ಸ್ವಾತಂತ್ರ್ಯಾ ನಂತರ ಅಧಿಕಾರದಲ್ಲಿದ್ದ ಸರ್ಕಾರಗಳು ಭಾರತದ ಧಾರ್ಮಿಕ ಸ್ಥಳಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ವಿಫಲರಾದರು ಮತ್ತು ರಾಜಕೀಯ ಕಾರಣಗಳಿಗಾಗಿ ತಮ್ಮದೇ ಸಂಸ್ಕೃತಿಯ ಬಗ್ಗೆ ನಾಚಿಕೆಪಡುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ
ಗುವಾಹಟಿ: ಸ್ವಾತಂತ್ರ್ಯಾ ನಂತರ ಅಧಿಕಾರದಲ್ಲಿದ್ದ ಸರ್ಕಾರಗಳು ಭಾರತದ ಧಾರ್ಮಿಕ ಸ್ಥಳಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ವಿಫಲರಾದರು ಮತ್ತು ರಾಜಕೀಯ ಕಾರಣಗಳಿಗಾಗಿ ತಮ್ಮದೇ ಸಂಸ್ಕೃತಿಯ ಬಗ್ಗೆ ನಾಚಿಕೆಪಡುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಈ ಮೂಲಕ ರಾಮಮಂದಿರ ವಿವಾದ ಬಗೆಹರಿಸಲು ವಿಫಲವಾದ ಆರೋಪ ಹೊತ್ತಿರುವ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂನಲ್ಲಿ 11,600 ಕೋಟಿ ರು.ಗಳ ವಿವಿಧ ಯೋಜನೆಗಳನ್ನು ಅನಾವರಣಗೊಳಿಸಿದ ನಂತರ ಗುವಾಹಟಿಯಲ್ಲಿ ಬೃಹತ್ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಯಾವುದೇ ದೇಶವು ತನ್ನ ಗತವನ್ನು ಅಳಿಸಿಹಾಕುವ ಮೂಲಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಂದ ನಂತರ ಪಾರಂಪರಿಕ ತಾಣಗಳ ಪುನರುತ್ಥಾನ ನಡೆಯಿತು. ಕಳೆದ 1 ವರ್ಷದಲ್ಲಿ ಕಾಶಿಗೆ 8.5 ಕೋಟಿ ಜನರು ಭೇಟಿ ನೀಡಿದ್ದಾರೆ. 5 ಕೋಟಿ ಜನ ಉಜ್ಜಯಿನಿ ಮಹಾಕಾಲನ ದರ್ಶನ ಪಡೆದಿದ್ದಾರೆ. 19 ಲಕ್ಷ ಜನ ಕೇದಾರಧಾಮಕ್ಕೆ ಹಾಗೂ ಕೇವಲ 12 ದಿನದಲ್ಲಿ 24 ಲಕ್ಷ ಜನ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪಾರಂಪರಿಕ ಕ್ಷೇತ್ರಗಳ ಪುನರುತ್ಥಾನದಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಕೂಡ ಆಗಿದೆ ಎಂದು ಹೇಳಿಕೊಂಡರು.
ಮೋದಿ ಮತ್ತೆ ಗೆದ್ದರೆ ಇನ್ಮುಂದೆ ದೇಶದಲ್ಲಿ ಎಲೆಕ್ಷನ್ ಇರಲ್ಲ; ಮೋದಿ ಜಯಿಸಿದರೆ ಸರ್ವಾಧಿಕಾರ ಶುರು: ಖರ್ಗೆ
ಇದೇ ವೇಳೆ, ‘ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ನಾವು ಅನಾವರಣಗೊಳಿಸಿದ ಯೋಜನೆಗಳು ಈಶಾನ್ಯ ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಇತರ ಭಾಗಗಳಲ್ಲಿ ಸಂಪರ್ಕವನ್ನು ಬಲಪಡಿಸುತ್ತದೆ. ಕಳೆದ 10 ವರ್ಷಗಳಲ್ಲಿ ಅಸ್ಸಾಂನಲ್ಲಿ ಶಾಂತಿ ನೆಲೆಸಿದೆ ಮತ್ತು 7,000 ಕ್ಕೂ ಹೆಚ್ಚು ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದಾರೆ. ಕಳೆದ ದಶಕದಲ್ಲಿ ಈ ಪ್ರದೇಶಕ್ಕೆ ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ’ ಎಂದು ಅವರು ಹೇಳಿದರು.
ವಿದ್ಯುತ್ ಬಿಲ್ ಶೂನ್ಯ ಮಾಡುವತ್ತ ಸರ್ಕಾರ ಗಮನ: ಮೋದಿ
ಗುವಾಹಟಿ: ಕೇಂದ್ರದ ಬಿಜೆಪಿ ಸರ್ಕಾರವು ದೇಶದ ಮನೆಗಳ ವಿದ್ಯುತ್ ಬಿಲ್ಅನ್ನು ಶೂನ್ಯ ಮಾಡುವತ್ತ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಸ್ಸಾಂನಲ್ಲಿ 11,600 ಕೋಟಿ ರು.ಗಳ ವಿವಿಧ ಯೋಜನೆಗಳನ್ನು ಅನಾವರಣಗೊಳಿಸಿದ ನಂತರ ಗುವಾಹಟಿಯಲ್ಲಿ ಬೃಹತ್ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಕಳೆದ 10 ವರ್ಷಗಳಲ್ಲಿ ಪ್ರತಿ ಮನೆಗೆ ವಿದ್ಯುತ್ ನೀಡುವ ಅಭಿಯಾನ ನಡೆಸಿದ್ದೇವೆ. ಈಗ ವಿದ್ಯುತ್ ಬಿಲ್ ಶೂನ್ಯ ಮಾಡುವತ್ತ ಸಾಗುತ್ತಿದ್ದೇವೆ. ಇತ್ತೀಚಿನ ಬಜೆಟ್‌ನಲ್ಲಿ ಸರ್ಕಾರ ಬೃಹತ್ ಮೇಲ್ಛಾವಣಿ ಸೋಲಾರ್ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಆರಂಭದಲ್ಲಿ, 1 ಕೋಟಿ ಕುಟುಂಬಗಳಿಗೆ ಮೇಲ್ಛಾವಣಿ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರ ಸಹಾಯ ಮಾಡಲಿದೆ’ ಎಂದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ ಜೊತೆ ಕೈಜೋಡಿಸಲು ಸಿದ್ಧ ಎಂದ ಜನಾರ್ದನರೆಡ್ಡಿ!
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಪ್ರತಿ ಫಲಾನುಭವಿಯನ್ನು ತಲುಪಲು ಬದ್ಧವಾಗಿದೆ. ಪ್ರತಿ ನಾಗರಿಕನ ಜೀವನ ಆರಾಮದಾಯಕವಾಗಿಸುವುದು ನಮ್ಮ ಗುರಿ. ಈ ಗಮನವು ನಮ್ಮ ಬಜೆಟ್‌ನಲ್ಲಿ ಸ್ಪಷ್ಟವಾಗಿದೆ. ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ 11 ಲಕ್ಷ ಕೋಟಿ ರು.ಗಳನ್ನು ಖರ್ಚು ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.