ತಮಾಷೆ ಅಲ್ಲ! ಪೋಸ್ಟ್‌ ಆಫೀಸ್‌ಗೆ ಕನ್ನ ಹಾಕಿದವನಿಗೆ ಸಿಕ್ಕಿದ್ದು ಬರೀ 487 ರೂ!

Suvarna News   | Asianet News
Published : Jan 03, 2020, 02:52 PM IST
ತಮಾಷೆ ಅಲ್ಲ! ಪೋಸ್ಟ್‌ ಆಫೀಸ್‌ಗೆ ಕನ್ನ  ಹಾಕಿದವನಿಗೆ ಸಿಕ್ಕಿದ್ದು ಬರೀ 487 ರೂ!

ಸಾರಾಂಶ

ಕಳ್ಳತನ ಮಾಡುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ ಬರಬೇಕಾಗುತ್ತದೆ. ಅಂತದ್ದೊಂದು ಪ್ರಸಂಗ ನವದೆಹಲಿಯ ಪೋಸ್ಟ್ ಆಫೀಸ್‌ನಲ್ಲಿ ನಡೆದಿದೆ. 

ನವದೆಹಲಿ (ಜ. 03): ಕಳ್ಳತನ ಮಾಡುವಾಗಲೂ ಅದೃಷ್ಟಇರಬೇಕು ಎನ್ನುವುದು ಇದಕ್ಕೇ ಇರಬೇಕು. ಪೋಸ್ಟ್‌ ಆಫೀಸ್‌ನ ಗೋಡೆಗೆ ಕನ್ನ ಕೊರೆದು ಒಳನುಗ್ಗಿದ ವ್ಯಕ್ತಿಯೊಬ್ಬ ಇಡೀ ಅಂಚೆ ಕಚೇರಿಯನ್ನು ಹುಡುಕಾಡಿದರೂ ಸಿಕ್ಕಿದ್ದು ಕೇವಲ 487 ರು. ಮಾತ್ರ.

ತಮಾಷೆಯೇ ಅಲ್ಲರೀ... ಲೈಂಗಿಕ ಸುಖ ಜೀವನ ನಡೆಸೋದ್ರಲ್ಲಿ ಕೃಷಿಕರೇ ನಂಬರ್ 1 ಅಂತೆ!

ಆದರೆ, ಸಮೀಪದಲ್ಲೇ ಬ್ಯಾಗ್‌ವೊಂದರಲ್ಲಿ ಇದ್ದ 5000 ರು. ಆತನ ಕಣ್ಣಿಗೆ ಬಿದ್ದಿರಲಿಲ್ಲ. ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎಂದು ಸಿಕ್ಕಿದಷ್ಟುಹಣವನ್ನು ಕಿಸೆಗೆ ಹಾಕಿಕೊಂಡು ಮನೆಗೆ ಹೋಗಿದ್ದಾನೆ. ಇಂಥದ್ದೊಂದು ಕಳ್ಳತನದ ಪ್ರಸಂಗ ನಡೆದಿದ್ದು ಪೂರ್ವ ದೆಹಲಿಯ ಪೋಸ್ಟ್‌ ಆಫೀಸ್‌ ಒಂದರಲ್ಲಿ.

ತಮಾಷೆಯೇ ಅಲ್ಲರೀ! ಕಛೇರಿ ಕೆಲಸಕ್ಕೂ ಹೆಲ್ಮೆಟ್

ಸೋಮವಾರ ಮುಂಜಾನೆ ಉಪ ಪೋಸ್ಟ್‌ ಮಾಸ್ಟರ್‌ ಕುಲ್ದೀಪ್‌ ಸಿಂಗ್‌ ವರ್ಮಾ ಎಂದಿನಂತೆ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಶನಿವಾರ ಸಂಜೆ 5.30 ಕ್ಕೆ ಪೋಸ್ಟ್ ಮಾಸ್ಟರ್ ಬೀಗ ಹಾಕಿಕೊಂಡು ಹೋದ ನಂತರ ಕಳ್ಳರು ಹಿಂಬದಿಯಿಂದ ಗೋಡೆಗೆ ಖನ್ನ ಹಾಕಿದ್ದಾರೆ.  ಅಲ್ಲಿ ಸೆಕ್ಯುರಿಟಿಗಳಿಲ್ಲದೇ ಇರುವುದು ಕಳ್ಳರಿಗೆ ಅನುಕೂಲವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು ಅಲ್ಲಿ ಸಿಸಿಟಿವಿಗಳಿಲ್ಲದೇ ಇರುವುದು ತಲೆನೋವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?