
ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಅಚ್ಚರಿಯ ವಿಚಾರ ಒಂದನ್ನು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಶಾಲಾ ದಿನಗಳಲ್ಲಿ ಒಬ್ಬ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದಾಗಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜೊತೆಗೆ ರೌಂಡ್ ಟೇಬಲ್ ಚರ್ಚೆಯಲ್ಲಿ ಮಾತನ್ನಾಡುವ ವೇಳೆ ಅಪರೂಪದ ಸನ್ನಿವೇಶ ವಿವರಿಸಿದ್ದಾರೆ. ಇದನ್ನು ಕಾಂಗ್ರೆಸ್ ತನ್ನ ಸೋಶಿಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.
ತುರ್ತು ಪರಿಸ್ಥಿತಿಯ ನಂತರ, ಅವರ ಅಜ್ಜಿ (ಇಂದಿರಾ ಗಾಂಧಿ) 1977ರ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ಆಗ ಪ್ರಿಯಾಂಕಾ ಗಾಂಧಿ ಓದುತ್ತಿದದ ಸ್ಕೂಲ್‌ನಲ್ಲಿ ಒಬ್ಬ ಹುಡುಗ ತಮ್ಮ ಚಿಕ್ಕಪ್ಪ (ಸಂಜಯ್ ಗಾಂಧಿ) ಅವರನ್ನು ಕಳ್ಳ ಎಂದು ಕರೆದಿದ್ದನಂತೆ. ಅದಕ್ಕೆ ಕೋಪಿಸಿಕೊಂಡಿದ್ದ ಪ್ರಿಯಾಂಕಾ ಗಾಂಧಿ ಆತನಿಗೆ ಕಪಾಳಮೋಕ್ಷ ಮಾಡಿರೋದಾಗಿ ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿ ನಂತರ ಅಜ್ಜಿ ಚುನಾವಣೆಯಲ್ಲಿ ಸೋತರು. ಆಗ ನಾವು ಬೇರೆ ಮನೆಗೆ ಸ್ಥಳಾಂತರಗೊಂಡೆವು. ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಆ ಸಮಯದಲ್ಲಿ ಸಾಕಷ್ಟು ಉದ್ವಿಗ್ನತೆ ಇತ್ತು. ಶಾಲೆಯಲ್ಲಿ ಒಬ್ಬ ಹುಡುಗ ತನ್ನ ಬಳಿಗೆ ಬಂದು ನಿಮ್ಮ ಚಿಕ್ಕಪ್ಪ (ಸಂಜಯ್ ಗಾಂಧಿ) ಜೈಲಿನಲ್ಲಿದ್ದಾರೆ. ನಿಮ್ಮ ಚಿಕ್ಕಪ್ಪ ಕಳ್ಳ ಎನ್ನುತ್ತಾನೆ. ಅದಕ್ಕೆ ನನಗೆ ಕೋಪ ಬಂತು. ನಾನು ಅವನಿಗೆ ಕಪಾಳಮೋಕ್ಷ ಮಾಡಿದ್ದೆ. ಅವನು ಅಳಲು ಪ್ರಾರಂಭಿಸಿದ. ಅಲ್ಲದೇ ಟೀಚರ್‍ಗೆ ಕಂಪ್ಲೆಂಟ್ ಮಾಡಿದ. ಆಗ ನನಗೆ ಟೀಚರ್ ಗದರಿದ್ದರು ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ತುರ್ತು ಪರಿಸ್ಥಿತಿಯ ನಂತರ ಶಾಲೆಯಲ್ಲಿ ಕಳೆದ ತಮ್ಮ ಆರಂಭಿಕ ದಿನಗಳ ನೆನಪುಗಳನ್ನು ಹಂಚಿಕೊಂಡರು. ಶಾಲೆಯಲ್ಲಿ ತಾವು ಮತ್ತು ತಮ್ಮ ಸಹೋದರಿ ಒಬ್ಬರಿಗಿಂತ ಒಬ್ಬರು ಸಂಪೂರ್ಣವಾಗಿ ಭಿನ್ನರಾಗಿದ್ದೆವು ಎಂದು ರಾಹುಲ್ ಗಾಂಧಿ ಹೇಳಿದರು. ಪ್ರಿಯಾಂಕಾ ಅವರನ್ನು ನಿಯಮಗಳನ್ನು ಪಾಲಿಸುವವರು ಮತ್ತು ವಿನಮ್ರರು ಎಂದು ಬಣ್ಣಿಸಿದರೆ, ತಮ್ಮನ್ನು ತಾವು ಪ್ರಶ್ನೆಗಳನ್ನು ಕೇಳುವ ಹಾಗೂ ಬೇರೆಯವರಿಗೆ ತೊಂದರೆ ಕೊಡುವ ಬಂಡಾಯದ ಸ್ವಭಾವದವರೆಂದು ಹೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ.. ತಾವು ವ್ಯವಸ್ಥೆಗೆ ಹೊಂದಿಕೊಳ್ಳುವವರಾಗಿದ್ದರೆ, ರಾಹುಲ್ ಹಾಗಿರಲಿಲ್ಲ ಎಂದು ಹೇಳಿದರು. ಶಾಲಾ ದಿನಗಳಲ್ಲಿದ್ದ ಅದೇ ವ್ಯತ್ಯಾಸ ಇಂದು ಸಂಸತ್ತಿನಲ್ಲಿಯೂ ಇಬ್ಬರ ನಡುವೆ ಕಾಣಿಸುತ್ತದೆ ಎಂದು ತಮಾಷೆಯಾಗಿ ಹೇಳಿದರು.
ರಾಹುಲ್ ಗಾಂಧಿ ಕೂಡ ಆ ಕಾಲದ ನೆನಪನ್ನು ಹಂಚಿಕೊಳ್ಳುತ್ತಾ, ತುರ್ತು ಪರಿಸ್ಥಿತಿಯ ನಂತರ ಶಾಲೆಗೆ ಮರಳಿದಾಗ ಯಾರೂ ತಮ್ಮ ಪಕ್ಕದಲ್ಲಿ ಕೂರುತ್ತಿರಲಿಲ್ಲ. ತಮ್ಮ ಏಳನೇ ಹುಟ್ಟುಹಬ್ಬದಂದು ತಮ್ಮ ಸ್ನೇಹಿತರಲ್ಲಿ ಕೇವಲ ಒಬ್ಬರು ಮಾತ್ರ ಭೇಟಿಯಾಗಲು ಬಂದಿದ್ದರು. ನಾವಿಬ್ಬರು ಇಂದಿಗೂ ಸ್ನೇಹಿತರಾಗಿದ್ದೇವೆ ಎಂದಿದ್ದಾರೆ.
ಇತ್ತೀಚೆಗೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆ ಆಗಿದೆ. ಬೆನ್ನಲ್ಲೇ ಗಾಂಧಿ ಕುಟುಂಬದ ಮೂವರು ಸದಸ್ಯರು ತಮ್ಮ ಜೀವನದ ಸಂತೋಷ ಮತ್ತು ಕಷ್ಟದ ಕ್ಷಣಗಳನ್ನು ನೆನಪಿಸಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Priyanka exposes Rahul G completely. She laughs and questions when Rahul claims that he was also a prefect (class monitor) in the school.
''I was also a prefect.'' Priyanka interjects, ''When?''
Priyanka says, ''I was the disciplined and obedient like the way I am today in Parliament. You were more of a Rebelious''.
Rahul G, your personality doesn't give you an impression that you were Rebelious.
#Politics #SoniaBook #Congress #Gandhis
— Sunil Jha (@SunilBNJha) November 24, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ