ತಮಿಳುನಾಡು(ಡಿ.29): ಇವರಾರು ಭಾರತೀಯರಲ್ಲ. ದೇಶಕ್ಕೆ ಬರಲು ಇವರ ಬಳಿ ವೀಸಾ ಪಾಸ್‌ಪೋರ್ಟ್‌ಗಳಿಲ್ಲ. ಹಾಗಂತ ಯಾರೂ ಇವರನ್ನು ಬಂಧಿಸಿಲ್ಲ. ಹೌದು ಎಲ್ಲಿಂದಲೋ ಹಾರಿ ಬಂದಿರುವ ಇವರು ಈಗ ತಮಿಳುನಾಡಿನ ಪಕ್ಷಿಧಾಮದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದು, ಈ ಪಕ್ಷಧಾಮಕ್ಕೆ ಬಂದ ಪ್ರವಾಸಿಗರು ಈ ವಿದೇಶಿಗರ ಸೌಂದರ್ಯ ನೋಡಿ ಅಲ್ಲೇ ಮೈ ಮರೆಯುತ್ತಿದ್ದಾರೆ..!
ಹೌದು ಸ್ವಚ್ಛಂದವಾಗಿ ಆಕಾಶದಲ್ಲಿ ಹಾರುವ ಹಕ್ಕಿಗೆ ಗಡಿಯ ಮಿತಿ ಎಲ್ಲಿ... ತಮಿಳುನಾಡಿನ (Tamil Nadu) ಕೊಡಿಯಾಕರೈ (Kodiakarai) ನಲ್ಲಿರುವ ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ (Calimere Wildlife)ಮತ್ತು ಪಕ್ಷಿಧಾಮ (Bird Sanctuary)ದಲ್ಲಿ ವಿದೇಶಿ ಹಕ್ಕಿಗಳು ಕಾಣಿಸಿಕೊಂಡಿವೆ. ಆಳವಿಲ್ಲದ ನೀರಿನಲ್ಲಿ ಅಲೆದಾಡುವ ಈ ಫ್ಲೆಮಿಂಗೋಗಳ ಹಿಂಡಿನ ಸುಂದರ ದೃಶ್ಯ ಈಗ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Point Calimere ( Kodiakarai ) Wildlife and Bird Sanctuary in Tamil Nadu is abuzz with thousands of migratory birds pic.twitter.com/LyOoHn1Elz
— Supriya Sahu IAS (@supriyasahuias)
undefined
ಈ ವೈರಲ್ ವೀಡಿಯೊದಲ್ಲಿ, ವಲಸೆ ಹಕ್ಕಿಗಳು ಒಂದರ ನಂತರ ಒಂದರಂತೆ ಸಾಲಿನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಸುಂದರವಾದ ಪರಿಸರದಲ್ಲಿ ಹೊಂದಿಸಿದಂತೆ ಕಾಣುವ ಈ ಪಕ್ಷಿಗಳ ಚಲನೆಯು ಒಂದು ದೃಶ್ಯ ಕಾವ್ಯದಂತೆ ಕಾಣಿಸುತ್ತಿದೆ. ವಿಡಿಯೋದಲ್ಲಿ ನೋಡಿದಂತೆ ಆ ಸ್ಥಳದಲ್ಲಿ ಗಾಳಿ ಬೀಸುತ್ತಿರುವಂತೆ ತೋರುತ್ತಿದ್ದು, ಇದು ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ತಮಿಳುನಾಡಿನ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ವಿಭಾಗದ ಪ್ರಧಾನ ಕಾರ್ಯದರ್ಶಿ (Principal Secretary) ಸುಪ್ರಿಯಾ ಸಾಹು(Supriya Sahu) ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ತಮಿಳುನಾಡಿನ ಪಾಯಿಂಟ್ ಕ್ಯಾಲಿಮೆರೆ (ಕೋಡಿಯಾಕರೈ) ವನ್ಯಜೀವಿ ಮತ್ತು ಪಕ್ಷಿಧಾಮವು ಸಾವಿರಾರು ವಲಸೆ ಹಕ್ಕಿಗಳಿಂದ ತುಂಬಿ ತುಳುಕುತ್ತಿದೆ #TNForest ಎಂದು ಐಎಎಸ್ ಅಧಿಕಾರಿ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
Spain: ಆಗಸದಿಂದ ಏಕಾಏಕಿ ಬಿದ್ದ 200 ಮೃತ ಪಕ್ಷಿಗಳು, ಈ ನಿಗೂಢ ಘಟನೆಗೆ ಕಾರಣ ಇದೇನಾ?
ಡಿಸೆಂಬರ್ 25 ರಂದು ಈ ವಿಡಿಯೋ ಶೇರ್ ಆಗಿದ್ದು, 8,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕೆಲವು ನೆಟ್ಟಿಗರು ಈ ವಿಡಿಯೋ ನೋಡಿ ವಾವ್ ಎಂದು ಉಲ್ಲೇಖಿಸುತ್ತಿದ್ದಾರೆ. ಹಾಗೆಯೇ ಅನೇಕರು ಇದು ಅದ್ಭುತವಾಗಿದೆ ಎಂದು ಹೇಳಿದ್ದಾರೆ. 'ಫ್ಲೆಮಿಂಗೋಸ್ ಪ್ರಕೃತಿಗೆ ಯಾವುದೇ ಗಡಿಗಳಿಲ್ಲ' ಎಂದು ಮತ್ತೂ ಕೆಲವರು ಕಾಮೆಂಟ್ ಮಾಡಿದ್ದಾರೆ.
Climate Change: ಪಕ್ಷಿಗಳಲ್ಲೂ ಡೈವೋರ್ಸ್: ಹೊಸ ಸಂಗಾತಿ ಹುಡುಕುತ್ತಿರುವ ಕಡಲು ಕೋಳಿಗಳು!
ಅಮೆರಿಕಾ ಖಂಡದಲ್ಲಿ ನಾಲ್ಕು ರೀತಿಯ ಫ್ಲೆಮಿಂಗೊ ಪಕ್ಷಿ ಜಾತಿಗಳು ಕಂಡುಬರುತ್ತವೆ ಮತ್ತು ಇದರ ಇನ್ನೆರಡು ಜಾತಿಯ ಪಕ್ಷಿಗಳು ಆಫ್ರಿಕಾ, ಏಷ್ಯಾ ಮತ್ತು ಯುರೋಪ್ ಮೂಲದ್ದಾಗಿವೆ. ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮಕ್ಕೆ ಆಗಮಿಸುವ ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ಈಗ ಇಳಿಮುಖವಾಗಿದೆ ಎಂದು ವರದಿಯಾಗಿದೆ. ಅಭಯಾರಣ್ಯದಲ್ಲಿರುವ ನೀರಿನಿಂದ ಆವೃತವಾದ ಪ್ರದೇಶಗಳು ಈ ವಲಸೆ ಹಕ್ಕಿಗಳ ಪ್ರಮುಖ ಆಕರ್ಷಣೆಯಾಗಿದೆ.
ಗುಬ್ಬಚ್ಚಿ ದಿನ
ಎಲ್ಲರಿಗೂ ಒಂದು ದಿನ ಇರೋ ಹಾಗೆ ಗುಬ್ಬಚ್ಚಿಗಳಿಗೂ ಒಂದು ದಿನವಿದೆ. ಮಾರ್ಚ್ 20ನ್ನು ವಿಶ್ವ ಗುಬ್ಬಚ್ಚಿ ದಿನವಾಗಿ ಆಚರಿಸಲಾಗುತ್ತದೆ. ಸುಮಧುರ ಸ್ವರ ಮಾಡುವ ಈ ಹಕ್ಕಿಗಳನ್ನು ಮನುಷ್ಯ ಸ್ನೇಹಿ ಎಂದೇ ಹೇಳಲಾಗುತ್ತದೆ. ಒಂದು ಸಮಯದಲ್ಲಿ ಈ ಗುಬ್ಬಚ್ಚಿಗಳು ಎಲ್ಲೆಲ್ಲೂ ಕಾಣಸಿಗುತ್ತಿದ್ದವು. ಅಂಗಡಿ, ಕಟ್ಟಡ, ಮನೆ, ವಠಾರ ಎಲ್ಲ ಕಡೆಗಳಲ್ಲಿಯೂ ಈ ಗುಬ್ಬಚ್ಚಿಗಳಿರುತ್ತಿದ್ದವು. ಆದರೆ ಈಗೀಗ ಈ ಪಕ್ಷಿಗಳನ್ನು ಕಾಣುವುದೇ ಅಪರೂಪ, ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಈ ಹಕ್ಕಿಗಳು ಮಾಯವಾಗಿವೆ. ಉಳಿದ ಹಕ್ಕಿಗಳ ಸಂತತಿ ನಶಿಸುವುದಕ್ಕಿಂತ ವೇಗವಾಗಿ ಈ ಹಕ್ಕಿಗಳ ಸಂತತಿ ನಶಿಸುತ್ತಾ ಬಂದಿದೆ. ಈ ಪುಟ್ಟ ಗುಬ್ಬಚ್ಚಿಗಳಿಗೆ ವಾಸಿಸೋ ಗೂಡಿಲ್ಲ, ಮೊಬೈಲ್ ಟವರ್ ರೇಡಿಯೇಷನ್ ಈ ಹಕ್ಕಿಯನ್ನು ಬದುಕಲು ಬಿಡುತ್ತಿಲ್ಲ.