
ಬೆಂಗಳೂರು (ಏ.4): ಅದು ಹೇಗಾದರೂ ಮನಸ್ಸು ಬರುತ್ತೋ ದೇವರಿಗೆ ಗೊತ್ತು. ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಂತಿರುವ 400 ಎಕರೆ ಅರಣ್ಯ ಪ್ರದೇಶವನ್ನು ಕ್ಲೀನ್ ಮಾಡಿ ಇದನ್ನು 10 ಸಾವಿರ ಕೋಟಿಗೆ ಹರಾಜು ಮಾಡುವ ತೆಲಂಗಾಣದ ಕಾಂಗ್ರೆಸ್ ಸರ್ಕಾರದ ಪ್ಲ್ಯಾನ್‌ಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅಷ್ಟು ಮಾತ್ರವಲ್ಲದೆ ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಜೈಲಿಗೆ ಹಾಕುವ ಎಚ್ಚರಿಕೆಯನ್ನೂ ನೀಡಿದೆ.
ಕಾಂಚಾ ಗಚ್ಚಿಬೌಲಿ ಅರಣ್ಯ ಪ್ರದೇಶ, ಸುಖಾಸುಮ್ಮನೆ ಗಿಡ-ಗಂಟಿಗಳು ಬೆಳೆದ ಜಾಗವಲ್ಲ. ಇಡೀ ಪ್ರದೇಶದಲ್ಲಿ ಒಂದು ಸರೋವರವಿದೆ. ಅಪರೂಪದ ಪ್ರಾಣಿ ಪಕ್ಷಿಗಳಿಗೆ ಇದು ಅಶ್ರಯತಾಣವಾಗಿದೆ. ನವಿಲು, ಜಿಂಕೆ, ಅಪರೂಪದ ಹಕ್ಕಿಗಳ ಪ್ರಭೇಧಗಳು ಇಲ್ಲಿ ಕಾಣಸಿಕ್ಕುತ್ತವೆ. ಆದರೆ, ಕೆಲ ದಿನಗಳ ಹಿಂದೆ ಏಕಕಾಲದಲ್ಲಿ ನೂರಾರು ಜೆಸಿಬಿಗಳನ್ನು ಈ ಅಪರೂಪದ ಜೀವವೈವಿಧ್ಯದ ತಾಣವಾದ ಅರಣ್ಯಪ್ರದೇಶಕ್ಕೆ ನುಗ್ಗಿಸಿದೆ. ರಾತ್ರೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಈ ಅರಣ್ಯಪ್ರದೇಶದಲ್ಲಿನ ಶೇ.40ರಷ್ಟು ಭಾಗದಲ್ಲಿದ್ದ ಅಪರೂಪರದ ಮರಗಳು, ವರ್ಷಗಳ ಕಾಲ ನೆಲೆನಿಂತಿದ್ದ ವೃಕ್ಷಗಳನ್ನು ಧರಾಶಾಹಿ ಮಾಡಿದೆ.
ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜೆಸಿಬಿಗಳು ಅರಣ್ಯಪ್ರದೇಶದಲ್ಲಿ ಘರ್ಜನೆ ಮಾಡುವ ವೇಳೆ, ಅಲ್ಲಿನ ಪ್ರಾಣಿ-ಪಕ್ಷಿಗಳ ಆರ್ತನಾದವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ತೆಲಂಗಾಣ ಸರ್ಕಾರದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಹೈದರಾಬಾದ್ ವಿವಿಯ ಮಾಜಿ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಅರಣ್ಯ ಪ್ರದೇಶದ ಜೀವವೈವಿಧ್ಯ ಹೇಗಿತ್ತು ಅನ್ನೋದರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಾವು ಕಲಿಯುವಾಗ ಇಲ್ಲಿನ ಪ್ರಾಣಿ-ಪಕ್ಷಿಗಳ ಇಂಚರಗಳನ್ನು ಕೇಳುವುದೇ ವಿಶೇಷ ಅನುಭವವಾಗಿತ್ತು. ಜಿಂಕೆಗಳನ್ನು ನೋಡುತ್ತಲೇ ಇಲ್ಲಿ ವಿದ್ಯಾಭ್ಯಾಸ ಮಾಡಿದ್ದೆವು ಎಂದು ಬರೆದುಕೊಂಡಿದ್ದಾರೆ. ಈಗ ಈ ಎಲ್ಲಾ ಸಂಭ್ರಮಕ್ಕೆ ಏಕಕಾಲದಲ್ಲಿಯೇ ತೆಲಂಗಾಣ ಸರ್ಕಾರ ಇತಿಶ್ರೀ ಹಾಡಿಬಿಟ್ಟಿದೆ.
Telangana: 400 ಎಕರೆ ವಿವಿ ಭೂಮಿಯನ್ನು 10 ಸಾವಿರ ಕೋಟಿಗೆ ಹರಾಜು ಹಾಕಲು ಮುಂದಾದ ಕಾಂಗ್ರೆಸ್ ಸರ್ಕಾರ!
ಇನ್ನೂ ಕೆಲವು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್, ಅರಣ್ಯ ಪ್ರದೇಶವನ್ನು ಖಾಲಿ ಮಾಡುವ ತೆಲಂಗಾಣ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದ ಬಳಿಕ ಜಿಂಕೆಗಳು ಈ ಪ್ರದೇಶಕ್ಕೆ ವಾಪಸಾಗಿದೆ. ಆದರೆ, ತಿನ್ನಲು ಕಾಡಿನಲ್ಲಿ ಏನೂ ಸಿಗದ ಕಾರಣ ಹೈದರಾಬಾದ್ ವಿವಿಯ ವಿದ್ಯಾರ್ಥಿ ವಸತಿ ನಿಲಯಗಳ ಕ್ಯಾಂಪಸ್‌ಗೆ ಬರುತ್ತಿವೆ. ಅಲ್ಲಿನ ಹುಲ್ಲುಹಾಸುಗಳ ಹುಲ್ಲುಗಳನ್ನು ಜಿಂಕೆಗಳು ತಿನ್ನುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಕಾಂಚ ಗಚ್ಚಿಬೌಲಿ ಮರಗಳ ಮಾರಣಹೋಮ; 'ಮುಖ್ಯ ಕಾರ್ಯದರ್ಶಿ ಜೈಲಿಗೆ ಹೋಗ್ತಾನೆ' ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ