24 ದಿನಗಳ ಅಂತರದಲ್ಲಿ ಒಂದೇ ಕುಟುಂಬದ 8 ಮಂದಿ ಸಾವು!

Published : Apr 29, 2022, 06:20 PM ISTUpdated : Apr 29, 2022, 06:27 PM IST
24 ದಿನಗಳ ಅಂತರದಲ್ಲಿ ಒಂದೇ ಕುಟುಂಬದ 8 ಮಂದಿ ಸಾವು!

ಸಾರಾಂಶ

ಸಾವನ್ನಪ್ಪಿದ ಕುಟುಂಬದ ಸದಸ್ಯರುಗಳ ಪೈಕಿ 2 ಸಹೋದರಿಯರು, ಅವರ 4 ಸಹೋದರರು, ಅವರ ತಾಯಿ ಮತ್ತು ಅವರ ತಂದೆಯ ಚಿಕ್ಕಮ್ಮ ಸೇರಿದ್ದಾರೆ. ಕುಟುಂಬದ ಸ್ಥಿತಿಯನ್ನು ನೋಡಿ ಸರ್ಕಾರ ಪರಿಹಾರದ ಹಣ ನೀಡಿತ್ತು. ಅದನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿರುವುದಾಗಿ ಕುಟುಂಬ ತಿಳಿಸಿದೆ.  

ಲಕ್ನೋ (ಏ.29): ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಕ್ನೋದ (Lucknow ) ಹೊರವಲಯದಲ್ಲಿರುವ ಇಮಾಲಿಯಾ ಪೂರ್ವ (Imalia East) ಎಂಬ ಹಳ್ಳಿಯ ಈ ಮನೆ ಈಗ ಅಕ್ಷರಶಃ ಸ್ಮಶಾನ. 8 ಕೋಣೆಗಳನ್ನು ಹೊಂದಿದ್ದ ತುಂಬು ಕುಟುಂಬದಲ್ಲಿ ಈಗ ಜನರೇ ಇಲ್ಲ. ಅದಕ್ಕೆ ಕಾರಣ ಕೋವಿಡ್-19 2ನೇ ಅಲೆ (Covid-19 Second Wave). ಕೇವಲ ಒಂದು ವರ್ಷದ ಹಿಂದೆ ಇಡೀ ಕುಟುಂಬದ ಪಾಲಿಗೆ ಮಾರಣಾಂತಿಕವಾಗಿ ಅಪ್ಪಳ್ಳಿಸಿದ ಕೋವಿಡ್-19 ಎರಡನೇ ಅಲೆ 24 ದಿನಗಳ ಅಂತರದಲ್ಲಿ ಈ ಕುಟುಂಬದ 8 ಸದಸ್ಯರನ್ನು ಬಲಿತೆಗೆದುಕೊಂಡಿತ್ತು.

ಕಳೆದ ವರ್ಷದ ಏಪ್ರಿಲ್ ವೇಳೆ ಕಂಡಂತ ದಿನಗಳನ್ನು ಬದುಕಿರುವ ಕುಟುಂಬದ ಸದಸ್ಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸರಾಸರಿ ಮೂರು ದಿನಗಳಿಗೊಮ್ಮೆ ನಮ್ಮ ಮನೆಯಲ್ಲಿ ಸಾವುಗಳು ಆಗುತ್ತಿತ್ತು. ಸಾವನ್ನಪ್ಪಿದ ಕುಟುಂಬದ ಸದಸ್ಯರುಗಳ ಪೈಕಿ 2 ಸಹೋದರಿಯರು, ಅವರ 4 ಸಹೋದರರು, ಅವರ ತಾಯಿ ಮತ್ತು ಅವರ ತಂದೆಯ ಚಿಕ್ಕಮ್ಮ ಸೇರಿದ್ದಾರೆ.

ಕೆಲವರು ಆಮ್ಲಜನಕವಿಲ್ಲದೆ (oxygen) ಖಾಸಗಿ ಆಸ್ಪತ್ರೆಗಳಲ್ಲಿ ಸಾವಿಗೀಡಾದರೆ, ಇನ್ನೂ ಕೆಲವರು ಮನೆಯಲ್ಲಿ ಸಾವಿಗೀಡಾಗಿದ್ದರು. ಸೀಮಾ ಸಿಂಗ್ ಯಾದವ್ (Seema Singh Yadav) ಅವರ ಪತಿ, 45 ವರ್ಷದ ರೈತ ನಿರಾಂಕರ್ ಸಿಂಗ್, ಅಸ್ಪತ್ರೆಯಲ್ಲಿ ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ನಂತರ ನಿಧನರಾದರು.

"ಆಸ್ಪತ್ರೆಯಲ್ಲಿ ಆತ ಆಮ್ಲಜನಕಕ್ಕಾಗಿ ಹೋರಾಟ ಮಾಡುತ್ತಿದ್ದ. ಅಲ್ಲದೆ, ವೈದ್ಯರ ಬಳಿಗೆ ಹೋಗಿ ಹೆಚ್ಚಿನ ಆಮ್ಲಜನಕದ ವ್ಯವಸ್ಥೆ ಮಾಡುವಂತೆಯೂ ಕೇಳಿದ್ದ. ನಾನು ಅವರಿಗೆ ಆಮ್ಲಜನಕದ ಅಗತ್ಯವನ್ನು ಹೆಚ್ಚಿಸಲು ವೈದ್ಯರಲ್ಲಿ ಬೇಡಿಕೊಳ್ಳುತ್ತಿದ್ದೆ. ಒಮ್ಮೆ ವೈದ್ಯರು ಇದರ ವ್ಯವಸ್ಥೆ ಮಾಡಿದರು. ಆದರೆ, ಏನೇ ಮಾಡಿದರೂ ಆತನಿಗೆ ಉಸಿರಾಡುವುದು ಕಷ್ಟವಾಗುತ್ತಿತ್ತು.

ಆಮ್ಲಜನಕವನ್ನು ಇನ್ನೂ ಹೆಚ್ಚಿಸಿ ಎಂದು ವೈದ್ಯರನ್ನು ಕೇಳಿದಾಗ ಅವರು ತಮ್ಮಲ್ಲಿ ಅಷ್ಟು ಸ್ಟಾಕ್ ಇಲ್ಲ ಎಂದು ಹೇಳಿದ್ದರು. ಇದನ್ನು ಕೇಳಿದ ನನ್ನ ಪತಿ ವೈದ್ಯರೇಕೆ ಹೀಗೆ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಅಗ ನಾನು ವೈದ್ಯರು ಬೇರೆಯವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಿರುವ ಹೊತ್ತಿಗೆ ನನ್ನ ಎದುರೇ ಆಮ್ಲಜನಕಕ್ಕಾಗಿ ಏದುಸಿರು ಬಿಡುತ್ತಲೇ ಪ್ರಾಣ ಬಿಟ್ಟರು' ಎಂದು ಕಣ್ಣೀರು ಸುರಿಸುತ್ತಾ ಘೋರ ದಿನದ ಬಗ್ಗೆ ಸೀಮಾ ಸಿಂಗ್ ಮಾತನಾಡಿದರು.

ಸಾಲು ಸಾಲು ಸಾವುಗಳನ್ನು ಕಂಡ ಆ ದಿನಗಳನ್ನು ಕಂಡು ಒಂದು ವರ್ಷವಾದರೂ ಇಂದಿಗೂ ಆ ದಿನಗಳನ್ನು ನನ್ನಿಂದ ಮರೆಯಾಗಿಲ್ಲ. ಈ ಒಂದು ವರ್ಷದ ಬಳಿಕ ತಮ್ಮ ಬಹುದೊಡ್ಡ ಕಾಳಜಿ ತನ್ನಿಬ್ಬರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಎಂದಿದ್ದಾರೆ.  ತನ್ನ ಮಕ್ಕಳಿಗೆ 19 ಹಾಗೂ 21 ವರ್ಷ. ಹಿರಿಯ ಮಗ ಹೈದರಾಬಾದ್ ನಲ್ಲಿ ಫ್ಯಾಶನ್ ಡಿಸೈನ್ ವಿದ್ಯಾರ್ಥಿಯಾಗಿದ್ದರೆ, ಕಿರಿಯ ಮಗ 12ನೇ ತರಗತಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಅಲ್ಲದೆ, ಕಿರಿಯ ಮಗ ಜಮೀನಿನಲ್ಲೂ ತಮಗೆ ಸಹಾಯ ಮಾಡುತ್ತಾನೆ ಎಂದು ಹೇಳುತ್ತಾರೆ.

ಆ ದಿನಗಳನ್ನು ಕಂಡ ನನಗೆ ಇನ್ನೊಂದು ದಿನ ಕಳೆಯುವುದು ಕೂಡ ನನ್ನ ಪಾಲಿಗೆ ಕಷ್ಟವಾಗಿತ್ತು. ಆದರೆ, ಮಕ್ಕಳ ಕಾರಣದಿಂದಾಗಿ ಮಾತ್ರವೇ ನಾನು ಬದುಕಿದ್ದೇನೆ. ನಾನೇನಾದರೂ ಅನಾರೋಗ್ಯಕ್ಕೆ ಒಳಗಾಗಿ ವೈದರ ಬಳಿಗೆ ಹೋಗಲು ನಿರಾಕರಿಸಿದರೆ, ನಿನಗೇನಾದರೂ ಆದಲ್ಲಿ ನಾವೇನು ಮಾಡೋದು ಅಂತಾ ಮಕ್ಕಳು ಕೇಳುತ್ತಾರೆ. ನನ್ನ ಮಕ್ಕಳಿದ್ದ ಕಾರಣಕ್ಕಾಗಿಯೇ ನಾನು ಬದುಕಿದ್ದೇನೆ. ನನಗೇನಾದೂ ಚಿಂತೆಯಿಲ್ಲ. ಅವರ ಜೀವನ ಹಾಳಾಗಾಬರದು ಎನ್ನುವ ಕಾರಣಕ್ಕೆ ಅವರಿಗೆ ಎಲ್ಲಾ ರೀತಿಯ ಶಿಕ್ಷಣವನ್ನು ನೀಡುತ್ತಿದ್ದೇನೆ ಎಂದು ಸೀಮಾ ಸಿಂಗ್ ಹೇಳಿದ್ದಾರೆ.

SIKH DELEGATION ಸಿಖ್ ಪರಂಪರೆ ಏಕ ಭಾರತ ಶ್ರೇಷ್ಠ ಭಾರತ, ಪ್ರಧಾನಿ ಮೋದಿ!

ಸರ್ಕಾರದಿಂದ ಪರಿಹಾರ: ಕುಸುಮಾ ದೇವಿಯ 61 ವರ್ಷದ ಪತಿ ವಿಜಯ್ ಕುಮಾರ್ ಕೂಡ ರೈತ. ಖಾಸಗಿ ಅಸ್ಪತ್ರೆಯಲ್ಲಿ 10 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಮೇ 1 ರಂದು ಸಾವಿಗೀಡಾಗಿದ್ದರು. ಸದ್ಯ ಮನೆಯ ಮುಖ್ಯಸ್ಥರಾಗಿರುವ ಕುಸುಮಾ ದೇವಿ, "ಕೋವಿಡ್-19ಗೆ ನಮ್ಮ ಕುಟುಂಬದ 8 ಮಂದಿ ಸಾವಿಗೀಡಾದ ಬಳಿಕ ಸರ್ಕಾರ ನಮಗೆ ಪರಿಹಾರ ನೀಡಿತ್ತು. ಆದರೆ, ನಮ್ಮ ಭವಿಷ್ಯದ ಬಗ್ಗೆ ಮಾತ್ರ ಆತಂಕವಿದೆ' ಎಂದಿದ್ದಾರೆ.

ಸರ್ವರಿಗೂ ತಣ್ಣನೆ ನೀರು ನೀಡಲು ಬೀದಿಯಲ್ಲಿ ಫ್ರಿಡ್ಜ್‌ ಇಟ್ಟ ವ್ಯಕ್ತಿ

ಈ ಒಂದು ವರ್ಷದಲ್ಲಿ ಕುಟುಂಬ ನಿರ್ವಹಣೆಯನ್ನು ಕಷ್ಟವಾಯಿತೇ ಎನ್ನುವ ಪ್ರಶ್ನೆಗೆ ಕಣ್ಣೀರಿಡುತ್ತಲೇ ಉತ್ತರ ನೀಡಿದರು. "ನಮ್ಮ ಕುಟುಂಬಕ್ಕೆ ಬಂದ ಪರಿಸ್ಥಿತಿ ಯಾರೊಬ್ಬರಿಗೂ ಬರಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಬಡವನಾಗಿದ್ದರೂ, ಒಂದೇ ಹೊತ್ತಿನ ಊಟ ತಿಂದರೂ ತೊಂದರೆಯಿಲ್ಲ. ಆದರೆ, ಇಂಥವುಗಳೆಲ್ಲ ಕುಟುಂಬದಲ್ಲಿ ಆಗಬಾರದು. ಸರ್ಕಾರ ನೀಡಿದ ಪರಿಹಾರದ ಹಣದಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ' ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌