ಸಂಪುಟ ಪುನಾರಚನೆ: ಮೋದಿ ಸಂಪುಟಕ್ಕೆ 43 ಸಚಿವರು, ಇಲ್ಲಿದೆ ಸಂಪೂರ್ಣ ಲಿಸ್ಟ್

By Suvarna NewsFirst Published Jul 7, 2021, 4:31 PM IST
Highlights
  • ಮೋದಿ ಸರ್ಕಾರದ 2ನೇ ಅವದಿಯ ಮೊದಲ ಸಂಪುಟ ಪುನಾರಚನೆ
  • ಪ್ರಧಾನಿ ಮೋದಿ ಪರಿಷ್ಕರಿಸಿದ ಪಟ್ಟಿ ಬಿಡುಗಡೆ
  • ಕೇಂದ್ರ ಸಂಪುಟದ 43 ನಾಯಕ ಪಟ್ಟಿ ಇಲ್ಲಿದೆ.

ನವದೆಹಲಿ(ಜು.07):  ಹಲವು ದಿನಗಳಿಂದ ತೆರ ಮೆರೆಯಲ್ಲಿ ನಡೆಯುತ್ತಿದ್ದ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಕಸರತ್ತಿಗೆ ತೆರೆ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಪರಿಷ್ಕರಿಸಿದ ಮಂತ್ರಿ ಮಂಡಳಿಯ 43 ಸದಸ್ಯರ ಪೂರ್ಣ ಪಟ್ಟಿ ಹೊರಬಿದ್ದಿದೆ. ಸರ್ಬಾನಂದ ಸೊನೊವಾಲ್,  ಜ್ಯೋತಿರಾಧಿತ್ಯ ಸಿಂಧಿಯಾ ಸೇರಿದಂತೆ 43 ನಾಯಕರು ಮೋದಿ ಸಂಪುಟ ಸೇರಿಕೊಂಡಿದ್ದಾರೆ. ಕರ್ನಾಟಕದ ನಾಲ್ವರು ನಾಯಕರು ಮೋದಿ ಸಂಪುಟ ಸೇರಿಕೊಳ್ಳುತ್ತಿದ್ದಾರೆ. ರಾಜೀವ್ ಚಂದ್ರಶೇಕರ್, ಶೋಬಾ ಕರಂದ್ಲಾಜೆ, ಭಗವಂತ್ ಖೂಬಾ ಹಾಗೂ ಎ ನಾರಾಯಣಸ್ವಾಮಿ ಮೋದಿ ಕ್ಯಾಬಿನೆಟ್ ಸೇರಿಕೊಳ್ಳುತ್ತಿದ್ದಾರೆ.

ಮೋದಿ ಹೊಸ ಟೀಂ ರೆಡಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಚಿವರಿವರು!

ಅಳೆದು ತೂಗಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳೆ ಸೇರಿಂತೆ ಎಲ್ಲಾ ವರ್ಗದ ನಾಯಕರಿಗೆ ನ್ಯಾಯ ಒದಗಿಸಲಾಗಿದೆ. ಮೋದಿ ಸಂಪುಟ ಸೇರಿಕೊಳ್ಳಲಿರುವ  43 ನಾಯಕರು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ಸಂಪುಟ ಸೇರಿಕೊಳ್ಳುತ್ತಿರುವ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ.

ಕೇಂದ್ರ ಸಂಪುಟ ಸೇರಿಕೊಂಡ  ನಾಯಕರ ಪಟ್ಟಿ

1. ಶ್ರೀ ನಾರಾಯಣ್ ತಾನು ರಾಣೆ
2. ಶ್ರೀ ಸರ್ಬಾನಂದ ಸೋನೋವಾಲ್
3. ಡಾ.ವಿರೇಂದ್ರ ಕುಮಾರ್
4. ಶ್ರೀ ಜ್ಯೋತಿರಾದಿತ್ಯ ಎಂ ಸಿಂಧಿಯಾ
5. ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್
6. ಶ್ರೀ ಅಶ್ವಿಯು ವೈಷ್ಣವ್
7. ಶ್ರೀ ಪಶುಪತಿ ಕುಮಾರ್ ಪರಾಸ್
8. ಶ್ರೀ ಕಿರನ್ ರಿಜಿಜು
9. ಶ್ರೀ ರಾಜ್ ಕುಮಾರ್ ಸಿಂಗ್
1 .ಶ್ರೀ ಹರ್ದೀಪ್ ಸಿಂಗ್ ಪುರಿ
11.ಶ್ರೀ ಮನ್ಸುಖ್ ಮಾಂಡವಿಯಾ
12.ಶ್ರೀ ಭೂಪೇಂದರ್ ಯಾದವ್
13.ಶ್ರೀ ಪುರುಶೋತ್ತಮ್ ರೂಪಾಲ
14.ಶ್ರೀ ಜಿ. ಕಿಶನ್ ರೆಡ್ಡಿ
15.ಶ್ರೀ ಅನುರಾಗ್ ಸಿಂಗ್ ಠಾಕೂರ್
16.ಶ್ರೀ ಪಂಕಜ್ ಚೌಧರಿ
17. ಶ್ರೀಮತಿ..ಅನುಪ್ರಿಯ ಸಿಂಗ್ ಪಟೇಲ್
18. ಡಾ.ಸತ್ಯಪಾಲ್ ಸಿಂಗ್ ಬಾಗೆಲ್
19.ಶ್ರೀ ರಾಜೀವ್ ಚಂದ್ರಶೇಖರ್
20. ಕುಮಾರಿ. ಶೋಭಾ ಕರಂದ್ಲಾಜೆ
21. ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ
22. ಶ್ರೀಮತಿ. ದರ್ಶನಾ ವಿಕ್ರಮ್ ಸರ್ದೋಶ್
23. ಶ್ರೀಮತಿ. ಮೀನಾಕ್ಷಿ ಲೇಖಿ
24. ಶ್ರೀಮತಿ. ಅನ್ನಪೂರ್ಣ ದೇವಿ
25.ಶ್ರೀ ಎ.ನಾರಾಯಣ ಸ್ವಾಮಿ
26.ಶ್ರೀ ಕೌಶಲ್ ಕಿಶೋರ್
27.ಶ್ರೀ ಅಜಯ್ ಭಟ್ಟ್
28.ಶ್ರೀ ಬಿ.ಎಲ್. ವರ್ಮಾ
29.ಶ್ರೀ ಅಜಯ್ ಕುಮಾರ್
30.ಶ್ರೀ ಚೌಹಾನ್‌ ದೇವಸಿನ್
31.ಶ್ರೀ ಭಗವಂತ್ ಖೂಬಾ
32.ಶ್ರೀ ಕಪಿಲ್ ಮೊರೇಶ್ವರ ಪಾಟೀಲ್
33.ಶ್ರೀ ಪ್ರತಿಮಾ ಭೂಮಿಕ್
34. ಡಾ. ಸುಭಾಸ್ ಸರ್ಕಾರ್
35. ಡಾ.ಭಗವತ್ ಕಿಶನ್ರಾವ್ ಕರಡ್
36.ಡಾ.ಆರ್. ರಾಜ್‌ಕುಮಾರ್ ರಂಜನ್ ಸಿಂಗ್
37.ಡಾ. ಭಾರತಿ ಪ್ರವೀಣ್ ಪವಾರ್
38.ಶ್ರೀ ಬಿಶ್ವೇಶ್ವರ್ ತುಡು
39.ಶ್ರೀ ಶಾಂತನು ಠಾಕೂರ್
40.ಡಾ. ಮಂಜಾಪರ ಮಹೇಂದ್ರಭಾಯಿ
41.ಶ್ರೀ ಜಾನ್ ಬರ್ಲಾ
42.ಡಾ. ಎಲ್‌. ಮುರುಗನ್
43.ಶ್ರೀ ನಿಸಿತ್ ಪ್ರಮಾಣಿಕ್

 

ಮೋದಿ ಸಂಪುಟ್ ಪುನರ್ ರಚನೆ ಹಿನ್ನಲೆಯಲ್ಲಿ ಘಟಾನುಘಟಿ ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್, ಕಾರ್ಮಿಕ ಸಚಿವ ಸಂತೋಶ್ ಗಂಗ್ವಾರ್, ಸಚಿವ ಬಬೂಲ್ ಸುಪ್ರಿಯೋ, ಸದಾನಂದ ಗೌಡ, ದೇಬಶ್ರಿ ಚೌಧರಿ, ಸಂಜಯ್ ಧೋತ್ರೆ, ರತನ್ ಲಾಲ್ ಕಟಾರಿಯಾ, ಅಶ್ವಿನಿ ಚೌಬೆ, ಪ್ರತಾಬ್ ಸಾರಂಗಿ, ರಾವ್ ಸಾಹೇಬ್ ಧನ್ವೆ ಪಾಟೀಲ್ ಸೇರಿದಂತೆ ಪ್ರಮುಖರು ರಾಜೀನಾಮೆ ನೀಡಿದ್ದಾರೆ.

 

ಇನ್ನು ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಹೀಗಾಗಿ ಗೆಹ್ಲೋಟ್ ನಿನ್ನೆ ರಾಜೀನಾಮೆ ನೀಡಿದ್ದರು. 

 

click me!