ಬಿಹಾರದಲ್ಲಿ ಗಂಡು ಮಕ್ಕಳಿಗೂ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಣೆ ಭಾರೀ ಗೋಲ್‌ಮಾಲ್‌ ಪತ್ತೆ!

By Suvarna NewsFirst Published Jan 24, 2022, 7:41 AM IST
Highlights

* ವಿದ್ಯಾರ್ಥಿನಿಯರು ಋುತುಚಕ್ರದ ಸಮಯದಲ್ಲಿ ಬಳಸಲೆಂದು ನೀಡಲಾಗುವ ಸ್ಯಾನಿಟರಿ ನ್ಯಾಪ್‌ಕೀನ್‌

* ಬಿಹಾರದಲ್ಲಿ ಗಂಡು ಮಕ್ಕಳಿಗೂ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಣೆ ಭಾರೀ ಗೋಲ್‌ಮಾಲ್‌ ಪತ್ತೆ

ಪಟನಾ(ಜ.24): ವಿದ್ಯಾರ್ಥಿನಿಯರು ಋುತುಚಕ್ರದ ಸಮಯದಲ್ಲಿ ಬಳಸಲೆಂದು ನೀಡಲಾಗುವ ಸ್ಯಾನಿಟರಿ ನ್ಯಾಪ್‌ಕೀನ್‌ ಭತ್ಯೆಯನ್ನು ಬಿಹಾರದ ಶಾಲೆಯೊಂದರಲ್ಲಿ ಗಂಡು ಮಕ್ಕಳಿಗೂ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ.

ಸರನ್‌ ಜಿಲ್ಲೆಯ ಹಲ್ಕೋರಿ ಸಾಹ್‌ ಪ್ರೌಢಶಾಲೆಯ 7 ವಿದ್ಯಾರ್ಥಿಗಳಿಗೆ ನ್ಯಾಪ್‌ಕೀನ್‌ ಖರೀದಿಗೆಂದು 2016-17ನೇ ಸಾಲಿನಲ್ಲಿ ವಾರ್ಷಿಕ 150 ರು. ವಿತರಣೆ ಮಾಡಿದ್ದ ವಿಷಯವನ್ನು ಶಾಲೆಯ ಹೊಸ ಮುಖ್ಯೋಪಾಧ್ಯಾಯರು ಪತ್ತೆ ಮಾಡಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಿದ್ಯಾರ್ಥಿಗಳ ಹೆಸರಲ್ಲಿ ಶಾಲಾ ಸಿಬ್ಬಂದಿಯೇ ವಂಚನೆ ಮಾಡಿದ್ದಾರಾ? ಅಥವಾ ಲೆಕ್ಕದಲ್ಲಿ ಗೋಲ್‌ಮಾಲ್‌ ಮಾಡಲಾಗಿತ್ತೇ ಎಂಬ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಶಾಲೆಯಲ್ಲಿರುವ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸುವ ಯೋಜನೆಯನ್ನು ಬಿಹಾರ ಸರ್ಕಾರ 2015ರಲ್ಲಿ ಜಾರಿಗೊಳಿಸಿತ್ತು. ಈ ಯೋಜನೆಯಡಿ 8ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರು ವಾರ್ಷಿಕ 150 ರು.ಗಳನ್ನು ಪಡೆಯುತ್ತಿದ್ದರು.

click me!