Hanuman Jayanti: ನಮ್ಮೊಳಗಿನ ಹನುಮ ಜಾಗೃತಗೊಳ್ಳಲಿ

Published : Apr 16, 2022, 01:29 PM ISTUpdated : Apr 16, 2022, 01:30 PM IST
Hanuman Jayanti: ನಮ್ಮೊಳಗಿನ ಹನುಮ ಜಾಗೃತಗೊಳ್ಳಲಿ

ಸಾರಾಂಶ

* ಹನುಮಾನ್ ಜನ್ಮೋತ್ಸವವನ್ನು ದೇಶ ಮತ್ತು ವಿದೇಶಗಳಲ್ಲೂ ಆಚರಣೆ * ಆಂಜನೇಯನ ಜನ್ಮ ದಿನವನ್ನು ಜಗತ್ತಿನೆಲ್ಲೆಡೆ ಹನುಮಾನ್‌ ಜಯಂತಿಯಾಗಿ ಆಚರಣೆ * ನಮ್ಮೊಳಗಿನ ಹನುಮ ಜಾಗೃತಗೊಳ್ಳಲಿ  

- ಜಗದೀಶ್ ಬಳಂಜ, ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ.

ಭಾರತೀಯರ  ಬದುಕಿನ ಆದರ್ಶ ಪುರುಷ ಪ್ರಭೋ ಶ್ರೀ ರಾಮಚಂದ್ರನ  ದೂತ ಬಲವಂತ ಹನುಮ ಭಾರತೀಯರ ಮನೆ-ಮನಗಳಲ್ಲಿ ಯುಗಯುಗಗಳಿಂದ ಆರಾಧನೆಯನ್ನು ಪಡೆಯುತ್ತಿದ್ದಾನೆ. ಚಿರಂಜೀವಿ ಮಾರುತಿಯು  ತನ್ನ ಅತುಲ ಗುಣಸಂಪತ್ತಿನಿಂದ  ಜನ ಜೀವನದ ಆರಾಧ್ಯನಾಗಿ ಮೆರೆಯುತ್ತಿದ್ದಾನೆ. ಹನುಮ ಜಯಂತಿಯ ಪುಣ್ಯವಸರದಲ್ಲಿ ನಮ್ಮ ಮನದೊಳಗೆ ಹನುಮಂತನನ್ನು  ಸ್ಥಾಪಿಸುವ ಮೂಲಕ ಹನುಮನೆಂಬ ಸಾಗರದ ಒಂದು ಬಿಂದುವಿನಿಂತಾದರೂ  ಬದುಕನ್ನು  ಮುನ್ನಡೆಸುವ ಅಗತ್ಯ ಪ್ರಸ್ತುತ ಕಾಲದಲ್ಲಿದೆ.

ಬೆಟ್ಟದಂತಹ  ದೇಹಬಲ, ಉಕ್ಕಿನಂತಹ ಮನೋಬಲ, ಕಲ್ಲಿನಂತಹ ತಪೋಬಲ, ಮಿಂಚಿನಂತಹ ಯೋಗಶಕ್ತಿಯಿಂದಾಗಿಯೇ  ವೀರಾಂಜನೇಯ ಕೋಟ್ಯಾಂತರ ಜನರ ಹೃದಯ ವಂದಿತನಾದದ್ದು.  ಹನುಮಂತನಂತ  ದೇಹಬಲ ನಮ್ಮದಾಗದಿದ್ದರರೂ ತಮಗೆದುರಾದ ಕಠಿಣ ಪರಿಸ್ಥಿತಿಯನ್ನು  ನಿಭಾಯಿಸುವ ದೈಹಿಕ ಶಕ್ತಿಯನ್ನು ಸಂಪಾದಿಸಿ ಕೊಳ್ಳುವುದು ಅನಿವಾರ್ಯವಾಗಿದೆ. ಬದಲಾದ ಜೀವನಶೈಲಿ ಮತ್ತು ಪಾಸ್ಟ್ ಫುಡ್ ಗಳಿಂದ ಬೊಜ್ಜು ತುಂಬಿ ಜಡವಸ್ತುವಿನಂತೆ ಆಗಿರುವ ದೇಹಕ್ಕೆ  ಚೈತನ್ಯವನ್ನು ತುಂಬುವ ಮೂಲಕ ಶಕ್ತಿಯುತರಾಗಬೇಕಿದೆ.

ಹನುಮಾನ್ ಜಯಂತಿ ಯಾವಾಗ? ಹೀಗಿರಲಿ ಪೂಜೆಯ ವಿಧಿ ವಿಧಾನ

ಜಗತ್ತಿನಲ್ಲಿ ಮನೋಬಲ ಮತ್ತು ತಪೋಬಲಗಳಿಗೆ  ಅನ್ವರ್ಥ  ಒಂದಿದ್ದರೆ ಅದು ವಾಯುಪುತ್ರ ಹನುಮ. ಮನೋ ಸಂಕಲ್ಪವನ್ನು ಪೂರ್ಣಗೊಳಿಸುವವರೆಗೆ ವಿರಮಿಸುತ್ತಿರಲಿಲ್ಲ. ಉಕ್ಕಿನಂತಹ ಮನೋಬಲದ ಕಾರಣದಿಂದಾಗಿಯೇ ನೂರಾರು ಯೋಜನಾ ವಿಸ್ತಾರದ ಸಾಗರವನ್ನು ಕ್ಷಣ ಮಾತ್ರದಿ ಸಮುದ್ರೋಲಂಘನ ಮಾಡಿದ್ದು, ಬೃಹತ್ ಗಾತ್ರದ ಸಂಜೀವಿನಿ  ರಾಮನ ಪಾದಗಳಿಗೆ ಅರ್ಪಿಸಿದ್ದು. ಇಂತಹ ಮನೋಸದೃಢತೆ  ನಮಗೂ ಅಗತ್ಯವಿದೆ.  ಆಲಸ್ಯವೆಂಬ ಪ್ರೇತವನ್ನು ಓಡಿಸಿ ಉತ್ಸಾಹ ಮತ್ತು ದೃಢತೆಯನ್ನು ಮೈಗೂಡಿಸಿಕೊಂಡಾಗ ನಮ್ಮಿಂದ ಮಹತ್ಕಾರ್ಯಗಳು ಸಾಧ್ಯವಾಗುವುದರೊಂದಿಗೆ ನವಭಾರತ  ನಿರ್ಮಾಣವಾಗುತ್ತದೆ.

ಜಾನಕಿ ರಾಮನನ್ನು ತನ್ನ ಹೃದಯಮಂದಿರದಲ್ಲಿ ಪೂಜಿಸಿದ ಪವನಸುತನ  ಅನನ್ಯ  ಭಕ್ತಿ ಮತ್ತು ಸಮರ್ಪಣಾಭಾವ ಯುಗಯುಗ ಗಳಿಗೆ ಪಾಠವಾಗಿದೆ. ತನ್ನ ಜನ್ಮವೇ ರಾಮ ಸೇವೆಯೆಗಾಗಿ ಎಂಬ ತೆರದಿ  ನಿಸ್ವಾರ್ಥ ಮನದಿಂದ ರಘುವರದನ ಬಂಟನಾಗಿ ಮೆರೆದ. ಎದೆ ಬಗಿದು ಸೀತಾರಾಮರನ್ನು ತೋರಿಸಿದ  ಕಥೆಯೇ  ಅವನ ಪರಿಶುದ್ಧ ಪ್ರೇಮಕ್ಕೆ ಸಾಕ್ಷಿ. ಇಂತಹುದೇ ಪ್ರೇಮ ಮತ್ತು ಭಕ್ತಿ ನಮಗೆ ರಾಷ್ಟ್ರದ ಮೇಲೆ ಮೂಡಬೇಕು ನಮ್ಮೆಲ್ಲರನ್ನು ಮಡಿಲ್ಲಲ್ಲಿ ಸಾಕುತ್ತಿರುವ ತಾಯಿ ಭಾರತಾಂಬೆ ಗೆ ತನುಮನಗಳೆಲ್ಲವನ್ನು ಅರ್ಪಿಸಿ ನಿಷ್ಕಲ್ಮಶ ಪ್ರೀತಿಯಿಂದ ಅವಳ ಪಾದಭಿಷೇಕ ಮಾಡಬೇಕಾಗಿದೆ. ರಾಷ್ಟ್ರದ ಮೇಲಿನ ಪ್ರೀತಿ ಅಭಿಮಾನಗಳೆಲ್ಲವೂ  ಕೇವಲ ಕೃತಿಗೆ ಸೀಮಿತವಾಗದೆ ಕಾರ್ಯಗಳಲ್ಲೂ  ಅಭಿವ್ಯಕ್ತಿಗೊಂಡಾಗ  ವಿಶ್ವಗುರು ಭಾರತದ ಪುನರುತ್ಥಾನ ಸಾಧ್ಯ

ಶನಿವಾರ ಬಂದ Hanuman Jayanti; ಇಂದು ಹೀಗೆ ಮಾಡಿ ಶನಿ, ರಾಹು ಕಾಟದಿಂದ ತಪ್ಪಿಸಿಕೊಳ್ಳಿ

ಆಂಜನೇಯನ ಬದುಕಿನ ಪ್ರತಿಯೊಂದು ಘಟನೆಗಳು ಒಂದೊಂದು ಆದರ್ಶವನ್ನು ಬಿತ್ತುತ್ತದೆ. ಆತನ ಪ್ರತಿ ಗುಣಗಳು ಭೂಮಿ ಇರುವರೆಗೂ ಅನುಕರಣೀಯವಾದುದು.  ಚಿರಂಜೀವಿಯಾದ ಆ ಬಲ ವಂತ ಇಂದಿಗೂ ನಮ್ಮ ನಡುವೆ ಇದ್ದಾನೆ. ಆತನ ಯಶೋಗಾಥೆಯನ್ನು ಪುರಾಣದ ಪುಣ್ಯ ಪುಟಗಳಲ್ಲಿ ಓದುತ್ತಾ ಅಥವಾ ಕೇಳುತ್ತಾ ನಮ್ಮೊಳಗೆ ಹನುಮ ಗುಣಗಳನ್ನು ಸಾಕಾರಗೊಳಿಸಿಕೊಳ್ಳೋಣ  ಎಂಬುದೇ  ಈ ಲೇಖನದ ಆಶಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?