ತಿಹಾರ್‌ ಜೈಲಲ್ಲಿ 4 ನೇಣುಗಂಬ ಸಿದ್ಧ: ನಿರ್ಭಯಾ ರೇಪಿಸ್ಟ್‌ಗೆ ಒಮ್ಮೆಗೇ ಗಲ್ಲು?

By Kannadaprabha News  |  First Published Jan 3, 2020, 1:19 PM IST

ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ 7 ವರ್ಷ| ಅಪರಾಧಿಗಳ ಗಲ್ಲು ಮತ್ತಷ್ಟು ವಿಳಂಬ| ಕಾನೂನಿನ್ನು ಬಳಸಿ ಗಲ್ಲು ಮುಂದೂಡಲು ಅಪರಾಧಿಗಳ ಹರಸಾಹಸ | 


ನವದೆಹಲಿ (ಜ. 03): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಾಗೂ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ದೆಹಲಿಯ ನಿರ್ಭಯಾ ರೇಪ್‌ ಆ್ಯಂಡ್‌ ಮರ್ಡರ್‌ ಪ್ರಕರಣದ ದೋಷಿಗಳಿಗೆ ಗಲ್ಲು ಶಿಕ್ಷೆ ಸನ್ನಿಹಿತವಾಗಿದ್ದು, ಎಲ್ಲಾ 4 ಆರೋಪಿಗಳನ್ನು ಏಕ ಕಾಲಕ್ಕೆ ನೇಣುಗಂಬಕ್ಕೆ ಏರಿಸಲು ತಿಹಾರ್‌ ಜೈಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ನಿರ್ಭಯಾ ರೇಪಿಸ್ಟ್‌ಗಳಿಗೆ ಗಲ್ಲು: ಮುಂದೂಡಲು ಇವೆ ಹಲವು ದಾರಿ!

Latest Videos

undefined

ಸದ್ಯ ತಿಹಾರ್‌ ಜೈಲಿನಲ್ಲಿ ಒಂದು ನೇಣುಗಂಬ ಮಾತ್ರ ಇದ್ದು, ಇನ್ನು ಮೂರು ಹೊಸ ನೇಣುಗಂಬಗಳನ್ನು ತಯಾರು ಮಾಡಲಾಗುತ್ತಿದೆ. ನೇಣಿಗೇರಿಸಿದ ಬಳಿಕ ಶವವನ್ನು ಸಾಗಿಸಲು ಜೆಸಿಬಿ ಮೂಲಕ ಸುರಂಗ ಕೊರೆಯಲಾಗುತ್ತಿದೆ. ದೋಷಿಗಳ ಮುಂದಿರುವ ಎಲ್ಲಾ ಆಯ್ಕೆಗಳು ಮುಚ್ಚಿರುವ ಕಾರಣ ಜೈಲಾಧಿಕಾರಿಗಳು ಈ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ರಾಪ್ತ ಎಂದಿದ್ದ ನಿರ್ಭಯಾ ರೇಪಿಸ್ಟ್ ಪವನ್ ಅರ್ಜಿ ವಜಾ

ಈ ವರೆಗೆ ಏಕ ಕಾಲಕ್ಕೆ ಓರ್ವ ದೋಷಿಯನ್ನು ಮಾತ್ರ ಗಲ್ಲಿಗೇರಿಸಲಾಗುತ್ತಿದ್ದು, ಒಂದು ವೇಳೆ ನಾಲ್ವರು ದೋಷಿಗಳನ್ನು ಏಕ ಕಾಲಕ್ಕೆ ಗಲ್ಲಿಗೇರಿಸಿದರೆ, ಏಕ ಕಾಲದಲ್ಲಿ ಒಂದಕ್ಕಿಂತ ಹೆಚ್ಚು ಮಂದಿಯನ್ನು ಗಲ್ಲಿಗೇರಿಸಿದ ದೇಶದ ಮೊದಲ ಜೈಲು ತಿಹಾರ್‌ ಆಗಲಿದೆ.

click me!