ರಾಹುಲ್‌ ಗಾಂಧಿ ಕ್ಷೇತ್ರ ವಯನಾಡ್‌ ಉಪಚುನಾವಣೆಗೆ ಆಯೋಗ ಸಿದ್ಧ​ತೆ

By Kannadaprabha NewsFirst Published Jun 8, 2023, 8:57 AM IST
Highlights

ಲೋಕಸಭೆಯಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅನರ್ಹಗೊಂಡ ಬಳಿಕ ಅವರು ಸಂಸದರಾಗಿದ್ದ ವಯನಾಡ್‌ ಕ್ಷೇತ್ರಕ್ಕೆ ಉಪಚುನಾವಣೆ ನಡೆಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಚಾಲನೆ ನೀಡಿದೆ.

ಕಲ್ಲಿ​ಕೋ​ಟೆ: ಲೋಕಸಭೆಯಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅನರ್ಹಗೊಂಡ ಬಳಿಕ ಅವರು ಸಂಸದರಾಗಿದ್ದ ವಯನಾಡ್‌ ಕ್ಷೇತ್ರಕ್ಕೆ ಉಪಚುನಾವಣೆ ನಡೆಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಚಾಲನೆ ನೀಡಿದೆ. ಮತಯಂತ್ರ ಪರಿಶೀಲನೆ, ಅಣಕು ಮತದಾನ, ಮತದಾರರ ಪಟ್ಟಿ ಪರಿಶೀಲನೆ ಸೇರಿದಂತೆ ವಿವಿಧ ಪ್ರಕ್ರಿಯೆ ಕುರಿತು ರಾಜಕೀಯ ಪಕ್ಷಗಳಿಗೆ ಚುನಾವಣಾಧಿಕಾರಿಗಳು ಪತ್ರ ರವಾನಿಸಿದ್ದಾರೆ. ಆದರೆ ಚುನಾವಣಾ ದಿನಾಂಕ, ನಾಮಪತ್ರ ಸಲ್ಲಿಕೆ (Nomination File) ದಿನಾಂಕ ಇನ್ನೂ ನಿಗದಿಯಾಗಿಲ್ಲ. ‘ಮೋದಿ ಉಪನಾಮ ಹೊಂದಿದವರು ಕಳ್ಳರು’ ಎಂದು ಟೀಕಿಸಿ ಮಾನನಷ್ಟ ಪ್ರಕರಣದಡಿ ರಾಹುಲ್‌ ಗಾಂಧಿ ಜೈಲು ಶಿಕ್ಷೆಗೊಳಗಾಗಿದ್ದು ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

2019ರಲ್ಲಿ ಕರ್ನಾಟಕದ (Karnataka) ಕೋಲಾರದಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ (Rahul Gandhi) ಮೋದಿ ಸರ್‌ನೇಮ್ ಹೊಂದಿರುವ ಎಲ್ಲರೂ ಕಳ್ಳರೇ ಏಕೆ ಇದ್ದಾರೆ ಎಂದು ಪ್ರಶ್ನಿಸಿದ್ದರು, ಇದರ ವಿರುದ್ಧ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಸೂರತ್‌ನ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಅವರ ಸಂಸದ ಸ್ಥಾನವೂ ಅನರ್ಹಗೊಂಡಿತ್ತು. ಇದಾದ ಬಳಿಕ ಅವರು  ತಮ್ಮ ಸರ್ಕಾರಿ ಬಂಗಲೆಯನ್ನು ಕೂಡ ತೊರೆದಿದ್ದರು. ಸುಮಾರು ಎರಡು ದಶಕಗಳಿಂದ ರಾಹುಲ್ ಗಾಂಧಿ ಇದೇ ಬಂಗಲೆಯಲ್ಲಿ ವಾಸಿಸುತ್ತಿದ್ದರು. ತನ್ನ ಕಚೇರಿಯನ್ನು ಬದಲಾಯಿಸಿದ ನಂತರ, ಅವರು ತಮ್ಮ ತಾಯಿ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಅವರ 10, ಜನಪಥ್ ನಿವಾಸದಲ್ಲಿ ವಾಸಿಸಲು ಪ್ರಾರಂಭಿಸಿದರು ಎಂದು ಮೂಲಗಳು ತಿಳಿಸಿವೆ.

ಅನರ್ಹತೆಯಿಂದ ಸೇವೆ ಸಲ್ಲಿಸುವ ಬೃಹತ್‌ ಅವಕಾಶ ಸಿಕ್ಕಿದೆ: ರಾಹುಲ್‌ ಗಾಂಧಿ

ಮಾರ್ಚ್ 23 ರಂದು ಸೂರತ್ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ (Criminal defamation suit)ರಾಹುಲ್‌ ಗಾಂಧಿ ಅವರನ್ನು ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿ, ಅವರನ್ನು ಅನರ್ಹಗೊಳಿಸಲು ಕಾರಣವಾಯಿತು. ಬಳಿಕ ಅವರು ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದರು. ಅದು ಶಿಕ್ಷೆಯನ್ನು ರದ್ದುಗೊಳಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿತು. ಈ ಮಧ್ಯೆ, ಅವರನ್ನು ಅನರ್ಹಗೊಳಿಸಿದ ಒಂದು ದಿನದ ನಂತರ, ಲೋಕಸಭೆ ಸೆಕ್ರೆಟರಿಯೇಟ್ ಏಪ್ರಿಲ್ 22 ರೊಳಗೆ ಜಾಗವನ್ನು ಖಾಲಿ ಮಾಡುವಂತೆ ರಾಹುಲ್‌ ಗಾಂಧಿಗೆ ನೋಟಿಸ್ ಕಳುಹಿಸಿತ್ತು.

ಕೊಲೆ ಯತ್ನ ಆರೋಪ ಹೊತ್ತಿದ್ದ ಲಕ್ಷದ್ವೀಪದ ಸಂಸದನ ಸದಸ್ಯತ್ವ ಮರುಸ್ಥಾಪನೆ

ಗುಜರಾತ್‌ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದಾಗಿರುವುದರ ಬೆನ್ನಲೇ ಈಗ ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್  ಅವರ ಲೋಕಸಭೆ ಸದಸ್ಯತ್ವ ಇಂದು ಮರು ಸ್ಥಾಪನೆಯಾಗಿದೆ.  ಇದರಿಂದ ಇತ್ತೀಚೆಗಷ್ಟೇ ಅನರ್ಹಗೊಂಡ ಸಂಸದ ರಾಹುಲ್ ಗಾಂಧಿಗೆ ಆನೆಬಲ ಬಂದಂತಾಗಿದ್ದು, ಈ ತೀರ್ಪನ್ನೇ ಉಲ್ಲೇಖವಾಗಿರಿಸಿ ರಾಹುಲ್  ಅವರ ಸಂಸತ್ ಸದಸ್ಯತ್ವವನ್ನು ಮರು ಸ್ಥಾಪಿಸಲು ಅವರ ಕಾನೂನು ತಂಡವೂ ಹೋರಾಟ ನಡೆಸುವ ಸಾಧ್ಯತೆ ಇದೆ.  ರಾಹುಲ್ ಗಾಂಧಿ ಅವರ ಅನರ್ಹತೆಯ ನಂತರ ತೆರವಾಗಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಉಪ ಚುನಾವಣೆಯ ದಿನಾಂಕಗಳನ್ನು ಘೋಷಿಸಿದರೆ ಕಾನೂನು ಹೋರಾಟಕ್ಕೆ ಸಿದ್ಧವಾಗಿರುವುದಾಗಿ ಈಗಾಗಲೇ  ಕಾಂಗ್ರೆಸ್ ಹೇಳಿದೆ.

ತುಘಲಕ್‌ ಲೇನ್‌ ಇನ್ಮುಂದೆ ರಾಹುಲ್‌ ಗಾಂಧಿ ವಿಳಾಸವಲ್ಲ, ಸರ್ಕಾರಿ ಬಂಗಲೆ ಖಾಲಿ ಮಾಡಿದ ಕಾಂಗ್ರೆಸ್‌ ನಾಯಕ!

ಇತ್ತ ಈಗ ಸಂಸತ್ ಸದಸ್ಯತ್ವದ ಅನರ್ಹತೆಯಿಂದ ಪಾರಾಗಿರುವ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್‌ಗೆ (Mohammed Faizal) ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಕೋರ್ಟ್‌ ಶಿಕ್ಷೆ ನೀಡಿದ ನಂತರ ಮೊಹಮ್ಮದ್‌ ಫೈಜಲ್‌ ಅವರನ್ನು ಸಂಸತ್ತಿನಿಂದ ಸ್ವಯಂಚಾಲಿತವಾಗಿ ಅನರ್ಹಗೊಳಿಸಲಾಗಿತ್ತು.  ಮೊಹಮ್ಮದ್ ಫೈಜಲ್‌ ಶರದ್ ಪವಾರ್ (Sharad Pawar) ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಸಂಸದರಾಗಿದ್ದರು. ಆದರೆ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಮೊಹಮ್ಮದ್‌ ಫೈಜಲ್‌  ಪ್ರಕರಣಕ್ಕೆ ಜನವರಿಯಲ್ಲಿ ಕೇರಳ ಹೈಕೋರ್ಟ್ ತಡೆ ನೀಡಿತ್ತು. ಆದರೆ ಶಿಕ್ಷೆಯನ್ನು ತಡೆಹಿಡಿದು ಎರಡು ತಿಂಗಳ ನಂತರವೂ ತನ್ನ ಅನರ್ಹತೆಯನ್ನು ಹಿಂಪಡೆಯದ ಲೋಕಸಭೆಯ ಕಾರ್ಯದರ್ಶಿಯ  ಕಾನೂನು ಬಾಹಿರ ಕ್ರಮವನ್ನು (unlawful action) ಫೈಸಲ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು,  ಅವರ ಸದಸ್ಯತ್ವ ಮರುಸ್ಥಾಪನೆಯಾಗಿದೆ. 

ರಾಹುಲ್‌ ಗಾಂಧಿಗೆ ತೀವ್ರ ಹಿನ್ನೆಡೆ: 2 ವರ್ಷ ಜೈಲು ಶಿಕ್ಷೆ ಎತ್ತಿ ಹಿಡಿದ ಸೂರತ್‌ ಕೋರ್ಟ್‌

click me!