
ಗುಜರಾತ್: ಗುಜರಾತ್‌ನಲ್ಲಿ ಕಳೆದ 40 ವರ್ಷಳಿಂದ ಕಾಂಗ್ರೆಸ್ ಗೆದ್ದಿಲ್ಲ. ಹಾಗಾದರೆ ಇದು SIR ಫಲಿತಾಂಶವೇ? ಎಂದು ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಇಂದು ಗುಜರಾತಿನಲ್ಲಿ ಮೂರು ಪುರಸಭೆಗಳು ಚುನಾವಣೆ ನಡೆದಿವೆ. ಎಲ್ಲದರಲ್ಲೂ ಭಾರತೀಯ ಜನತಾ ಪಾರ್ಟಿ ಭರ್ಜರಿ ಜಯ ಸಾಧಿಸಿದೆ. ಚುನಾವಣಾ ಫಲಿತಾಂಶ ಬಳಿಕ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, ರಾಹುಲ್ ಗಾಂಧಿ ಎಸ್‌ಐಆರ್ ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಗೆಲುವಿನಿಂದ ರಾಹುಲ್ ಗಾಂಧಿ ಪಾಠ ಕಲಿಯಬೇಕು, ಕಾಂಗ್ರೆಸ್ ತನ್ನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಗುಜರಾತ್ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡಿದೆ. ಕಳೆದ ನಲ್ವತ್ತೊಂದು ವರ್ಷಗಳಿಂದ ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಲಾಗಿಲ್ಲ. ಇದಕ್ಕೂ ಎಸ್‌ಐಆರ್ ಕಾರಣವೇ? ಎಂದು ಪ್ರಶ್ನಿಸಿದ ಅಮಿತ್ ಶಾ, ಇಂದು ಇಡೀ ದೇಶದ ಜನರು ಪ್ರಧಾನಿ ಮೋದಿಯೊಂದಿಗೆ ಇದ್ದಾರೆ. ಮುಂದಿನ ಮತ್ತೊಂದು ಚುನಾವಣಾ ಸೋಲಿಗೆ ಸಿದ್ಧವಾಗುವಂತೆ ರಾಹುಲ್ ಗಾಂಧಿಗೆ ತಿವಿದರು. ಬಿಜೆಪಿಯ ಸತತ ಗೆಲುವಿನಿಂದ ರಾಹುಲ್ ಗಾಂಧಿ ಪಾಠ ಕಲಿಯಬೇಕಿತ್ತು. ತನ್ನ ಪಕ್ಷದ ಸೋಲಿಗೆ ಕಾರಣವೇನೆಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಆದರೆ ರಾಹುಲ್ ಗಾಂಧಿ ಎಸ್‌ಐಆರ್ ನೆಪದಲ್ಲಿ ಭಾರತದಲ್ಲಿ ನುಸುಳಿರುವ ಬಾಂಗ್ಲಾದೇಶಿ ಒಳನುಸುಳುಕೋರರ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ