕದಲ್ಲಿದ್ದ ಪ್ರವಾಸಿಗನೊಬ್ಬ ತಕ್ಷಣವೇ ಸಿಬ್ಬಂದಿಯ ನೆರವಿಗೆ ಧಾವಿಸಿದ್ದಾನೆ. ಪ್ರವಾಸಿಗನಿಗೂ ತಕ್ಷಣ ಏನು ಮಾಡಬೇಕು ಎಂದು ತೋಚಿಲ್ಲ. ಇದೇ ವೇಳೆ ಸಿಬ್ಬಂದಿ ಕೈ ಸೆನ್ನೆ ಮೂಲಕ ಮೊಸಳೆ ಮೇಲೆ ಹತ್ತಿ ಹಿಡಿಯುವಂತೆ ಸೂಚಿಸಿದ್ದಾನೆ. ಇದರಂತೆ ಧೈರ್ಯ ಮಾಡಿದ ಪ್ರವಾಸಿಗ ಮೊಸಳೆಯ ಮೇಲೆ ಹತ್ತಿ ಗಟ್ಟಿಯಾಗಿ ಹಿಡಿದ್ದಾನೆ. ಕೆಲ ಹೊತ್ತು ಈ ಸಾಹಸ ಮುಂದುವರಿದಿದೆ. ಮೊಸಳೆಯನ್ನು ಹಿಡಿದು ಅದರ ಬಾಯಿಯನ್ನು ಅಗಲಿಸುವ ಪ್ರಯತ್ನ ಮಾಡಲಾಗಿದೆ. ಕೆಲ ಹೊತ್ತುಗಳ ಬಳಿಕ ಸಿಬ್ಬಂದಿಯ ಕೈಯನ್ನು ಮೊಸಳೆ ಬಾಯಿಯಿಂದ ರಕ್ಷಿಸಲಾಗಿದೆ. ಅಷ್ಟು ಹೊತ್ತಿಗೆ ಸಿಬ್ಬಂದಿ ಪ್ರಜ್ಞೆ ತಪ್ಪಿದ್ದಾನೆ.

ತಾನೇ ಸಾಕಿದ ಸಿಂಹಕ್ಕೆ ಆಹಾರವಾದ ಝೂ ಕೀಪರ್‌: ಸಿಂಹಕ್ಕೆ ದಯಾಮರಣ ನೀಡಿದ ಝೂ

ಇತ್ತ ಸಿಬ್ಬಂದಿಯನ್ನು ನೀರಿನಿಂದ ಎಳೆದು ಹೊರಕ್ಕೆ ತೆಗೆದಿದ್ದಾರೆ. ಇತ್ತ ಮೊಸಳೆಯನ್ನು ಹಿಡಿದ ಪ್ರವಾಸಿಗ ಕೆಲ ಹೊತ್ತು ತನಕೆ ಮೊಸಳೆಯನ್ನು ಹಿಡಿದು ಕೊನೆಗೆ ಮೆಲ್ಲನೆ ನೀರಿನಿಂದ ಪಾರಾಗಿ ಮೇಲಕ್ಕೆ ಬಂದಿದ್ದಾನೆ. ಮೈ ಜುಮ್ಮೆನಿಸುವ ಈ ವಿಡಿಯೋ ಇದೀಗ ಎಲ್ಲಾ ಪ್ರವಾಸಿಗರು, ಮೃಗಾಲಯ ಸಿಬ್ಬಂದಿಗಳಿಗೆ ಮತ್ತೆ ಎಚ್ಚರಿಕೆ ಸಂದೇಶ ನೀಡಿದೆ.

click me!