
ನವದೆಹಲಿ(ನ.4 ) : ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಕೇಂದ್ರ ಸರ್ಕಾರ ಪೆಟ್ರೋಲ್ (Petrol) ಮೇಲೆ 5 ರೂ. ಹಾಗೂ ಡಿಸೇಲ್ (Diesel) ಮೇಲೆ 10 ರು. ಅಬಕಾರಿ ಸುಂಕ ಕಡಿತ ಮಾಡುವ ಮೂಲಕ ಗುಡ್ ನ್ಯೂಸ್ ನೀಡಿದೆ. ಈ ಹಿನ್ನೆಲೆಯಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra), ಇದು ಹೃದಯದಿಂದ ತೆಗೆದುಕೊಂಡಿರುವ ನಿರ್ಧಾರವಲ್ಲ, ಹೆದರಿಕೆಯಿಂದ ಕೇಂದ್ರ ಸರ್ಕಾರ ತೈಲ ಬೆಲೆ ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ. ಯೇ ದಿಲ್ ಸೇ ನಹಿ, ಡರ್ ಸೇ ಎಂದು ಟ್ವೀಟ್ ಮಾಡಿರುವ ಪ್ರಿಯಾಂಕಾ ಜನರನ್ನು ಲೂಟಿ ಮಾಡುತ್ತಿರುವ ವಸೂಲಿ ಸರ್ಕಾರಕ್ಕೆ ಮುಂದಿನ ಚುನಾವಣೆಗಳಲ್ಲಿ ಉತ್ತರ ನೀಡಬಬೇಕು ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡಿಸೇಲ್ ಲೀಟರ್ ಗೆ ನೂರು ರು. ಗಳ ಗಡಿ ದಾಟಿ ತಿಂಗಳುಗಳೇ ಕಳೆದಿದ್ದವು. ಇದರ ಜತೆಗೆ ಎಲ್‌ಪಿಜಿ ದುಬಾರಿ ಭಾರ ಸಹ ಜನರ ಮೇಲೆ ಇತ್ತು. ಈಗ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಿರುವುದರಿಂದ ಬೆಲೆ ಇಳಿಯಲಿದೆ. ಅಬಕಾರಿ ಸುಂಕ ಕಡಿತವು ನವೆಂಬರ್ 4 ರಿಂದ ಜಾರಿಗೆ ಬರಲಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರಸ್ತುತ ಲೀಟರ್‌ಗೆ ₹110.04 ರಿಂದ ₹105.04 ಕ್ಕೆ ಇಳಿಯಲಿದೆ. ಡೀಸೆಲ್ ದರ ಲೀಟರ್‌ಗೆ ₹98.42 ರಿಂದ ₹88.42ಕ್ಕೆ ಇಳಿಕೆಯಾಗಲಿದೆ.
"ಭಾರತ ಸರ್ಕಾರವು ನಾಳೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು (Petrol and Diesel Price Drop) ಕ್ರಮವಾಗಿ ಪ್ರತಿ ಲೀಟರ್‌ಗೆ ರೂ. 5 ಮತ್ತು ರೂ. 10 ಕಡಿಮೆ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅದಕ್ಕೆ ಅನುಗುಣವಾಗಿ ಕಡಿಮೆಯಾಗುತ್ತವೆ" ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ದೀಪಾವಳಿ ಗಿಫ್ಟ್ : 8 ಬಿಜೆಪಿ ರಾಜ್ಯಗಳಲ್ಲಿ ತೈಲ ದರ ಇಳಿಕೆ
ಇದು ಅಬಕಾರಿ ಸುಂಕದಲ್ಲಿ ಇದುವರೆಗಿನ ಅತ್ಯಧಿಕ ಕಡಿತವಾಗಿದೆ. ಅಂತರರಾಷ್ಟ್ರೀಯ ತೈಲದ ತೀವ್ರ ಕುಸಿತವನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ತಪ್ಪಿಸಲು ಮಾರ್ಚ್ 2020 ಮತ್ತು ಮೇ 2020 ರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಪ್ರತಿ ಲೀಟರ್‌ಗೆ ₹ 13 ಮತ್ತು ₹ 16 ಹೆಚ್ಚಳ ಮಾಡಲಾಗಿತ್ತು. ಈಗ ತೈಲದ ಬೆಲೆ ಕಡಿಮೆ ಮಾಡಿರುವುದರಿಂದ ಇದರ ಹೊರೆ ಕಡಿಮೆಯಾಗಲಿದೆ. ಅಬಕಾರಿ ಸುಂಕದಲ್ಲಿನ ಹೆಚ್ಚಳದಿಂದ ಪೆಟ್ರೋಲ್ ಮೇಲಿನ ಕೇಂದ್ರ ತೆರಿಗೆಗ ಪ್ರತಿ ಲೀಟರ್‌ಗೆ ₹ 32.9 ರ ಗರಿಷ್ಠ ಮಟ್ಟಕ್ಕೆ ಮತ್ತು ಡೀಸೆಲ್ ಮೇಲೆ ₹ 31.8 ಕ್ಕೆ ಏರಿಕೆಯಾಗಿತ್ತು.
Petrol Diesel Price Drop:ಕೇಂದ್ರದ ಬೆನ್ನಲ್ಲೇ ರಾಜ್ಯದಿಂದಲೂ ಪೆಟ್ರೋಲ್, ಡಿಸೇಲ್ ದರ ಇಳಿಕೆ
ಈಗ ತೈಲದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಕೇಂದ್ರ ಸರ್ಕಾರ ಜನರಿಗೆ ದೀಪಾವಳಿ ಕೊಡುಗೆ ನೀಡಿದೆ. ಆದರೆ ವಿಪಕ್ಷಗಳಿಗೆ ಮಾತ್ರ ಇದರಿಂದ ಸಮಾಧಾನವಾದಂತಿಲ್ಲ. ಜನರಿಗೆ ಹೆದರಿ ಕೇಂದ್ರ ಸರ್ಕಾರ ಈ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ಪ್ರಿಯಾಂಕ ಗಾಂಧಿ ವಾದ್ರಾ ಕೇಂದ್ರ ಸರ್ಕಾಕ್ಕೆ ಚಾಟಿ ಬೀಸಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ (uttar Pradesh) ಪ್ರವಾಸದ ವೇಳೆ ಪ್ರಿಯಾಂಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೇಂದ್ರ ಸರ್ಕಾರದ ಹಲವು ವೈಫಲ್ಯಗಳ ಬಗ್ಗೆ ಮಾತನಾಡಿದ್ದರು. ಜತೆಗೆ ಉತ್ತರಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಹಲವಾರು ಘೋಷಣೆಗಳನ್ನು ಮಾಡುವ ಮೂಲಕ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದರು. ವಿಶೇಷವಾಗಿ ಮಹಿಳೆಯರಿಗೆ ಒಂದಾದ ಬಳಿಕ ಮತ್ತೊಂದರಂತೆ ಅವರು ಹೊಸ ಘೋಷಣೆಗಳನ್ನು ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ