
ಕಾಠ್ಮಂಡು: ರಾಮಜನ್ಮಭೂಮಿ ಹಾಗೂ ಸೀತೆ ಜನಿಸಿದ ಸ್ಥಳವನ್ನು ಸಂಪರ್ಕಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪಿಎಂ ಬಾಲೇಂದ್ರ ಶಾ ಅವರು ಸೋಮವಾರ ಚಾಲನೆ ನೀಡಿದ್ದ ‘ಸರಯೂ-ಕಮಲಾ ರೈಲು’ ಮಂಗಳವಾರ ನೇಪಾಳದ ಜನಕಪುರವನ್ನು ತಲುಪಿದೆ. ಇದು ಉತ್ತರಪ್ರದೇಶದ ಅಯೋಧ್ಯೆಯಿಂದ 400 ಜನ ಯಾತ್ರಿಗಳನ್ನು ಹೊತ್ತು ಹೊರಟಿತ್ತು.
ಜನಕಪುರಧಾಮ ರೈಲು ನಿಲ್ದಾಣದಲ್ಲಿ ಯಾತ್ರಾರ್ಥಿಗಳನ್ನು ನೇಪಾಳದ ಸಚಿವ ಹಾಗೂ ಪ್ರಾಂತ್ಯವೊಂದರ ಸಿಎಂ ಸ್ವಾಗತಿಸಿದರು. ಭಾರತೀಯ ರೈಲ್ವೆಯ ಪ್ರತಿನಿಧಿಗಳು ಮತ್ತು ಪ್ರಯಾಣಿಕರಿಗೆ ಸಾಂಪ್ರದಾಯಿಕ ಶಾಲು ಹಾಗೂ ಹೂಮಾಲೆ ನೀಡಿ ಸ್ವಾಗತಿಸಲಾಯಿತು. ಪ್ರಯಾಣದ ವೇಳೆ ರೈಲಿನಲ್ಲಿದ್ದವರಿಗೆ ಇಸ್ಕಾನ್ ವತಿಯಿಂದ ಸಾತ್ವಿಕ ಭೋಜನ ವಿತರಿಸಲಾಗಿದ್ದು ವಿಶೇಷ.
ಉತ್ತರಪ್ರದೇಶ ಹಾಗೂ ಬಿಹಾರದ ಹಲವು ನಗರಗಳನ್ನು ಹಾದು 19 ಗಂಟೆಯಲ್ಲಿ 604 ಕಿ.ಮೀ. ಸಾಗುವ ಈ ರೈಲಿನ ನಿಯಮಿತ ವಾಣಿಜ್ಯ ಸೇವೆ ಇದೇ ಶನಿವಾರದಿಂದ ಆರಂಭವಾಗಲಿದೆ.
ರೈಲು ಸಂಚಾರದ ವಿವರ:
ಅಯೋಧ್ಯೆ ಕ್ಯಾಂಟ್ ಮತ್ತು ಜನಕಪುರ ಧಾಮದ ನಡುವಿನ 604 ಕಿ.ಮೀ. ದೂರವನ್ನು ಈ ರೈಲು 19 ಗಂಟೆಗಳಲ್ಲಿ ಕ್ರಮಿಸಲಿದೆ. ಪ್ರತಿ ಸೋಮವಾರ ಸಂಜೆ 5.50ಕ್ಕೆ ಅಯೋಧ್ಯೆ ಕ್ಯಾಂಟ್‌ನಿಂದ ಹೊರಟು ಮಂಗಳವಾರ ಮಧ್ಯಾಹ್ನ 12.40ಕ್ಕೆ (ನೇಪಾಳ ಕಾಲಮಾನ) ಜನಕಪುರ ಧಾಮ ತಲುಪಲಿದೆ. ಮಾರ್ಗಮಧ್ಯೆ ಮಂಕಾಪುರ, ಬಸ್ತಿ, ಗೋರಖ್‌ಪುರ, ನರ್ಕಟಿಯಾಗಂಜ್, ರಕ್ಸಾಲ್, ಸೀತಾಮಢಿ, ಶಿಶೋ, ಮಧುಬನಿ ಮತ್ತು ಜಯನಗರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಮರುಪ್ರಯಾಣದಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 1.10ಕ್ಕೆ ಜನಕಪುರ ಧಾಮದಿಂದ ಹೊರಟು, ಭಾನುವಾರ ಬೆಳಿಗ್ಗೆ 8.10ಕ್ಕೆ ಅಯೋಧ್ಯೆ ಕ್ಯಾಂಟ್ ತಲುಪಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ