'ಅವ್ರು ಮಗಳ ಬ್ರೈನ್​ವಾಷ್​ ಮಾಡಿದ್ರು, ನೀವು ಜೀವದಾನ ಕೊಟ್ರಿ': ಪ್ರಧಾನಿಯನ್ನು ನಿಂದಿಸಿದ್ದ ಬಾಲಕಿ ಅಮ್ಮನಿಂದ ಸಂದೇಶ

Published : Aug 02, 2026, 01:47 PM IST
PM Narendra Modi

ಸಾರಾಂಶ

ಸೋಷಿಯಲ್ ಮೀಡಿಯಾದಿಂದ ಪ್ರಭಾವಿತಳಾಗಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿದ್ದ 15 ವರ್ಷದ ಬಾಲಕಿಯ ಮೇಲೆ ಎಫ್‌ಐಆರ್ ದಾಖಲಾಗಿತ್ತು. ನಂತರ ತನ್ನ ತಪ್ಪು ಅರಿತು ಕ್ಷಮೆ ಕೋರಿದ ಬಳಿಕ, ಪ್ರಕರಣವನ್ನು ಹಿಂಪಡೆಯಲಾಗಿದೆ. ಮಗಳ ತಪ್ಪನ್ನು ಕ್ಷಮಿಸಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಸಲ್ಲಿಸಿರುವ ತಾಯಿ, 20 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾ ನಿಷೇಧಿಸುವಂತೆ ಮನವಿ ಮಾಡಿದ್ದಾರೆ.

ಚಿಕ್ಕಮಕ್ಕಳ ಮನಸ್ಸು ಕೆಟ್ಟದ್ದಕ್ಕೆ ಬೇಗ ಪ್ರಭಾವಿತವಾಗಿಬಿಡುತ್ತದೆ. ಅದರಲ್ಲಿಯೂ ಭಾರತವನ್ನು ಹಾಳು ಮಾಡಲು ವಿದೇಶಗಳಿಂದ ಫಂಡಿಂಗ್​ ಮಾಡುವವರ ಬೆಂಬಲಕ್ಕೆ ನಿಂತಿರುವ ದೇಶದ್ರೋಹಿಗಳು ಭಾರತದಲ್ಲಿ ಹೇರಳವಾಗಿದ್ದಾರೆ. ಹೊರಗಿನ ಶತ್ರುಗಳನ್ನು ನಿಯಂತ್ರಿಸಬಹುದು, ಆದರೆ ಒಳಗಿನವರನ್ನು, ಇಲ್ಲಿಯದ್ದೇ ಅನ್ನ ತಿಂದು, ಇಲ್ಲಿಯದ್ದೇ ಸೌಲಭ್ಯ ಪಡೆದು, ದೇಶದ್ರೋಹ ಮಾಡುತ್ತಿರುವವರನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಅದೇ ಒಂದು ಗುಂಪು ಇದೀಗ ಭಾರಿ ಆ್ಯಕ್ಟೀವ್​ ಆಗಿದ್ದು, ಯುವಜನರನ್ನು, ಮಕ್ಕಳನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದು, ಇವರ ಹಿಂದಿನ ಪಿತೂರಿಯ ಬಗ್ಗೆ ಅರಿಯದ ಯುವಕ, ಯುವತಿಯರು ಬ್ರೇನ್​ವಾಷ್​ ಆಗುತ್ತಿದ್ದಾರೆ. ಇದೀಗ ಅಂಥದ್ದೇ ಬ್ರೇನ್​ವಾಷ್​ಗೆ ಒಳಗಾದವಳು 15 ವರ್ಷದ ಬಾಲಕಿ.

ಸೋಷಿಯಲ್​ ಮೀಡಿಯಾದಲ್ಲಿ ರಾತ್ರೋರಾತ್ರಿ ಸ್ಟಾರ್​ ಆಗಬೇಕು ಎಂದರೆ, ಪ್ರಧಾನಿ ಮೋದಿ ಅವರನ್ನು ಬಯ್ಯಬೇಕು ಎನ್ನುವುದಾಗಿ ಇವಳು ಹಲವು ವಿಡಿಯೋ ನೋಡಿ ಅಂದುಕೊಂಡಿರಬೇಕು. ತಾನೇ ಒಂದೇ ಬಾರಿಗೆ ಫೇಮಸ್​ ಆಗುವ ಆಸೆಯಿಂದ ತಾನೇನು ಹೇಳುತ್ತಿದ್ದೇನೆ ಎನ್ನುವ ಅರಿವು ಇಲ್ಲದೇ, ಪ್ರಧಾನಿ ವಿರುದ್ಧ ತನ್ನ ವಯಸ್ಸಿಗೂ ಮೀರಿದ ಭಾಷೆಗಳ ಪದಪ್ರಯೋಗ ಮಾಡಿದ್ದಳು. ಇದರಿಂದ ಅವಳ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಕೈಯಲ್ಲಿ ಸ್ಮಾರ್ಟ್​ಫೋನ್​ ಬಳಕೆ ಮಾಡುತ್ತಿದ್ದ ಮಕ್ಕಳ ಮೇಲೆ ನಿಗಾ ಇಡುವುದು ಕೂಡ ಅಪ್ಪ-ಅಮ್ಮಂದಿರಿಗೆ ಇಂದು ಸವಾಲಿನ ಸಂಗತಿಯೇ ಆಗಿದೆ. ಕೊನೆಗೆ ಬಾಲಕಿಗೆ ತಾನು ಮಾಡಿರುವುದು ತಪ್ಪಲ್ಲ, ಬದಲಿಗೆ ಅಪರಾಧ ಎಂದು ತಿಳಿದು, ಕ್ಷಮೆ ಕೋರಿದ್ದಳು. ಕೆಟ್ಟವರ ಪ್ರಭಾವಕ್ಕೆ ಒಳಗಾದೆ ಕ್ಷಮಿಸಿ ಎಂದಿದ್ದಳು. ಕೊನೆಗೆ ಎಫ್​ಐಆರ್​ ಹಿಂದಕ್ಕೆ ಪಡೆಯಲಾಗಿತ್ತು.

ಬಾಲಕಿಯ ಅಮ್ಮನಿಂದ ಧನ್ಯವಾದ ಸಲ್ಲಿಕೆ

ಇದೀಗ, ಬಾಲಕಿಯ ತಾಯಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.ನನ್ನ ಮಗಳಿಗೆ ಜೀವದಾನ ಮಾಡಿದ್ರಿ. ನಿಮಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. 'ಅವರ' ಪ್ರಭಾವಕ್ಕೆ ಮಗಳು ಒಳಗಾದಳು. ಅಂಥವರು ನನ್ನ ಮಗಳಂಥ ಚಿಕ್ಕ ಮಕ್ಕಳನ್ನು ತಮ್ಮ ಸೇಡು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು, ಚಿಕ್ಕ ಮಕ್ಕಳನ್ನು ಬಳಿಸಿಕೊಂಡು ಪ್ರತಿಭಟನೆ ಮಾಡುವವರು ಹೆಚ್ಚಾಗುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಿ ಪ್ಲೀಸ್​ ಎಂದು ಅಮ್ಮ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು 20 ವರ್ಷ ವಯಸ್ಸಿನ ಒಳಗಿರುವ ಮಕ್ಕಳಿಗೆ ಸೋಷಿಯಲ್​ ಮೀಡಿಯಾ ಬ್ಯಾನ್​ ಮಾಡಿ ಎಂದೂ ಅವರು ಕೇಳಿಕೊಂಡಿದ್ದಾರೆ.

ದುಷ್ಟ ಶಕ್ತಿಗಳಿಗೆ ಕಡಿವಾಣ ಬೀಳಲಿ

ಇಂದು ನನಗೆ ಮಗಳ ಹುಟ್ಟುಹಬ್ಬ. ನೀವು ಅವಳನ್ನು ಕ್ಷಮಿಸಿ ಹುಟ್ಟುಹಬ್ಬದ ಗಿಫ್ಟ್​ ಕೊಟ್ಟಿರಿ. ನಿಮ್ಮ ಋಣವನ್ನು ಎಂದಿಗೂ ಮರೆಯಲ್ಲ. ಇಂಥ ಮಕ್ಕಳ ವಿರುದ್ಧ ವಿಷಬೀಜ ಬಿತ್ತುವವರ ಬಗ್ಗೆ ಗಮನ ಹರಿಸಬೇಕಿದೆ. ಮಕ್ಕಳಿಗೆ ಏನೂ ಅರ್ಥ ಆಗುವುದಿಲ್ಲ. ಆದರೆ ವಿಷ ಬೀಜ ಬಿತ್ತುವವರಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಅಂಥವರು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವೆಲ್ಲವುಗಳ ಹೊರತಾಗಿಯೂ ನನ್ನಮಗಳಿಗೆ ಕ್ಷಮಾದಾನ ಕೊಟ್ಟು, ಜೀವದಾನ ಕೊಟ್ಟಿರುವಿರಿ ಎಂದು ಅಮ್ಮ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಜೆಪಿ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಭಯ ಹುಟ್ಟಿಸಲು ಸಂಚು! ಪೊಲೀಸ್ ಸಮವಸ್ತ್ರದಲ್ಲಿ ದಾಳಿಗೆ ಪ್ಲಾನ್, ಉಗ್ರನ ಗೆಳತಿ ಅರೆಸ್ಟ್!
'ದೃಶ್ಯಂ' ಚಿತ್ರದ ಮಾದರಿಯಲ್ಲೇ ಪತ್ನಿಯಿಂದ ಮರ್ಡರ್​: ಗಂಡ ಫಾರಿನ್​ನಲ್ಲಿ, ಅವನ ಹೆಣ ಮನೆಯ ಬಾತ್​ರೂಮ್​ನಲ್ಲಿ