ಸರ್ವರಿಗೂ ತಣ್ಣನೆ ನೀರು ನೀಡಲು ಬೀದಿಯಲ್ಲಿ ಫ್ರಿಡ್ಜ್‌ ಇಟ್ಟ ವ್ಯಕ್ತಿ

Published : Apr 29, 2022, 05:10 PM IST
ಸರ್ವರಿಗೂ ತಣ್ಣನೆ ನೀರು ನೀಡಲು ಬೀದಿಯಲ್ಲಿ ಫ್ರಿಡ್ಜ್‌ ಇಟ್ಟ ವ್ಯಕ್ತಿ

ಸಾರಾಂಶ

ಕೋಲ್ಕತ್ತಾ ವ್ಯಕ್ತಿಯ ಮಾನವೀಯ ಕಾರ್ಯ ಸರ್ವರಿಗೂ ತಣ್ಣನೆಯ ನೀರು ಸಿಗಲು ಫ್ರಿಡ್ಜ್‌ ಸ್ವಂತ ಫ್ರಿಡ್ಜ್‌ನ್ನು ಸಾರ್ವಜನಿಕ ಸ್ಥಳದಲ್ಲಿಟ್ಟ ವ್ಯಕ್ತಿ

ಕೋಲ್ಕತ್ತಾ: ಈ ಬಾರಿಯ ಬಿರು ಬೇಸಿಗೆ ಜನರನ್ನು ಈಗಾಗಲೇ ಹೈರಾಣಾಗಿಸಿದೆ. ಬಿಸಿಲಿನ ದಾಹ ತಡೆಯಲಾಗದೆ ಜನ ತಣ್ಣಗಿದ್ದಲ್ಲಿ ಹೋಗಿ ಕುಳಿತು ಬಿಡಲು ತಣ್ಣನೆಯ ನೀರೇ ಕುಡಿಯಲು ಹಾತೊರೆಯುತ್ತಿದ್ದಾರೆ. ಮನೆಯಲ್ಲಿ ಫ್ರಿಡ್ಜ್‌ ಇರುವ ಶ್ರೀಮಂತರಿಗೇನೋ ಸುಲಭವಾಗಿ ತಣ್ಣನೆಯ ನೀರು ಕುಡಿಯಬಹುದು. ಆದರೆ ಎಲ್ಲರಿಗೂ ಫ್ರಿಡ್ಜ್‌ ಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕೆ ಕೋಲ್ಕತ್ತಾದ (Kolkata) ವ್ಯಕ್ತಿಯೊಬ್ಬರು ತಮ್ಮ ಫ್ರಿಡ್ಜ್‌ನ್ನು ಬೀದಿಯಲ್ಲಿ ಇಟ್ಟಿದ್ದು, ಬೇಕಾದವರು ಅದರೊಳಗೆ ನೀರಿಟ್ಟು ತಣ್ಣನೆಯ ನೀರು ಕುಡಿಯಬಹುದು. 

ಬಿಸಿಲ ದಾಹಕ್ಕೆ ಜನ ಶಕ್ತಿ ಕಳೆದುಕೊಳ್ಳುತ್ತಿದ್ದು, ನಿತ್ರಾಣವಾಗುವುದು ಸಾಮಾನ್ಯ ಎನಿಸಿದೆ. ಈ ವೇಳೆ ಒಂದು ಲೋಟ ತಂಪಾದ ನೀರು ನಮಗೆ ಕ್ಷಣಕಾಲ ನಿರಾಳತೆ ನೀಡುವುದು. ಈ ಕಾರಣಕ್ಕೆ ಕೋಲ್ಕತ್ತಾದ ಅಲಿಮುದ್ದೀನ್ ಸ್ಟ್ರೀಟ್‌ನ (Alimuddin Street)  29 ವರ್ಷದ ಸ್ಥಳೀಯ ನಿವಾಸಿ ತೌಸಿಫ್ ರೆಹಮಾನ್ (Tousif Rahman) ಅವರು ಕೋಲ್ಕತ್ತಾದ ರಸ್ತೆಯ ಬದಿಯಲ್ಲಿ ತಮ್ಮ ಸ್ವಂತ ಫ್ರಿಡ್ಜ್ ಅನ್ನು ತಾತ್ಕಾಲಿಕವಾಗಿ ಸ್ಥಾಪಿಸಿದ್ದಾರೆ. ಪಾದಚಾರಿಗಳು ತಣ್ಣನೆಯ ನೀರು ಕುಡಿದು ದಾಹ ತೀರಿಸಿಕೊಳ್ಳಲಿ ಎಂಬುದು ಅವರ ಉದ್ದೇಶವಾಗಿದ್ದು, ರಸ್ತೆ ಬದಿಯಲ್ಲಿ ರೆಫ್ರಿಜರೇಟರ್ ಇಡುತ್ತಿರುವುದು ಇದೇ ಮೊದಲು.

Koppal: ಬಿರು ಬೇಸಿಗೆಯಲ್ಲಿ ಪಕ್ಷಿಗಳ ದಾಹ ನೀಗಿಸುವ ಪೊಲೀಸ್ ಅಧಿಕಾರಿಗೊಂದು ಸಲಾಂ..!
ಈ ಮೂಲಕ ತೌಸಿಫ್ ಪ್ರೀತಿ ಮತ್ತು ಮಾನವೀಯತೆಗೆ ಹೊಸ ಮಾನದಂಡವನ್ನು ಸೃಷ್ಟಿ ಮಾಡಿದ್ದಾರೆ. ಇವರ ಕ್ರಮವನ್ನು ಅನೇಕರು ಶ್ಲಾಘಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಬೇರೆಯವರು ಮಾಡಲಿ ಎಂದು ಕೂರುವ ಬದಲು ಇವರು ಒಂದು ಒಳ್ಳೆಯ ಕಾರ್ಯವನ್ನು ತಾವೇ ಮಾಡಿದ್ದು, ಇತರರಿಗೆ ಪ್ರೇರಣೆಯಾಗಿದ್ದಾರೆ. ಜೊತೆಗೆ ಮಾನವೀಯ ಮೌಲ್ಯಗಳು ಇನ್ನು ಜೀವಂತವಾಗಿದೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

ಬೇಸಿಗೆ (Summer) ಶುರುವಾಯ್ತು. ಇನ್ನೇನು ಹೊಸ ಹೊಸ ಕಾಯಿಲೆಗಳು ಸಹ ವಕ್ಕರಿಸಿಕೊಂಡು ಬಿಡುತ್ತವೆ. ವಿಪರೀತ ಧಗೆಗೆ ಅತಿಯಾದ ಬೆವರುವಿಕೆ, ಉರಿಯೂತ, ನಿರ್ಜಲೀಕರಣ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಎಲ್ಲಾ ಸಮಸ್ಯೆಗೂ ಡಾಕ್ಟರ್ ಬಳಿ ಹೋಗಿ ಟ್ಯಾಬ್ಲೆಟ್ಸ್ ತೆಗೆದುಕೊಳ್ಳೋ ಬದಲು ಕಾಮ ಕಸ್ತೂರಿ (Subja Seeds) ಸೇವಿಸಿ ಸಾಕು.

ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಬಾಯಾರಿಕೆಯಾಗೋ ಸಮಸ್ಯೆಗೆ ಸಬ್ಜಾ ಬೀಜ ಮದ್ದು
ಸಬ್ಜಾ ಅಥವಾ ಕಾಮ ಕಸ್ತೂರಿ ಬೀಜಗಳು ಹಲವು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಕಪ್ಪು ಎಳ್ಳು ಬೀಜಗಳನ್ನು ಹೋಲುವ ಈ ಚಿಕ್ಕ ಕಪ್ಪು ಬೀಜಗಳು ಪೌಷ್ಟಿಕಾಂಶದ ಆಗರವಾಗಿದೆ. ಪೌಷ್ಟಿಕ ತಜ್ಞರು ಬೇಸಿಗೆಯಲ್ಲಿ ಹೆಚ್ಚು ಸಬ್ಜಾ ಬೀಜ (Subja seeds)ಗಳನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ. ಪೌಷ್ಠಿಕ ತಜ್ಞೆ ಪೂಜಾ ಮಖಿಜಾ ಬೇಸಿಗೆಯಲ್ಲಿ ಸಬ್ಜಾ ಬೀಜಗಳನ್ನು ತಿನ್ನುವುದರಿಂದ ದೇಹಕ್ಕೆ ಸಿಗುವ ಪ್ರಯೋಜನಗಳೇನು ಎಂಬುದನ್ನು ವಿವರಿಸಿದ್ದಾರೆ.

ಬೇಸಿಗೆ (Summer)ಯಲ್ಲಿ ಹೆಚ್ಚು ಬೆವರುವ ಕಾರಣ ನಾವು ಹೆಚ್ಚೆಚ್ಚು ನೀರು (Water) ಕುಡಿಯಬೇಕಾದ ಅಗತ್ಯವಿದೆ. ನೀರು ಮತ್ತು ಇತರ ಪಾನೀಯಗಳು ಜಲಸಂಚಯನ ಮತ್ತು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಪ್ರಮುಖವಾಗಿವೆ ಎಂಬುದು ಸ್ಪಷ್ಟವಾಗಿದೆ. ಅದರಲ್ಲೂ  ಸಬ್ಜಾ ಬೀಜಗಳು ಬೇಸಿಗೆಯಲ್ಲಿ ಆರೋಗ್ಯ (Health)ವನ್ನು ಕಾಪಾಡಲು ಉತ್ತಮ ಆಹಾರವೆಂದು ಪೂಜಾ ತಿಳಿಸುತ್ತಾರೆ. ಲೋಳೆಸರ ಮತ್ತು ಜೆಲ್ಲಿ ತರಹದ ಬೀಜಗಳು ಶೀತಲವಾಗಿರುವ ಫಲೂಡಾಸ್ ಮತ್ತು ಇತರ ರೀತಿಯ ಪಾನೀಯಗಳು ಉತ್ತಮ ಆಯ್ಕೆಯಾಗಿವೆ.

ದೇಹ (Body) ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು ಸಬ್ಜಾ ಬೀಜಗಳ ಸೇವನೆ ಒಳ್ಳೆಯದು. ಸಬ್ಜಾ ಬೀಜಗಳು ನೀರಿನ ವಿಷಯದಲ್ಲಿ ನಾಲ್ಕು ಪಟ್ಟು ಒಣ ತೂಕವನ್ನು ಹೀರಿಕೊಳ್ಳುತ್ತವೆ ಎಂದು ತಿಳಿದುಬಂದಿದೆ, ಇದು ಹೈಡ್ರೋಜೆಲ್ ಎಂಬ ಜೆಲ್ಲಿ ತರಹದ ವಸ್ತುವನ್ನು ರೂಪಿಸುತ್ತದೆ, ಇದು ನೀವು ಬೆವರಿನಿಂದ ಕಳೆದುಕೊಂಡಿರುವ ಎಲೆಕ್ಟ್ರೋಲೈಟ್‌ಗಳು ಮತ್ತು ನೀರನ್ನು ಬದಲಿಸಲು ಸಹಾಯ ಮಾಡುತ್ತದೆ. ಹೀಗಾಗಿ ಆಗಾಗ ಬಾಯಾರಿಕೆಯಾಗುವ ಸಮಸ್ಯೆ ಉಂಟಾಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌