ಎಲೆಕ್ಟ್ರಾನಿಕ್‌ ಯುದ್ಧ ನಡೆಸಬಲ್ಲ ಸಮರ್ಥಕ್‌ 16ಕ್ಕೆ ಕಾರವಾರದಲ್ಲಿ ನೌಕಾಪಡೆಗೆ ಸೇರ್ಪಡೆ

Published : Oct 14, 2026, 07:41 AM IST
Samarthak

ಸಾರಾಂಶ

ಸಂಪೂರ್ಣ ದೇಶೀಯ ತಂತ್ರಜ್ಞಾನದಿಂದ ನಿರ್ಮಿಸಲಾದ ಬಹುಪಯೋಗಿ 'ಸಮರ್ಥಕ್' ಯುದ್ಧನೌಕೆಯು ಅಕ್ಟೋಬರ್ 16ರಂದು ಕಾರವಾರದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ. ಇದು ಎಲೆಕ್ಟ್ರಾನಿಕ್‌ ಯುದ್ಧ, ಕರಾವಳಿ ಕಾವಲು, ವಿಪತ್ತು ಪರಿಹಾರ ಮತ್ತು ಮುಳುಗಿದ ನೌಕೆಗಳ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ನವದೆಹಲಿ: ಸಂಪೂರ್ಣ ದೇಶೀಯ ತಂತ್ರಜ್ಞಾನದಿಂದ ನಿರ್ಮಿಸಲಾದ ಬಹುಪಯೋಗಿ, ಎಲೆಕ್ಟ್ರಾನಿಕ್‌ ವಾರ್‌ ನಡೆಸಬಲ್ಲ ‘ಸಮರ್ಥಕ್’ ಯುದ್ಧನೌಕೆ ಅ.16ರಂದು ಕಾರವಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ.

ನೌಕೆ ವಿಶೇಷತೆ

ಕರಾವಳಿಯ ಕಾವಲು, ಸಮುದ್ರದಲ್ಲಿ ಕಾರ್ಯಾಚರಣೆ, ಪರೀಕ್ಷಾ ವೇದಿಕೆಯಾಗಿ ಕಾರ್ಯನಿರ್ವಹಿಸಬಲ್ಲ ಸಾರ್ಮಥ್ಯ ಹೊಂದಿದೆ. ಜೊತೆಗೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆ, ಅಗತ್ಯ ಬಿದ್ದಾಗ ಸೀಮಿತ ಆಸ್ಪತ್ರೆ ನೌಕೆಯಾಗಿ ಪರಿವರ್ತನೆಗೊಳ್ಳುವ ಸಾಮರ್ಥ್ಯ, ಮುಳುಗಿದ ನೌಕೆಗಳ ರಕ್ಷಣೆಯಲ್ಲೂ ಇದು ನಿರ್ಣಾಯಕ ಪಾತ್ರ ವಹಿಸಬಲ್ಲದು.

ಇದಲ್ಲದೆ ಪ್ರಕ್ಷುಬ್ಧ ಕಡಲ ಪರಿಸರದಲ್ಲಿ ನಿಖರವಾಗಿ ಕಾರ್ಯನಿರ್ವಹಿಸಲು ಅತ್ಯಾಧುನಿಕ ಸ್ವದೇಶಿ ಸೆನ್ಸರ್‌ಗಳು, ಶಸ್ತ್ರಾಸ್ತ್ರ, ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಒಳಗೊಂಡಿದೆ.

107 ಮೀಟರ್ ಉದ್ದ, 18.6 ಮೀಟರ್ ಅಗಲ, 3750 ಟನ್ ತೂಕದ ಸಾಮರ್ಥ್ಯದ ನೌಕೆ ಗಂಟೆಗೆ 15 ನಾಟಿಕಲ್‌ ಮೈಲು ವೇಗದಲ್ಲಿ ಚಲಿಸಬಲ್ಲದು. ನೌಕೆಯ ಒಟ್ಟು 116 ಸಿಬ್ಬಂದಿಗಳನ್ನು ಒಳಗೊಂಡಿರಲಿದೆ.

ಅತ್ಯಾಧುನಿಕ ಎಲೆಕ್ಟ್ರಾನಿಕ್ ವಾರ್ಫೇರ್ ವ್ಯವಸ್ಥೆ

ನೌಕೆಯು ಒಟೊ ಮೆಲಾರಾ 76 ಮಿ.ಮೀ ನೌಕಾ ಫಿರಂಗಿ, ವರುಣಾಸ್ತ್ರ, ಶೈನಾ ಟಾರ್ಪೆಡೋ ಲಾಂಚರ್‌ಗಳು, ಆ್ಯಂಟಿ ಸಬ್‌ಮರೀನ್‌ ರಾಕೆಟ್ ಲಾಂಚರ್‌ಗಳು,

ಸಂಕೇತ್ ಎಂಕೆ 3 ಕವಚ್ ಆ್ಯಂಟಿ ಮಿಸೈಲ್ ಡಿಕಾಯ್ ಸಿಸ್ಟಮ್‌ನಂತಹ ಅತ್ಯಾಧುನಿಕ ಎಲೆಕ್ಟ್ರಾನಿಕ್ ವಾರ್ಫೇರ್ ವ್ಯವಸ್ಥೆ, ಎಚ್‌ಎಎಲ್ ಧ್ರುವ್ ಎಂಕೆ 3 ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು ಇಳಿಸಲು ಮತ್ತು ಬಳಸಿಕೊಳ್ಳಲು ವಾಯುಯಾನ ಸೌಲಭ್ಯ ಹೊಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಎಲೆಕ್ಟ್ರಾನಿಕ್‌ ಯುದ್ಧ ನಡೆಸಬಲ್ಲ ಸಮರ್ಥಕ್‌ 16ಕ್ಕೆ ಕಾರವಾರದಲ್ಲಿ ನೌಕಾಪಡೆಗೆ ಸೇರ್ಪಡೆ
Vande barat sleeper trains: ಶೀಘ್ರದಲ್ಲಿ ಹಳಿಗೆ ಇಳಿಯಲಿದೆ 24 ಸ್ಲೀಪರ್‌ ಕೋಚ್‌ನ ಹೊಸ ವಂದೇ ಭಾರತ್‌!