*ಡಿಢೀರ್ ಈರುಳ್ಳಿ ಬೆಲೆ ಕುಸಿದ ಪರಿಣಾಮ
*ಕಣ್ಣೀರಲ್ಲೇ ಕೈತೊಳೆಯುತ್ತಿರುವ ಅನ್ನದಾತ
*ಆದಾಯ: 1665.5 ರು. ಖರ್ಚು: 1651.98 ರು.
ಮುಂಬೈ (ಡಿ. 04): ಕಳೆದೊಂದು 4-5 ತಿಂಗಳನಿಂದ ದರ ಏರಿಕೆ ಮೂಲಕ ಗ್ರಾಹಕನ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ (Oninon Price) ಇದೀಗ ಬೆಳೆ ಬೆಳೆದ ರೈತನಿಗೆ (Farmer) ಕಣ್ಣೀರು ತರಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರದ ರೈತನೊಬ್ಬನಿಗೆ ಆತ ಬೆಳೆದ 1.1 ಟನ್ ಈರುಳ್ಳಿ ಮಾರಾಟ ಮಾಡಿದ ಬಳಿಕ ಎಲ್ಲಾ ಖರ್ಚು-ವೆಚ್ಚ ಕಳೆದ ಕೇವಲ 13 ರು. ಉಳಿದಿದೆ. ಈ ಕುರಿತ ಲೆಕ್ಕಾಚಾರದ ಪಟ್ಟಿಯನ್ನು ಮಾಜಿ ಸಂಸದ ರಾಜು ಶೆಟ್ಟಿ ಟ್ವೀಟರ್‌ನಲ್ಲಿ ಹಾಕಿದ್ದು ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಸೊಲ್ಲಾಪುರದ (Sollapur) ಬಾಪು ಕವಾಡೆ 1123 ಕೆಜಿ ಈರುಳ್ಳಿ ಬೆಳೆದು ಅದನ್ನು ಮಾರಾಟಕ್ಕೆ ಕಳುಹಿಸಿದ್ದರು. ಅಲ್ಲಿ ಕೆಜಿಗೆ 1 ರು.ನಂತೆ ಈರುಳ್ಳಿ ಮಾರಾಟ ಮಾಡಿ, ದಲ್ಲಾಳಿ ಇವರಿಗೆ 1665 ರು. ನೀಡಿದ್ದಾನೆ. ಈರುಳ್ಳಿ ಬೆಳೆಯಲು ಮಾಡಿದ ಕಾರ್ಮಿಕರ ವೆಚ್ಚ, ಮಾರುಕಟ್ಟೆಗೆ ಈರುಳ್ಳಿ ಸಾಗಣೆ ವೆಚ್ಚ, ಕಮೀಷನ್ ಎಲ್ಲಾ ಸೇರಿ ಕವಾಡೆಗೆ 1651 ರು. ವೆಚ್ಚವಾಗಿತ್ತು. ಅಂದರೆ ಅವರಿಗೆ ಉಳಿದಿದ್ದು ಕೇವಲ 13 ರುಪಾಯಿ ಮಾತ್ರ.
undefined
या १३ रूपयामधून सरकारचे १३ वा घालावे का ?
सोलापूर कृषी उत्पन्न बाजार समितीत काल बापू कावडे या शेतकर्यांने २४ पोते कांदे रूद्रेश पाटील या व्यापा-याला विक्री केले. जवळपास ११२३ किलो कांदे विकून pic.twitter.com/ZergTblfF0
ಈರುಳ್ಳಿ ಗುಣಮಟ್ಟ ಚೆನ್ನಾಗಿರಲಿಲ್ಲ : ದಳ್ಳಾಳಿ!
ದಳ್ಳಾಳಿ (Agent) ಅತಿ ಕಡಿಮೆ ಬೆಲೆ ನೀಡಿದ್ದನ್ನು ನಂಬಲಾಗುತ್ತಿಲ್ಲ ಎಂದು ರೈತ ಕಣ್ಣೀರು ಹಾಕಿದ್ದಾರೆ. ಆದರೆ ಈರುಳ್ಳಿ ಗುಣಮಟ್ಟ ಚೆನ್ನಾಗಿರದ ಕಾರಣ ಅತಿ ಕಡಿಮೆ ಬೆಲೆಗೆ ಮಾರಾಟವಾಗಿದೆ ಎಂದು ದಳ್ಳಾಳಿ ಹೇಳಿದ್ದಾನೆ. ಶುಕ್ರವಾರ ಸೊಲ್ಲಾಪುರ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆಜಿಗೆ 30 ರು.ನಂತೆ ಮತ್ತು ಕಡಿಮೆ ಗುಣಮಟ್ಟದ ಈರುಳ್ಳಿ ಕೆಜಿಗೆ 1 ರು.ನಂತೆ ಮಾರಾಟವಾಗಿದೆ.
Support Price For Paddy : ರೈತರಿಗೆಗುಡ್ ನ್ಯೂಸ್ : ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ
"ಉತ್ಪನ್ನದ ಕಳಪೆ ಗುಣಮಟ್ಟದಿಂದಾಗಿ ನಾನು ಈರುಳ್ಳಿಯನ್ನು ಇಷ್ಟು ಕಡಿಮೆ ದರದಲ್ಲಿ ಖರೀದಿಸಿದೆ. ಕಳೆದ ಕೆಲವು ದಿನಗಳಲ್ಲಿ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ತೇವದಿಂದ ಹಾನಿಯಾಗಿದೆ. ಅದಕ್ಕಾಗಿಯೇ ಅದು ಕಡಿಮೆ ದರದಲ್ಲಿ ಮಾರಾಟವಾಗಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆಯುತ್ತಿದೆ ಆದರೆ ಕವಡೆ ವಿಷಯದಲ್ಲಿ ನಡೆದಿದ್ದು "ದುರದೃಷ್ಟಕರ ಮತ್ತು ಅಸಾಧಾರಣ" ಎಂದು ರೈತ ಕವಡೆಯಿಂದ ಈರುಳ್ಳಿ ಖರೀದಿಸಿದ ದಳ್ಳಾಳಿ ರುದ್ರೇಶ ಪಾಟೀಲ ಹೇಳಿದ್ದಾರೆ.
ನಿರಂತರ ಮಳೆಗೆ ಕೊಳೆತ ಈರುಳ್ಳಿ: ಕಂಗಾಲಾದ ಅನ್ನದಾತ..!
ಕಳೆದೊಂದು ವಾರದಿಂದ ನಿರಂತರ ಸುರಿದ ಮಳೆಗೆ ತೇವಾಂಶ ಹೆಚ್ಚಳವಾಗಿ ಹೊಲದಲ್ಲಿಯೇ ಕೊಳೆತ ಈರುಳ್ಳಿ(Onion) ಎದುರು ರೋಣ(Ron) ತಾಲೂಕಿನ ರೈತರು(Farmers) ಕಣ್ಣೀರು ಸುರಿಸುತ್ತಿದ್ದಾರೆ. ಬೀಜ, ಗೊಬ್ಬರ, ಬಿತ್ತನೆ, ಔಷಧಿ, ಕೂಲಿ ಸೇರಿ ಎಕರೆಗೆ 30 ಸಾವಿರಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ದಿನಕ್ಕೆ ಒಬ್ಬರಿಗೆ 200 ರಿಂದ 250 ಕೂಲಿ ನೀಡಿ ಈರುಳ್ಳಿ ಕಿತ್ತು ಹೊಲದಲ್ಲಿ ಹರವಿದ್ದಾರೆ. ಇದನ್ನು ಕಟಾವು ಮಾಡಿ ಮಾರುಕಟ್ಟೆಗೆ(Market) ಕಳುಹಿಸಬೇಕು ಎನ್ನುವುದರಲ್ಲಿ ವರುಣಾಘಾತವಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಕಿತ್ತು ಹರವಿದ್ದ, ರಾಶಿ ಹಾಕಿದ್ದ ಹಾಗೂ ಭೂಮಿಯಲ್ಲಿ ಉಳಿದುಕೊಂಡಿರುವ ಈರುಳ್ಳಿ ಕೊಳೆಯಲು ಆರಂಭಿಸಿದೆ.
Cement Price Increase: ಕಚ್ಚಾವಸ್ತುಗಳ ದರ ಏರಿಕೆ : ಸಿಮೆಂಟ್ ಬೆಲೆ ಹೆಚ್ಚಳ!
ಸಾವಿರಾರು ಹೆಕ್ಟೇರ್ ಹಾನಿ:
ತಾಲೂಕಿನಲ್ಲಿ 12 ಸಾವಿರ ಹೆಕ್ಟೇರ್‌ಕ್ಕೂ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ(Sowing) ಮಾಡಲಾಗಿದೆ. ಕಳೆದೊಂದು ತಿಂಗಳಿಂದ ಆಗಾಗೆ ಮತ್ತು ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಅಂದಾಜು 8 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ(Crop Damage). ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹೊಂದಿದ್ದ ಈರುಳ್ಳಿ ಸತತ ಸುರಿದ ಮಳೆಯಿಂದಾಗಿ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಒಂದೆಡೆ ಬೆಲೆ ಇಳಿಕೆ ಪೆಟ್ಟು, ಮತ್ತೊಂದಡೆ ಕೈಗೆ ಬಂದ್ ಫಸಲು ಬಾಯಿಗೆ ಬರದಂತಾಗಿದ್ದು ರೈತ ಸಮೂಹವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ