India Fights Corona: ಇನ್ನು 2 ವಾರದಲ್ಲಿ 3ನೇ ಅಲೆ ಉಚ್ಛ್ರಾಯಕ್ಕೆ?

By Suvarna NewsFirst Published Jan 24, 2022, 7:52 AM IST
Highlights

* ಮುಂಬೈ, ದೆಹಲಿ, ಕೋಲ್ಕತಾದಲ್ಲಿ 3ನೇ ಅಲೆ ಅಂತ್ಯದ ಸುಳಿವು

* ಇನ್ನು 2 ವಾರದಲ್ಲಿ 3ನೇ ಅಲೆ ಉಚ್ಛ್ರಾಯಕ್ಕೆ?

* ದೇಶದಲ್ಲಿ ಆರ್‌ ದರ ಇಳಿಕೆ: ಐಐಟಿ ಮದ್ರಾಸ್‌ ಅಧ್ಯಯನ

ನವದೆಹಲಿ(ಜ.24): ಕೋವಿಡ್‌ ಸೋಂಕು ದಿನೇದಿನೇ ಹೆಚ್ಚುತ್ತಿದ್ದರೂ ಅದು ಒಬ್ಬರಿಂದ ಒಬ್ಬರಿಗೆ ಹರಡುವ ಪ್ರಮಾಣ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಮುಂದಿನ 14 ದಿನಗಳಲ್ಲಿ ದೇಶದಲ್ಲಿ ಮೂರನೇ ಅಲೆ ಉಚ್ಛ್ರಾಯಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಐಐಟಿ ಮದ್ರಾಸ್‌ನ ಅಧ್ಯಯನ ಹೇಳಿದೆ.

ಜ.14-21ರ ನಡುವೆ ದೇಶದ ಸರಾಸರಿ ಆರ್‌ ದರ (ಒಬ್ಬ ಸೋಂಕಿತನಿಂದ ಎಷ್ಟುಜನರಿಗೆ ಕೋವಿಡ್‌ ಹರಡುತ್ತಿದೆ ಎಂಬುದನ್ನು ಹೇಳುವ ಪ್ರಮಾಣ) 1.57ಕ್ಕೆ ಇಳಿಕೆಯಾಗಿದೆ. ಇದು ಜ.7-13ರ ನಡುವೆ 2.2, ಜ.1-6ರ ನಡುವೆ 4 ಹಾಗೂ ಡಿ.25-31ರ ನಡುವೆ 2.9 ಇತ್ತು. ಇದು ದೇಶದಲ್ಲಿ ಕೋವಿಡ್‌ ಹರಡುವ ದರ ಗಣನೀಯವಾಗಿ ಇಳಿಕೆಯಾಗುತ್ತಿರುವುದರ ಸೂಚಕವಾಗಿದೆ. ಮುಂಬೈನಲ್ಲಿ ಈಗ ಆರ್‌ ದರ 0.67, ದೆಹಲಿಯಲ್ಲಿ 0.98, ಚೆನ್ನೈನಲ್ಲಿ 1.2 ಹಾಗೂ ಕೋಲ್ಕತಾದಲ್ಲಿ 0.56 ಇದೆ. ಬಹುತೇಕ ಫೆ.6ರೊಳಗೆ ದೇಶದಲ್ಲಿ ಕೋವಿಡ್‌ ಗರಿಷ್ಠಕ್ಕೆ ತಲುಪಲಿದೆ ಎಂದು ಅಧ್ಯಯನ ನಡೆಸಿದ ತಜ್ಞರು ಹೇಳಿದ್ದಾರೆ.

ಆರ್‌ ದರ 1ಕ್ಕಿಂತ ಕಡಿಮೆಯಾದರೆ ನಿರ್ದಿಷ್ಟಅಲೆ ಮುಗಿಯಿತು ಎಂದರ್ಥ. ಅಂದರೆ ಮುಂಬೈ, ದೆಹಲಿ ಹಾಗೂ ಕೋಲ್ಕತಾದಲ್ಲಿ ಈಗಾಗಲೇ 3ನೇ ಅಲೆ ಮುಗಿದಿರಬಹುದು ಎಂಬ ಸಂಗತಿ ಐಐಟಿ ಮದ್ರಾಸ್‌ನ ಅಧ್ಯಯನದಿಂದ ಪರೋಕ್ಷವಾಗಿ ಕಂಡುಬರುತ್ತಿದೆ.

ಯಾವ ನಗರದಲ್ಲಿ ಎಷ್ಟುಆರ್‌ ದರ?

ಮುಂಬೈ 0.67

ದೆಹಲಿ 0.98

ಚೆನ್ನೈ 1.2

ಕೋಲ್ಕತಾ 0.56

ಆರ್‌ ದರ ಇಳಿಕೆಯ ಹಾದಿ

ಜ.1-6ರ ನಡುವೆ 4

ಜ.7-13ರ ನಡುವೆ 2.2

ಜ.14-21ರ ನಡುವೆ 1.57

click me!