ಕೊರೋನಾದಿಂದ ಮೃತಪಟ್ಟ ಪೊಲೀಸರ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಕೆಲಸ

By Suvarna NewsFirst Published Apr 27, 2021, 4:53 PM IST
Highlights

ಕೊರೋನಾದಿಂದ ಪೊಲೀಸರು ಮೃತಪಟ್ಟಾಗ ಕುಟುಂಬಕ್ಕೆ 50 ಲಕ್ಷ ಪರಿಹಾರ | ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ

ಭೋಪಾಲ್(ಏ.27): ಕೊರೋನಾ ಕರ್ತವ್ಯದ ವೇಳೆ ಕೊರೋನಾದಿಂದಾಗಿ ಮೃತಪಟ್ಟ ಪೊಲೀಸರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲಾಗುವುದು ಎಂದು ಮಧ್ಯಪ್ರದೇಶದ ಗೃಹಸಚಿವ ನರೊಟ್ಟಂ ಮಿಶ್ರಾ ತಿಳಿಸಿದ್ದಾರೆ.

ಹಾಗೆಯೇ ಕುಟುಂಬದ ಒಬ್ಬರಿಗೆ ಉದ್ಯೋಗ ಮತ್ತು ಕೇಂದ್ರ ಪೊಲೀಸರ ಕಲ್ಯಾಣ ನಿಧಿಯಿಂದ ಒಂದು ಲಕ್ಷ ರುಪಾಯಿ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾ ಪ್ರಕರಣಗಳಲ್ಲಿ ಏರಿಕಯಾಗಿದೆ.

ಸಾರ್ಥಕ ಜೀವನ; ಬೆಡ್ ತ್ಯಾಗ ಮಾಡಿ 85 ವರ್ಷದ RSS ಸ್ವಯಂ ಸೇವಕ ನಿಧನ

ಕೊರೋನಾ ವೈರಸ್ ಕಷ್ಟದ ಸಮಯದಲ್ಲಿ ಕರ್ತವ್ಯದಲ್ಲಿದ್ದು ಮೃತಪಟ್ಟ ಪೊಲೀಸರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಹಾಗೆಯೇ ಉದ್ಯೋಗ ನೀಡುವುದರ ಜೊತೆಗೆ ಕೇಂದ್ರ ಪೊಲೀಸರ ಕಲ್ಯಾಣ ನಿಧಿಯಿಂದ ತಲಾ 1 ಲಕ್ಷ ನೀಡಲಾಗುತ್ತದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ 92534 ಸಕ್ರಿಯ ಕೊರೋನಾ ಪ್ರಕರಣಗಳಿದ್ದು, 5221 ಜನಕೊರೋನಾದಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ದಿನಂಪ್ರತಿ ಕೊರೋನಾ ಪ್ರಕರಣ ದಾಖಲಾಗುತ್ತಿದೆ.

click me!