ಮೀನುಗಾರಿಕೆಗಾಗಿ ಸಮುದದಲ್ಲಿ ಹೋದ ಮೀನುಗಾರರ ಬಲೆಯಲ್ಲಿ ಅಪರೂಪದ ಸಮುದ್ರ ಹಾವೊಂದು ಸೆರೆ ಆಗಿದೆ. ವಿಶಾಖಪಟ್ಟಣಂನ ಸಾಗರನಗರ ಬೀಚ್‌ನಲ್ಲಿ ಈ ಘಟನೆ ನಡೆದಿದ್ದು, ಬಲೆಗೆ ಸಿಕ್ಕ ಈ ಅಪರೂಪದ ಹಾವನ್ನು ಮೀನುಗಾರರು ಮರಳಿ ಸಾಗರಕ್ಕೆ ಬಿಟ್ಟಿದ್ದಾರೆ.
ಆಂಧ್ರಪ್ರದೇಶ: ಮೀನುಗಾರಿಕೆಗಾಗಿ ಸಮುದದಲ್ಲಿ ಹೋದ ಮೀನುಗಾರರ ಬಲೆಯಲ್ಲಿ ಅಪರೂಪದ ಸಮುದ್ರ ಹಾವೊಂದು ಸೆರೆ ಆಗಿದೆ. ವಿಶಾಖಪಟ್ಟಣಂನ ಸಾಗರನಗರ ಬೀಚ್‌ನಲ್ಲಿ ಈ ಘಟನೆ ನಡೆದಿದ್ದು, ಬಲೆಗೆ ಸಿಕ್ಕ ಈ ಅಪರೂಪದ ಹಾವನ್ನು ಮೀನುಗಾರರು ಮರಳಿ ಸಾಗರಕ್ಕೆ ಬಿಟ್ಟಿದ್ದಾರೆ. ಹೈಡ್ರೋಫಿಶ್ ಎಂದು ಕರೆಯಲ್ಪಡುವ ಈ ಸಮುದ್ರ ಹಾವು, ಆಳ ಸಮುದ್ರದಲ್ಲಿ ವಾಸ ಮಾಡುತ್ತದೆ. ಇದನ್ನು ಅತ್ಯಂತ ವಿಷಕಾರಿ ಹಾವು ಎಂದು ನಂಬಲಾಗಿದ್ದು, ಇದರ ವೈಜ್ಞಾನಿಕ ಹೆಸರು ಹೈಡ್ರೋಫಿಸ್ ಬೆಲ್ಚೆರಿ.
ಈ ಹಾವು ಸಮುದ್ರದಲ್ಲಿರುವ ವೇಳೆ ಯಾರಿಗಾದರೂ ಕಚ್ಚಿದರೆ, ತೀರ ಸೇರುವ ಮುನ್ನವೇ ಅವರು ಪ್ರಾಣ ಬಿಡುತ್ತಾರೆ. ಅಷ್ಟೊಂದು ವಿಷಕಾರಿ ಹಾವು ಇದು ಎಂದು ಮೀನುಗಾರರು ಹೇಳಿದ್ದಾರೆ. ಸಮುದ್ರ ಹಾವುಗಳು ತುಂಬಾ ವಿಷಕಾರಿ ಪ್ರಬೇಧಗಳಾಗಿದ್ದು, ಭೂಮಿಯ ಮೇಲೆ ವಾಸ ಮಾಡುವ ಹಾವುಗಳಿಗೆ ಹೋಲಿಸಿದರೆ ಇವುಗಳ ವಿಷವೂ 100 ಪಟ್ಟು ಹೆಚ್ಚು ಅಪಾಯಕಾರಿ.
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ : ಗುಜರಾತ್‌ನಲ್ಲಿ ಸಿಡಿಲಿಗೆ ಒಂದೇ ದಿನ 20 ಮಂದಿ ಬಲಿ
ಮಂಗಳವಾರ ಸಂಜೆ, ಮೀನುಗಾರರ ಬಲೆಗೆ ಈ ಅಪರೂಪದ ಹಾವು ಸಿಕ್ಕಿ ಬಿದ್ದಿದೆ. ಇದು ತನ್ನ ಬೇಟೆಗಾಗಿ ಮೀನುಗಳ ಹಿಂಡಿಗೆ ನುಗ್ಗಿತ್ತು. ಆಗ ಮೀನುಗಾರಿಕಾ ಬಲೆಯೊಳಗೆ ಮೀನುಗಳ ಸಮೇತ ಈ ಹಾವು ಸಿಕ್ಕಿದೆ ಎಂದು ಮೀನುಗಾರರು ಹೇಳಿದ್ದು, ಸಮುದ್ರ ತೀರಕ್ಕೆ ಬಂದ ನಂತರ ಹಾವನ್ನು ಮತ್ತೆ ಸಮುದ್ರಕ್ಕೆ ಬಿಡಲಾಗಿದೆ.
ಸಮುದ್ರದಾಳದಲ್ಲಿ ವಾಸಿಸುವ ಈ ಹಾವು ಅತ್ಯಂತ ವಿಷಕಾರಿ, ಇದರ ವೈಜ್ಞಾನಿಕ ಹೆಸರು ಹೈಡೋಫಿಸ್ ಆಗಿದ್ದು, ಇದು ಮನುಷ್ಯರಿಗೆ ಕಚ್ಚಿದರೆ ಕೂಡಲೇ ಚಿಕಿತ್ಸೆ ಪಡೆಯಬೇಕು, ಇಲ್ಲದಿದ್ದರೆ ಕೆಲವೇ ಗಂಟೆಗಳಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾವನ್ನಪ್ಪುತ್ತಾರೆ ಎಂದು ಮೀನುಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಪಿ. ಶ್ರೀನಿವಾಸ್ ರಾವ್ ಹೇಳಿದ್ದಾರೆ. ಅವರ ಪ್ರಕಾರ ಈ ಹಾವುಗಳು ಸಣ್ಣ ಸಣ್ಣ ಜಾತಿಯ ಮೀನುಗಳನ್ನು ಹಾಗೂ ಈ ಸಮುದ್ರದಲ್ಲಿ ಬೆಳೆಯುವ ಕಳೆಗಳನ್ನು ತಿಂದು ಜೀವಿಸುತ್ತವೆ. ಆಹಾರದ ಹುಡುಕಾಟದಲ್ಲಿ ಅದು ಮೀನು ಹಿಡಿಯುವ ಬಲೆಯಲ್ಲಿ ಸಿಲುಕಿತು. ಸ್ಥಳೀಯ ಮೀನುಗಾರರು ಹಾವನ್ನು ಕಟ್ಲ ಪಾಮು ಎಂದು ಕರೆಯುತ್ತಾರೆ. ಮೀನುಗಾರರು ಸರೀಸೃಪಗಳ ಬಗ್ಗೆ ಜಾಗರೂಕರಾಗಿರುತ್ತಾರೆ ಎಂದು ರಾವ್ ಮಾಹಿತಿ ನೀಡಿದರು.
ಆಸ್ಟ್ರೇಲಿಯಾ ಸಮುದ್ರತೀರದಲ್ಲಿ ಕಾಣಿಸಿಕೊಂಡ ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ, ನಿಬ್ಬೆರಗಾದ ಪ್ರವಾಸಿಗರು