Sharda Peeth Temple: ಕಾಶ್ಮೀರದಲ್ಲಿ ಶಾರದಾ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ!

Published : Dec 04, 2021, 09:10 AM ISTUpdated : Dec 04, 2021, 09:26 AM IST
Sharda Peeth Temple: ಕಾಶ್ಮೀರದಲ್ಲಿ ಶಾರದಾ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ!

ಸಾರಾಂಶ

*ಪಿಒಕೆ ಶಾರದಾ ಪೀಠದ ವಾರ್ಷಿಕ ಯಾತ್ರೆ ಉತ್ತೇಜನಕ್ಕೆ ಈ ಕ್ರಮ *ಕಾಶ್ಮೀರದಲ್ಲಿ ಶಾರದಾ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ! *200 ಮಂದಿ ಸ್ಥಳೀಯರು ಭಾಗಿ : ಪವಿತ್ರ ಜಲವನ್ನು ಪ್ರೋಕ್ಷಣೆ  *ಶಾರದಾ ಪೀಠಕ್ಕೆ 1948ರ ವರೆಗೆ ಭಕ್ತರ ವಾರ್ಷಿಕ ಯಾತ್ರೆ 

ಜಮ್ಮು (ಡಿ. 04): ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣದ (Line of Control) ಬಳಿಯಿರುವ ತೀತ್ವಾಲ್‌ನಲ್ಲಿರುವ (Teetwal) ಮಾತಾ ಶಾರದಾ ದೇವಿಯ ದೇವಸ್ಥಾನದ ಮರು ನಿರ್ಮಾಣಕ್ಕೆ ಸೇವ್‌ ಶಾರದ ಸಮಿತಿ(ಶಾರದ ಸಮಿತಿ ರಕ್ಷಣೆ - Save Sharda Committee) ಶುಕ್ರವಾರ ಶಂಕು ಸ್ಥಾಪನೆ (Foundation Stone) ನೆರವೇರಿಸಿದೆ. ಈ ಕಾರ್ಯಕ್ರಮದಲ್ಲಿ 200 ಮಂದಿ ಸ್ಥಳೀಯರು, ಶಾರದಾ ಯೋಜನೆ ಬೆಂಬಲಿಸುವ 100 ಮಂದಿ ಭಾಗವಹಿಸಿದ್ದರು. ಈ ವೇಳೆ ಎಲ್ಲರಿಗೂ ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡಲಾಯಿತು

ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರತಿಕ್ರಿಯಿಸಿದ ಸಮಿತಿ, ‘ಶತಮಾನಗಳ ಕಾಲದಿಂದಲೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (Pakistan Occupied Kashmir) ಶಾರದ ಪೀಠಕ್ಕೆ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದರು. ಚರ್ರಿ ಮುಬಾರಕ್‌ (Charri Mubarak) ಎಂದೇ ಪ್ರಖ್ಯಾತಿಯಾಗಿದ್ದ ಈ ವಾರ್ಷಿಕ ಯಾತ್ರೆಗೆ ತೀತ್ವಾಲ್‌ನ ಈ ಶಾರದಾ ದೇವಸ್ಥಾನ ಸಾಂಪ್ರದಾಯಿಕ ಮಾರ್ಗವಾಗಿದೆ. ಪಿಒಕೆಯ ಶಾರದಾ ಪೀಠಕ್ಕೆ 1948ರ ವರೆಗೆ ಭಕ್ತರ ವಾರ್ಷಿಕ ಯಾತ್ರೆ ನಡೆಯುತ್ತಿತ್ತು. ಈ ವಾರ್ಷಿಕ ಯಾತ್ರೆಯನ್ನು ಪುನಃ ಉತ್ತೇಜಿಸಲು ಉತ್ತರ ಕಾಶ್ಮೀರದ ಕುಪ್ವಾರ (Kupwara) ಜಿಲ್ಲೆಯಲ್ಲಿರುವ ಪೌರಾಣಿಕ ದೇವಸ್ಥಾನವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಹೇಳಿದೆ.

Mathura: ಮಸೀದೀಲಿ ಕೃಷ್ಣ ವಿಗ್ರಹ ಸ್ಥಾಪನೆ ಘೋಷಣೆ : ನಿಷೇಧಾಜ್ಞೆ ಜಾರಿ!

ಕೃಷ್ಣ ದೇಗುಲಕ್ಕೆ  (Temple) ಹೊಂದಿಕೊಂಡಂತೆ ಇರುವ ಮಸೀದಿಯು (Masjid) ಕೃಷ್ಣನ ನಿಜವಾದ ಜನ್ಮಸ್ಥಳವಾಗಿದ್ದು (Janmabhoomi), ಅಲ್ಲಿ ಕೃಷ್ಣನ ವಿಗ್ರಹವನ್ನು (Krishna Idol) ಸ್ಥಾಪಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ (Akhila Bharatha Hindu Mahasabha) ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿದೆ. 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ (Babri Masjid) ಕೆಡವಿದ ಸ್ಮರಣಾರ್ಥ ಡಿ.6ರಂದು ಶಾಹಿ ಈದ್ಗಾ ಮಸೀದಿಯನ್ನು ಮಹಾ ಜಲಾಭಿಷೇಕದಿಂದ ಪವಿತ್ರಗೊಳಿಸಿ ಕೃಷ್ಣ ಮೂರ್ತಿಯನ್ನು ಸ್ಥಾಪಿಸಲಾಗುವುದು ಎಂದು ಮಹಾಸಭಾ ನಾಯಕರು ಹೇಳಿದ್ದರು. 

ಇನ್ನೊಂದೆಡೆ ನಾರಾಯಣಿ ಸೇನೆಯು ಮಸೀದಿಯನ್ನು ಕೆಡವುವ ಬೇಡಿಕೆಯೊಂದಿಗೆ ವಿಶ್ರಾಮ ಘಾಟ್‌ನಿಂದ ಕೃಷ್ಣ ಜನ್ಮಸ್ಥಾನದವರೆಗೆ ಪಾದಯಾತ್ರೆ ಮಾಡುವುದಾಗಿ ಘೋಷಿಸಿದೆ. ಈ ಹಿನ್ನೆಲೆ ದಂಗೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೆ ತಂದಿದ್ದು, ಕತ್ರಾ ಕೇಶವದೇವ ಮಂದಿರ ಹಾಗೂ ಶಾಹಿ ಈದ್ಗಾ ಮಸೀದಿಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನವನೀತ್‌ ಸಿಂಗ್‌ ಚಹಲ್‌ ಹೇಳಿದ್ದಾರೆ. ಡಿಸೆಂಬರ್ 6 ರಂದು ಶಾಹಿ ಈದ್ಗಾದಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸುವುದಾಗಿ ಬಲಪಂಥೀಯ ಗುಂಪುಗಳು ಘೋಷಿಸಿದ ನಂತರ ಉತ್ತರ ಪ್ರದೇಶದ ಮಥುರಾದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಸೀದಿಯು ಕೃಷ್ಣ ಜನಮಸ್ಥಾನ ದೇವಸ್ಥಾನದ ಪಕ್ಕದಲ್ಲಿದೆ.

ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಸಹಕರಿಸುವಂತೆ ಎಸ್‌ಎಸ್‌ಪಿ ಮನವಿ

ಎಸ್‌ಎಸ್‌ಪಿ (ಮಥುರಾ SSP) ಗೌರವ್ ಗ್ರೋವರ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 144 ಜಾರಿಯಲ್ಲಿದೆ, ವದಂತಿ ಹಬ್ಬಿಸುವ  (rumor-mongering) ಅಥವಾ ಪಟ್ಟಣದ ಶಾಂತಿಯುತ ವಾತಾವರಣಕ್ಕೆ ಭಂಗ ತರಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಡಿಸೆಂಬರ್ 6 ರಂದು ಕೆಲವು ಸಂಘಟನೆಗಳು ಕಾರ್ಯಕ್ರಮ ಅಥವಾ ಪಾದಯಾತ್ರೆ (ಈದ್ಗಾಕ್ಕೆ) ನಡೆಸಲು ನಿರ್ಧರಿಸಿವೆ ಎಂದು  ಮಾಹಿತಿ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಕೆಲಸ ಮಾಡುವಂತೆ ಎಸ್‌ಎಸ್‌ಪಿ ಜನರಿಗೆ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ