
ದೆಹಲಿ: ಕಾಕ್ರೋಚ್ ಜನತಾ ಪಕ್ಷ (CJP) ದೆಹಲಿಯ ಜಂತರ್ ಮಂತರ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ್ದ ಪ್ರತಿಭಟನೆಯಲ್ಲಿ ಕೆಲವರು, ಅದರಲ್ಲಿಯೂ ಹೆಚ್ಚಾಗಿ ಕೆಲವು ಯುವತಿಯರು ವಿವಾದಕ್ಕೊಳಗಾಗಿದ್ದಾರೆ. ಅದರಲ್ಲಿ ಒಬ್ಬಾಕೆ 23 ವರ್ಷದ ಕಂಟೆಂಟ್ ಕ್ರಿಯೇಟರ್ ಮತ್ತು ಯೋಗ ತರಬೇತುದಾರಳು ಎಂದು ಹೇಳಿಕೊಂಡಿರುವ ಶ್ರದ್ಧಾ ಸಿಂಗ್. ಇವರು, ಭದ್ರತಾ ಸಿಬ್ಬಂದಿಯ ಕುರಿತು ಕೆಟ್ಟದ್ದಾಗಿ ಮಾತನಾಡಿ ವಿವಾದಕ್ಕೆ ಈಡಾಗಿದ್ದರು. ಜುಲೈ 25 ರಂದು ಜಂತರ್ ಮಂತರ್ ಪ್ರತಿಭಟನೆಯ ಬಳಿಕ ಶ್ರದ್ಧಾ ಸಿಂಗ್ 7 ಸೆಕೆಂಡುಗಳ ರೀಲ್ ಹಂಚಿಕೊಂಡಿದ್ದರು. ಅದರಲ್ಲಿ ಅವರು, ತಮ್ಮ ಹಿಂದೆ ಕುಳಿತಿದ್ದ ರ್‍ಯಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿಯನ್ನು ತೋರಿಸಿ ಟಾಯ್ಲೆಟ್ ಕ್ಲೀನರ್ ಜಾಹೀರಾತಿನ ಧ್ವನಿಯನ್ನು ಅದರ ಮೇಲೆ ಅಳವಡಿಸಿದ್ದರು.
ನೀಲಿ ಸಮವಸ್ತ್ರ ಧರಿಸಿದ್ದ RAF ಯೋಧರು ಎಲ್ಲೆಲ್ಲೂ ಕಂಡುಬರುತ್ತಿದ್ದರು. ಈ ನಡುವೆ, ಶ್ರದ್ಧಾ ಸಿಂಗ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆಡಿಯೋ ಒಂದಕ್ಕೆ ನಟಿಸಿ ವೀಡಿಯೋ ಹಂಚಿಕೊಂಡಿದ್ದರು. ಅದರಲ್ಲಿ "ನೀಲಿ ಬಣ್ಣದ್ದು ಟಾಯ್ಲೆಟ್‌ಗೆ..." ಎಂಬ ಸಾಲುಗಳು ಬಂದಾಗ, ಅವರು ಸ್ಥಳದಲ್ಲಿದ್ದ RAF ಯೋಧರತ್ತ ಕೈ ತೋರಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಭದ್ರತಾ ಪಡೆಗಳ ಯುನಿಫಾರ್ಮ್ ಅನ್ನು ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 3.75 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಶ್ರದ್ಧಾ ಸಿಂಗ್ ವೀಡಿಯೋ ವೈರಲ್ ಆದ ನಂತರ ಭಾರಿ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ.
ವಿವಾದ ತೀವ್ರಗೊಳ್ಳುತ್ತಿದ್ದಂತೆ ಸ್ಪಷ್ಟನೆ ನೀಡಿದ ಅವರು, "ಮೀಮ್ ಪೇಜ್‌ಗಳು ಹಣದಾಸೆಗೆ ನನ್ನ ವೀಡಿಯೋವನ್ನು ಪ್ರಸಾರ ಮಾಡುತ್ತಿವೆ. ನೀವುಗಳು ನನಗೆ ಈ ಮಟ್ಟದ ಅಸಭ್ಯ ಬೈಗುಳಗಳನ್ನು ಕೊಡುವಷ್ಟು ದೊಡ್ಡ ತಪ್ಪನ್ನೇನೂ ನಾನು ಮಾಡಿಲ್ಲ" ಎಂದು ಹೇಳಿಕೊಂಡಿದ್ದರು. ತಮಗೆ ತಪ್ಪಿನ ಅರಿವಾಗಿ ವಿಡಿಯೋ ಅನ್ನು ಕೇವಲ 1 ಗಂಟೆಯಲ್ಲೇ ಡಿಲೀಟ್ ಮಾಡಿದ್ದರೂ ಸಹ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ವಾಗ್ದಾಳಿ ಮುಂದುವರಿದಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು. ಸಾರ್ವಜನಿಕವಾಗಿ ಎರಡು ಬಾರಿ ಬಹಿರಂಗ ಕ್ಷಮೆಯಾಚಿಸಿದರು. ಕ್ಷಮೆ ಕೇಳಿದರೂ ತಮಗೆ ನಿರಂತರವಾಗಿ ಅ*ತ್ಯಾಚಾರ ಹಾಗೂ ಕೊಲೆ ಬೆದರಿಕೆಗಳು ಮತ್ತು ಆನ್‌ಲೈನ್‌ನಲ್ಲಿ ಡಾಕ್ಸಿಂಗ್ (ವೈಯಕ್ತಿಕ ಮಾಹಿತಿ ಸೋರಿಕೆ) ಕಿರುಕುಳ ಮುಂದುವರಿದಿದೆ ಎಂದು ಅವರು ಹೇಳಿದ್ದರು.
ಇದೀಗ ಶ್ರದ್ಧಾ ಸಿಂಗ್,, ಇದು ನನ್ನ ಕೊನೆಯ ಪೋಸ್ಟ್. "ನಡೆದ ಎಲ್ಲದವುಗಳ ಬಗ್ಗೆ ಇದು ನನ್ನ ಕೊನೆಯ ಪೋಸ್ಟ್ ಎಂದು ಶೀರ್ಷಿಕೆ ಕೊಟ್ಟು, ಜೀವನವು ಒಂದು ಕ್ಷಣದಲ್ಲಿ ಹೀಗೆಲ್ಲಾ ಸಿಲುಕಿಕೊಳ್ಳುವುದಕ್ಕಿಂತಲೂ ತುಂಬಾ ಅಮೂಲ್ಯವಾಗಿದೆ. ಆದ್ದರಿಂದ ಇದು ನನ್ನ ಕೊನೆಯ ಪೋಸ್ಟ್ ಎಂದು ಬರೆದಿದ್ದಾರೆ.
ನನ್ನೊಂದಿಗೆ ನಿಂತ, ನನ್ನನ್ನು ಅರ್ಥಮಾಡಿಕೊಂಡ ಮತ್ತು ದಯೆಯಿಂದ ಕಮೆಂಟ್‌ಗಳು ಮತ್ತು ಹೃತ್ಪೂರ್ವಕ ಡಿಎಂಗಳನ್ನು ಕಳುಹಿಸಲು ಸಮಯ ತೆಗೆದುಕೊಂಡ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಅತ್ಯಂತ ಅಗತ್ಯವಿದ್ದಾಗ ನಿಮ್ಮ ಪ್ರೀತಿ, ಪ್ರಾರ್ಥನೆಗಳು ಮತ್ತು ಬೆಂಬಲ ನನಗೆ ಶಕ್ತಿ ನೀಡಿತು. ಈಗ, ನಾನು ನಿಜವಾಗಿಯೂ ಈ ಅಧ್ಯಾಯವನ್ನು ಮುಗಿಸಲು ಬಯಸುತ್ತೇನೆ. ಈ ಪರಿಸ್ಥಿತಿ ಮುಂದುವರಿಯುವುದನ್ನು ನಾನು ಬಯಸುವುದಿಲ್ಲ. ಒಂದು ಕ್ಷಣದಲ್ಲಿ ಸಿಲುಕಿಕೊಳ್ಳಲು ಜೀವನವು ತುಂಬಾ ಅಮೂಲ್ಯವಾಗಿದೆ. ಭೂತಕಾಲವನ್ನು ಬಿಟ್ಟು, ದಯೆಯಿಂದ ಮುಂದುವರಿಯೋಣ ಮತ್ತು ಮುಂದಿನ ಉತ್ತಮ ದಿನಗಳತ್ತ ಗಮನಹರಿಸೋಣ ಎಂದು ಶ್ರದ್ಧಾ ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ