ಡಾಕ್ಟರ್ ಆಗಬೇಕೆಂಬ ಮಹದಾಸೆ ಇದ್ದರೂ ಎಂಬಿಬಿಎಸ್ ಕೋರ್ಸ್ ಬಡವರ ಪಾಲಿಗೆ ಗಗನಕುಸುಮ ಎಂಬ ಮಾತಿದೆ. ಆದರೆ ದಿನಗೂಲಿ ಕಾರ್ಮಿಕ ದಂಪತಿಯ ಮೂವರು ಮಕ್ಕಳೂ ಸರ್ಕಾರಿ ಶಾಲೆಯಲ್ಲೇ ಓದಿ ವೈದ್ಯಕೀಯ ಸೀಟನ್ನು ದಕ್ಕಿಸಿಕೊಂಡಿರುವ ಸ್ಪೂರ್ತಿದಾಯಕ ಘಟನೆ ಕೇರಳದಲ್ಲಿ ನಡೆದಿದೆ.
ಪಾಲಕ್ಕಾಡ್ (ಫೆ.12): ಡಾಕ್ಟರ್ (Doctor) ಆಗಬೇಕೆಂಬ ಮಹದಾಸೆ ಇದ್ದರೂ ಎಂಬಿಬಿಎಸ್ ಕೋರ್ಸ್ (MBBS Course) ಬಡವರ ಪಾಲಿಗೆ ಗಗನಕುಸುಮ ಎಂಬ ಮಾತಿದೆ. ಆದರೆ ದಿನಗೂಲಿ ಕಾರ್ಮಿಕ ದಂಪತಿಯ ಮೂವರು ಮಕ್ಕಳೂ ಸರ್ಕಾರಿ ಶಾಲೆಯಲ್ಲೇ ಓದಿ ವೈದ್ಯಕೀಯ ಸೀಟನ್ನು ದಕ್ಕಿಸಿಕೊಂಡಿರುವ ಸ್ಪೂರ್ತಿದಾಯಕ ಘಟನೆ ಕೇರಳದಲ್ಲಿ ನಡೆದಿದೆ.
ಮೆಟ್ಟುವಾಜಿ ಎಂಬ ಕುಗ್ರಾಮದಲ್ಲಿ ವಾಸಿಸುವ ರಾಮಚಂದ್ರನ್ ಅಲಿಯಾಸ್ ರಾಮನ್ ಹಾಗೂ ಕಮಲಾ ದಂಪತಿ ದಿನಗೂಲಿ ನೌಕರರು. ರಾಮನ್ ಓದಿರುವುದು ಕೇವಲ 5ನೇ ಕ್ಲಾಸ್. ಇನ್ನು ಕಮಲಾ ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಆದರೆ ಅವರ ಈ ಹಿನ್ನೆಲೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂಬ ಕನಸಿಗೆ ಅಡ್ಡಿಯಾಗಿಲ್ಲ. ಅಂತೆಯೇ ಅವರ ಮೂವರೂ ಮಕ್ಕಳು ಕೂಡಾ ಯಾವುದೇ ದುಬಾರಿ ಶಿಕ್ಷಣ ಪಡೆಯದೇ ಕೇವಲ ಸರ್ಕಾರ ಶಾಲೆಯಲ್ಲೇ ಓದಿ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದಾರೆ.
ದಂಪತಿಯ ಮಗ ಇಂದ್ರಜಿತ್ 3 ವರ್ಷದ ಹಿಂದೆಯೇ ಎಂಬಿಬಿಎಸ್ ಸೀಟು ಪಡೆದಿದ್ದ. ಮೊದಲ ಮಗಳು ಇಂದ್ರಜಾ 2 ವರ್ಷದ ಹಿಂದೆ ಸೀಟು ಪಡೆದುಕೊಂಡಿದ್ದಳು. ಇದೀಗ ಎರಡನೇ ಮಗಳು ಇಂದುಜಾ ಕೂಡಾ ಎಂಬಿಬಿಎಸ್ ಸೀಟು ದಕ್ಕಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇವರ ಮನೆ ಇರುವುದು ದಟ್ಟಅಡವಿಯ ನಡುವಾದ ಕಾರಣ, ನಿತ್ಯ ಶಾಲೆಗೆ 8 ಕಿ.ಮೀ ನಡೆದೇ ಹೋಗಬೇಕಿತ್ತು.
ರೈತನ ಮಗಳನ್ನು ಎಂಬಿಬಿಎಸ್‌ಗೆ ಸೇರಿಸಿದ ಸಚಿನ್ ತೆಂಡುಲ್ಕರ್
ಕಾಡು ಪ್ರಾಣಿಗಳ ಭೀತಿಯ ನಡುವೆಯೇ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಒಬ್ಬರಿಗೆ ಒಬ್ಬರ ನೆರವಾಗುವ ಮೂಲಕ ಈ ಸಾಧನೆ ಮಾಡಿದ್ದಾರೆ. ಕೇವಲ 3 ವರ್ಷಗಳ ಹಿಂದಿನವರೆಗೂ ನಾವು ನಿತ್ಯ 3 ಕಿ.ಮೀ ನಡೆದು ಮನೆಗೆ ನೀರು ಹೊತ್ತು ತರಬೇಕಿತ್ತು. ಆದರೆ ಇದೆಲ್ಲದ ಹೊರತಾಗಿಯೂ ಮೂರೂ ಮಕ್ಕಳು ಕಟ್ಟಪಟ್ಟು ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣದತ್ತ ಹೆಜ್ಜೆ ಇಟ್ಟಿದ್ದಾರೆ. ಇದು ಖಷಿಯ ವಿಷಯ ಎಂದು ರಾಮನ್-ಕಮಲಾ ಸಂಭ್ರಮಿಸಿದ್ದಾರೆ.
ದುಬಾರಿ ಶುಲ್ಕದ ಭಯಕ್ಕೆ ಮೊದಲ ನೀಟ್ ಸೀಟು ಕೈಬಿಟ್ಟ ವಿದ್ಯಾರ್ಥಿನಿ: 18 ವರ್ಷದ ತಂಗಪೆಚ್ಚಿ ಎನ್ನುವ ವಿದ್ಯಾರ್ಥಿನಿ ಪಾನಮೂಪನ್ ಪತ್ತಿ ಕುಗ್ರಾಮದ ನಿವಾಸಿ. 2020ರಲ್ಲಿ ಆಕೆ ನೀಟ್ ಪರೀಕ್ಷೆ ಬರೆದಿದ್ದಳು. ಹಿಂದುಳಿದ ವರ್ಗದಿಂದ ಹಿನ್ನೆಲೆಯ ಆಕೆಗೆ ಡಾಕ್ಟರ್ ಆಗಬೇಕು ಎನ್ನುವ ಕನಸು. ಅದಕ್ಕಾಗಿ ಎಂಬಿಬಿಎಸ್ ಓದಲು ಅವಳಿಗಾಸೆ. ತಂಗಪೆಚ್ಚಿ ನೀಟ್ ಪರೀಕ್ಷೆಯಲ್ಲಿ 155 ಅಂಕ ಗಳಿಸಿ ಪಾಸಾಗಿದ್ದಳು. ಆದರೆ ದುಬಾರಿ ಶುಲ್ಕದ ಭಯದಿಂದ ಸೀಟನ್ನು ತ್ಯಜಿಸಿದ್ದಳು.
MBBS Exmas ಸಚಿವ ಸುಧಾಕರ್ ಪತ್ರಕ್ಕೆ ಡೋಂಟ್ ಕೇರ್, ನಿಗದಿಯಂತೆ ರಾಜೀವ್ ಗಾಂಧಿ ಆರೋಗ್ಯ ವಿವಿ ಪರೀಕ್ಷೆ!
ನಂತರ ಸರ್ಕಾರ ಹಿಂದುಳಿದ ವರ್ಗಕ್ಕೆ ಶೇ. 7.5 ಮೀಸಲಾತಿ ಘೋಷಿಸಿತ್ತು. ಆದರೆ ಅಷ್ಟರಲ್ಲಿ ತಂಗಪೆಚ್ಚಿ ಸೀಟು ತ್ಯಜಿಸಿಯಾಗಿತ್ತು. 2021ರಲ್ಲಿ ತಂಗಪೆಚ್ಚಿ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆದಳು. ಈ ಬಾರಿ ಆಕೆ 256 ಅಂಕ ಗಳಿಸಿದಳು. ಕಳೆದ ಬಾರಿಗಿಂತ 100 ಅಂಕ ಹೆಚ್ಚು. ಕನ್ಯಾಕುಮಾರಿಯ ಶ್ರೀ ಮೂಕಾಂಬಿಕಾ ಮೆಡಿಕಲ್ ಕಾಲೇಜಿನಲ್ಲಿ ಆಕೆಗೆ ಮೆಡಿಕಲ್ ಸೀಟು ಸಿಕ್ಕಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತಂಗಪೆಚ್ಚಿ ತಮಿಳು ಮಾಧ್ಯಮ ಹಿನ್ನೆಲೆಯಿಂದ ಬಂದ ಕಾರಣ ಇಂಗ್ಲಿಷ್ ಪದಗಳ ಬಳಕೆ ಸವಾಲಿನದ್ದಾಗಿತ್ತು. ಆದರೆ ಶಿಕ್ಷಕರ ನೆರವಿನಿಂದ ಆ ಸವಾಲನ್ನು ಮೀರುವಂತಾಯಿರು ಎಂದಿದ್ದಾರೆ.