ಬಿಜೆಪಿ ಸರ್ಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ: ಮಾಜಿ ರಾಜ್ಯಪಾಲರ ಆರೋಪ

By Suvarna NewsFirst Published Oct 27, 2021, 10:43 AM IST
Highlights

*ಸರ್ಕಾರದಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ
*ಮಾಜಿ ರಾಜ್ಯಪಾಲ ಮಲಿಕ್‌ ಗಂಭೀರ ಆರೋಪ!
*ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯ 

ಗೋವಾ (ಅ. 27): ಗೋವಾ (Goa) ಬಿಜೆಪಿ ಸರ್ಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ (Satya Pal Mallik) ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಮೇಘಾಲಯ (Meghalaya) ರಾಜ್ಯಪಾಲರಾಗಿರುವ ಸತ್ಯಪಾಲ್‌ ಮಲಿಕ್‌ 2019ರ ನವೆಂಬರ್‌ನಿಂದ 2020ರ ಆಗಸ್ಟ್‌ವರೆಗೆ ಗೋವಾ ರಾಜ್ಯಪಾಲರಾಗಿದ್ದರು.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮಲಿಕ್‌ ‘ಗೋವಾ ಸರ್ಕಾರ ಪ್ರತಿ ವಿಷಯ ನಿರ್ವಹಣೆಯಲ್ಲೂ ಭ್ರಷ್ಟಾಚಾರ (Curroption) ನಡೆಸುತ್ತಿದೆ. ಈ ವಿಚಾರವನ್ನು ಪ್ರಶ್ನೆ ಮಾಡಿದ್ದಕ್ಕೇ ನನ್ನನ್ನು ಮೇಘಾಯಲಕ್ಕೆ ವರ್ಗ ಮಾಡಲಾಯಿತು’ ಎಂಬ ಗಂಭೀರ ಆರೋಪ ಮಾಡಿದ್ದಾರೆ.

RSS ಆಫೀಸರ್ & ಅಂಬಾನಿ ಡೀಲ್ ಓಕೆ ಮಾಡಲು 300 ಕೋಟಿ ಲಂಚ ಆಮಿಷ

ಮಾಜಿ ರಾಜ್ಯಪಾಲರ ಆರೋಪದ ಬೆನ್ನಲ್ಲೇ, ಕಾಂಗ್ರೆಸ್‌(Congress), ಆಮ್‌ಆದ್ಮಿ (Aam Aadmi Party) ಸೇರಿದಂತೆ ವಿಪಕ್ಷಗಳು, ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆ ಆಗ್ರಹಿಸಿವೆ. ಅಲ್ಲದೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಲಾಕ್‌ಡೌನ್‌ ನಿಭಾಯಿಸುವಲ್ಲಿ ವಿಫಲ!

ಪ್ರಮೋದ್ ಸಾವಂತ್ ಅವರು ಲಾಕ್‌ಡೌನ್ಅನ್ನು ನಿಭಾಯಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ರಾಜ್ಯಪಾಲ ಮಲಿಕ್‌ ,  ಗೋವಾದಲ್ಲಿ ಹೊಸ ರಾಜಭವನವನ್ನು ನಿರ್ಮಿಸುವ ಸಾವಂತ್ ಸರ್ಕಾರದ ಅನಗತ್ಯ ಯೋಜನೆಯ ವಿರುದ್ಧ ಅವರು ಹೇಗೆ ದನಿ ಎತ್ತಿದ್ದರು ಎಂಬುದರ ಬಗ್ಗೆ ಹೇಳಿದರು.

ಲಂಚ ಪಡೆಯಲ್ಲ: ಪೊಲೀಸರ ಪ್ರತಿಜ್ಞೆ

ನಾನು ಲೋಹಿಯಾ ಮೂಲದವನು. ಭ್ರಷ್ಟಾಚಾರದ ವಿಷಯ ಬಂದಾಗ ನನಗೆ ತುಂಬಾ ಕೋಪ ಬರುತ್ತದೆ. ಭ್ರಷ್ಟಾಚಾರಿಗಳ ಮೇಲೆ ನನಗೆ ಕನಿಕರವಿಲ್ಲ. ಕೊರೋನಾ ಲಾಕ್‌ಡೌನ್ ಘೋಷಿಸಿದ ದಿನ, ಸರ್ಕಾರ ಮೂಲಭೂತ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಸಹ ತೆರೆಯಲು ಅನುಮತಿ ನೀಡಿರಲಿಲ್ಲ. ಆದರೆ ಅವುಗಳನ್ನು ಮನೆ ಬಾಗಿಲಿಗೆ ಸರಬರಾಜು ಮಾಡುತ್ತೇವೆ ಎಂದು ಹೇಳಿತ್ತು. ಈ ಕೆಲಸ ಅಸಾಧ್ಯವಾಗಿತ್ತು. ಆದರೆ ಕಂಪನಿಯೊಂದು ಹಣವನ್ನು ನೀಡಿದ್ದರ ಬಗ್ಗೆ ಕಾಂಗ್ರೆಸ್ ನವರು, ಇತರರು ನನ್ನ ಬಳಿ ಬಂದು ವಿಷಯ ತಿಳಿಸಿದರು. ಹಾಗಾಗಿ ನಾನು ಪ್ರಧಾನಿಯವರಿಗೆ ಈ ಬಗ್ಗೆ  ತಿಳಿಸಿದ್ದೆ, ಎಂದು ಸತ್ಯಪಾಲ್ ಮಲಿಕ್ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರಾಜ್ಯಪಾಲರು ತಪ್ಪು ಮಾಹಿತಿ ನೀಡಿದ್ದಾರೆ!

ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant)ಗೋವಾದ ಮಾಜಿ ರಾಜ್ಯಪಾಲರ ಹೇಳಿಕೆಗಳ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಖ್ಯಮಂತ್ರಿಯವರನ್ನು  ಸಮರ್ಥಿಸಿಕೊಂಡಿದೆ. ಅಲ್ಲದೇ ಮಲಿಕ್ ಅವರ 'ತಪ್ಪು ಮಾಹಿತಿ' ನೀಡಿರುವುದಾಗಿ ತಿಳಿಸಿದೆ. “ರಾಜ್ಯಪಾಲ ಸತ್ಯಪಾಲ್ ಮಲಿಕ್ ತಮ್ಮ ಹೇಳಿಕೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಇದನ್ನು ಕೇಂದ್ರದ ನಾಯಕರ ಗಮನಕ್ಕೆ ತರುತ್ತೇವೆ" ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತನವಡೆ (Sadanand Shet Tanavade) ಹೇಳಿದ್ದಾರೆ.

ಈ ಕೂಡಲೇ ರಾಜಿನಾಮೆ ನೀಡಬೇಕು!

ಈ ಹಿನ್ನೆಲೆಯಲ್ಲಿ ಗೋವಾದ ವಿರೋಧ ಪಕ್ಷಗಳು ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿವೆ. ರಾಜ್ಯಪಾಲರ ಆರೋಪದ ನಂತರ ಸಾವಂತ್ ಅವರಿಗೆ "ಮುಂದುವರಿಯುವ ನೈತಿಕ ಹಕ್ಕಿಲ್ಲ" ಎಂದು ಕಾಂಗ್ರೆಸ್ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ದಿಗಂಬರ್ ಕಾಮತ್ (Digambar Kamath) ಟ್ವೀಟ್ ಮಾಡಿದ್ದಾರೆ.

 

Hon'ble Governor Satya Pal Malik Ji always stood for the People of Goa. He spoke the truth & completely exposed corrupt . has no moral right to continue in power after revelations made by a Constitutional Head. must resign immediately. pic.twitter.com/Ro0uTdnntw

— Digambar Kamat (@digambarkamat)

 

click me!